More

    ಇಸ್ರೋ ವಿಜ್ಞಾನಿ ಕಾರಿಗೆ ಕಲ್ಲೆಸೆತ, ಹಲ್ಲೆಗೆ ಯತ್ನ

    ಬೆಂಗಳೂರು: ದುಷ್ಕರ್ಮಿಗಳ ಗುಂಪೊಂದು ಇಸ್ರೋ ವಿಜ್ಞಾನಿ ಅಶೂತೋಷ್​ ಸಿಂಗ್​ ಅವರ ಕಾರನ್ನು ಹಿಂಬಾಲಿಸಿ ಗಾಜುಗಳನ್ನು ಹೊಡೆದು ಹಾಕಿ ಹಲ್ಲೆಗೆ ಯತ್ನಿಸಿರುವ ಘಟನೆ ಬೆಂಗಳೂರು ನಗರದ ಮಾದನಾಯಕನಹಳ್ಳಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಘಟನೆಯೂ ಆಗಸ್ಟ್​ 24ರ ತಡರಾತ್ರಿ 12:45ರ ಸುಮಾರಿಗೆ ನಡೆದಿದ್ದು, ಬೈಕಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಈ ಕುರಿತು ಸ್ವತಃ ಅಶುತೋಷ್​ ಅವರೇ ಟ್ವಿಟರ್​ನಲ್ಲಿ ಬರೆದುಕೊಂಡಿದ್ದರು.

    ಇದನ್ನೂ ಓದಿ: ನನಗೂ ಏಪ್ರಾನ್, ಸ್ಟೆಥಸ್ಕೋಪ್ ಕುತ್ತಿಗೆಗೆ ಹಾಕಿಕೊಂಡು ಓಡಾಡ್ಬೇಕು ಅನ್ನೋ ಆಸೆ ಇತ್ತು. ಮೆಡಿಕಲ್ ಸೀಟೇ ಸಿಗಲಿಲ್ಲ: ಸಿಎಂ ಸಿದ್ದರಾಮಯ್ಯ

    ಇಸ್ರೋದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ಅಶುತೋಷ್​ ಸಿಂಗ್​ ತಮ್ಮ ಕಾರಿನಲ್ಲಿ ಮಾದನಾಯಕಹಳ್ಳಿ ಪೊಲೋಈಸ್​ ಠಾಣಾ ವ್ಯಾಪ್ತಿಯ ರಾವತ್​ಹಳ್ಳಿ ಮುಖ್ಯರಸ್ತೆಯಲ್ಲಿ ತೆರಳುತ್ತಿದ್ದರು. ಈ ವೇಳೆ ಬೈಕಿನಲ್ಲಿ ನಾಲ್ವರು ದುಷ್ಕರ್ಮಿಗಳು ಅವರನ್ನು ಹಿಂಬಾಲಿಸಲು ಶುರು ಮಾಡಿದ್ದು, ಏಕಾಏಕಿ ಅವರ ಕಾರಿನ ಮೇಲೆ ಕಲ್ಲನ್ನು ಎಸೆಯಲು ಶುರು ಮಾಡಿದ್ಧಾರೆ. ನಂತರ ಕೆಲ ದೂರ ಕಾರನ್ನು ಹಿಂಬಾಲಿಸಿದ ದುಷ್ಕರ್ಮಿಗಳು ಕತ್ತಿಯಿಂದ ಅವರ ಮೇಲೆ ದಾಳಿಗೆ ಯತ್ನಿಸಿದ್ಧಾರೆ.

    ಯಾವ ಕಾರಣಕ್ಕೆ ವಿಜ್ಞಾನಿಯ ಮೇಲೆ ದಾಳಿ ಮಾಡಲಾಯಿತು ಎಂಬ ವಿಚಾರ ಇನ್ನು ಬೆಳಕಿಗೆ ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ಧಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts