More

  VIDEO| ವೇದಿಕೆ ಮೇಲೆ ನಟಿಗೆ ಮುತ್ತಿಟ್ಟ ನಿರ್ದೇಶಕ; ಕಿಡಿಕಾರಿದ ನೆಟ್ಟಿಗರು

  ಹೈದರಾಬಾದ್​: ಟೀಸರ್​ ರಿಲೀಸ್​ ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕರು ನಾಯಕಿಗೆ ಮುತ್ತಿಟ್ಟಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ನಿರ್ದೇಶಕ ಎ.ಎಸ್​. ರವಿಕುಮಾರ್​ ಚೌಧರಿ ಪ್ರಿಯಾಂಕ ಚೋಪ್ರಾ ಅವರ ಸಹೋದರ ಸಂಬಂಧಿ ಮನ್ನಾರ ಚೋಪ್ರಾ ಅವರಿಗೆ ಮುತ್ತಿಡುವ ಮೂಲಕ ಸುದ್ದಿಯಲ್ಲಿದ್ದಾರೆ.

  Tiragabadara Saami ಚಿತ್ರದ ಟೀಸರ್​ ಬಿಡುಗಡೆ ಕಾರ್ಯಕ್ರಮದಲ್ಲಿ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ನಿರ್ದೇಶಕನ ನಡೆ ಸಾಕಷ್ಟು ಖಂಡನೆಗೆ ಗುರಿಯಾಗಿದೆ.

  ಇದನ್ನೂ ಓದಿ: ಇಸ್ರೋ ವಿಜ್ಞಾನಿ ಕಾರಿಗೆ ಕಲ್ಲೆಸೆತ, ಹಲ್ಲೆಗೆ ಯತ್ನ

  ಚಿತ್ರದ ಟೀಸರ್ ಬಿಡುಗಡೆ ಬಳಿಕ ಕ್ಯಾಮರಾಗಳಿಗೆ ಪೋಸ್​ ನೀಡುತ್ತಿದ್ದ ಮನ್ನಾರ ಚೋಪ್ರಾ ಅವರ ಜೊತೆ ಬಂದು ನಿಲ್ಲುವ ನಿರ್ದೇಶಕ ರವಿ ಏಕಾಏಕಿ ಅವರ ಕೆನ್ನೆಗೆ ಮುತ್ತಿಡುತ್ತಾರೆ. ಈ ವೇಳೆ ನಟಿ ಒಂದು ಕ್ಷಣ ವಿಚಲಿತರಾದಂತೆ ಕಂಡರು ಅದನ್ನು ಅವರು ತೋರಿಸದೆ ಕ್ಯಾಮರಾಗಳಿಗೆ ಪೋಸ್​ ನೀಡುತ್ತಾರೆ. ನಿರ್ದೇಶಕರಾದವರು ವೃತ್ತಿ ಪರಧಿಯ ಎಲ್ಲೆ ಮೀರಬಾರದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

  ಈ ಕುರಿತು ಪ್ರತಿಕ್ರಿಯಿಸಿರುವ ಚಿತ್ರ ವಿಮರ್ಶಕರೊಬ್ಬರು ವೃತ್ತಿಪರ ಕ್ಷೇತ್ರಗಳಲ್ಲಿ ಇಂತಹ ನಡವಳಿಕೆಗೆ ಯಾವುದೇ ಸ್ಥಾನವಿಲ್ಲ. ಚಿತ್ರದ ಪ್ರಮೋಷನ್​ ಸಲುವಾಗಿ ಅಥವಾ ಟೀಸರ್​ ಹೆಚ್ಚು ವೀಕ್ಷಣೆಗೆ ಒಳಪಡಲಿ ಎಂದು ಈ ರೀತಿ ಮಾಡುವುದು ಕೀಳು ಮಟ್ಟದ ಪ್ರಚಾರಕ್ಕೆ ಸಾಕ್ಷಿಯಾಗಿದೆ. ಈ ರೀತಿ ಮಾಡುವುದರಿಂದ ಚಿತ್ರರಂಗದ ಮೇಲಿನ ನಕಾರಾತ್ಮಕ ಭಾವನೆ ಹೆಚ್ಚಾಗುತ್ತಲೇ ಹೋಗುತ್ತದೆ ಎಂದು ಕಿಡಿಕಾರಿದ್ದಾರೆ.

  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts