More

    ಪುರಸಭೆ ಮಳಿಗೆ ಹರಾಜು ನಡೆಸಿ

    ಬೀರೂರು: ಪುರಸಭೆ ಮುಂಭಾಗದಲ್ಲಿರುವ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಹಾಕಿದರೆ ಆದಾಯ ವೃದ್ಧಿಸುತ್ತದೆ ಎಂದು ಸದಸ್ಯ ಲಕ್ಷ್ಮಣ್ ತಿಳಿಸಿದರು.

    ಗುರುವಾರ ನಡೆದ 2024-25ರ ಸಾಲಿನ ಆಯವ್ಯಯ ಕರಡು ಪ್ರತಿ ತಯಾರಿಕೆ 2ನೇ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ವಾಣಿಜ್ಯ ಮಳಿಗೆಗಳ ಕರಾರು ಅವಧಿ ಮುಗಿದಿದ್ದು, ಹರಾಜು ಪ್ರಕ್ರಿಯೆಗೆ ಅರ್ಹವಾಗಿವೆ. ಮಳಿಗೆ ಬಾಡಿಗೆ ಪಡೆದವರು ನ್ಯಾಯಾಲಯದಿಂದ ಹರಾಜು ನಡೆಸದಂತೆ ತಂದಿದ್ದ ತಡೆಯಾಜ್ಞೆ ತೆರವಾಗಿದೆ. ಆದರೂ ಹರಾಜು ನಡೆಸಲು ಪುರಸಭೆ ಮುಂದಾಗುತ್ತಿಲ್ಲ. ಹರಾಜು ನಡೆದಲ್ಲಿ ಪುರಸಭೆ ಆದಾಯ ಚ್ಚಾಗಲಿದೆ. ಪುರಸಭೆ ಒಡೆತನದ ನಿವೇಶನಗಳಿಗೆ ಯಾವುದೇ ಬಂದೋಬಸ್ತ್ ಇಲ್ಲದೆ ಇರುವುದರಿಂದ ಅತಿಕ್ರಮಿಸಿಕೊಳ್ಳುತ್ತಿದ್ದಾರೆ. ಅಂಥ ನಿವೇಶನಗಳನ್ನು ಗುರುತಿಸಿ ನಾಮಫಲಕ ಅಳವಡಿಸಿ. ಇಲ್ಲವಾದಲ್ಲಿ ಬಹಿರಂಗ ಹರಾಜು ನಡೆಸಿ ಎಂದು ಸಲಹೆ ನೀಡಿದರು.
    ಪುರಸಭೆ ಮುಖ್ಯಾಧಿಕಾರಿ ವಿ.ಡಿ.ಶಾಂತಲಾ ಪ್ರತಿಕ್ರಿಯಿಸಿ, ಮಾರ್ಗದಕ್ಯಾಂಪ್‌ನ ಓವರ್ ಹೆಡ್ ಟ್ಯಾಂಕ್ ಕಾಮಗಾರಿ ಸರ್ಕಾರದ ಹಂತದಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿದೆ. ಪಟ್ಟಣದಲ್ಲಿ ನಿವೇಶನಗಳನ್ನು ಗುರುತಿಸಲು ತಂಡ ರಚನೆ ಮಾಡಿದ್ದು, ಪುರಸಭೆ ನಿವೇಶನಗಳು ಯಾವ್ಯಾವ ವಾರ್ಡ್‌ನಲ್ಲಿವೆ ಎಂಬುದನ್ನು ಪಟ್ಟಿ ಮಾಡಲಾಗುವುದು. ಉಳಿದಂತೆ ಸ್ಮಶಾನ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
    ಸದಸ್ಯರಾದ ಲೋಕೇಶಪ್ಪ, ಬಿ.ಆರ್.ಮೋಹನ್‌ಕುಮಾರ್, ಜಿ.ಗಿರೀಶ್, ಕಂದಾಯ ಅಧಿಕಾರಿ ಲಕ್ಷ್ಮಣ್, ದೀಪಕ್, ಗಿರಿರಾಜ್, ಸಿಬ್ಬಂದಿ ಇದ್ದರು.
    ರಾಜ್ಯ ಮಾದಿಗ ಸಮಾಜದ ಬೀರೂರು ಅಧ್ಯಕ್ಷ ಬಿ.ಎನ್.ಆನಂದ್ ಮಾತನಾಡಿ, ಪುರಸಭೆ ಲಕ್ಷಾಂತರ ರೂಪಾಯಿ ವ್ಯಯಿಸಿ ಅಂಬೇಡ್ಕರ್ ನಗರದ ಪಾರ್ಕ್ ಅಭಿವೃದ್ಧಿಪಡಿಸಿತ್ತು. ಆದರೆ ಪರಿಶಿಷ್ಟರ ಕಾಲನಿಯಲ್ಲಿ ಮನೆ ನಿರ್ಮಿಸುವ ಕಾರ್ಮಿಕರು ಶೆಡ್‌ಗಳನ್ನು ಹಾಕಿಕೊಂಡು ಪಾರ್ಕ್‌ನ್ನು ಹಾಳುಗೆಡವಿದ್ದಾರೆ. ಅಲ್ಲಿಂದ ಅವರನ್ನು ತೆರವುಗೊಳಿಸಬೇಕು. ಪರಿಶಿಷ್ಟರ ಕಾಲನಿಯಲ್ಲಿ ಮನೆಗಳ ನಿರ್ಮಾಣದ ಗುತ್ತಿಗೆದಾರನಿಂದ ನಷ್ಟಕ್ಕೆ ಪರಿಹಾರ ವಸೂಲಿ ಅಥವಾ ಹಾಳುಗೆಡವಿದ್ದನ್ನು ದುರಸ್ತಿ ಮಾಡಿಸಲು ಸೂಚಿಸುವಂತೆ ಪುರಸಭೆ ಅಧಿಕಾರಿಗಳನ್ನು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts