More

    ಇನ್ನು ಮುಂದೆ ವಿಮಾನದಲ್ಲೂ ಪ್ರಾರಂಭವಾಗಲಿದೆ “ವಯಸ್ಕರಿಗೆ ಮಾತ್ರ” ವಿಭಾಗ; ಇದರ ವಿಶೇಷತೆಗಳೇನು?

    ನವದೆಹಲಿ: ಕೆಲವು ಸಿನಿಮಾ, ವೆಬ್​ ಸರಣಿ ಹಾಗೂ ಜಾಹೀರಾತುಗಳಲ್ಲಿ ವಯಸ್ಕರಿಗೆ ಮಾತ್ರ ಎಂಬ ಸೂಚನಾ ಪತ್ರವನ್ನು ಮೊದಲಿಗೆ ಪ್ರದರ್ಶಿಸಲಾಗುತ್ತದೆ. ಅದೇ ರೀತಿ ವಿಮಾನದಲ್ಲೂ ವಯಸ್ಕರ ವಿಭಾಗವನ್ನು ಪ್ರಾರಂಭ ಮಾಡುವ ಮೂಲಕ ಏರ್​ಲೈನ್​ ಸಂಸ್ಥೆಯೊಂದು ಪ್ರಯಾಣಿಕರಿಗೆ ಹೊಸ ಆಫರ್​ ನೀಡುತ್ತಿದೆ.

    ಕುಟುಂಬದ ಜೊತೆ ತೆರಳದೆ ಏಕಾಂಗಿಯಾಗಿ ವಿಮಾನದಲ್ಲಿ ಪ್ರಯಾಣಿಸುವವರಿಗೆ ಮಕ್ಕಳು ಅಳುವ ಶಬ್ದ ಸೇರಿದಂತೆ ಅಡಚಣೆಗಳನ್ನು ತೆಗೆದು ಹಾಕಲು ವಯಸ್ಕರಿಗೆ ಮಾತ್ರ ಎನ್ನುವ ಹೊಸ ವಿಭಾಗವನ್ನು ಏರ್​ಲೈನ್​ ಶುರು ಮಾಡುವ ಮೂಲಕ ಸುದ್ದಿಯಲ್ಲಿದೆ.

    ಟರ್ಕಿಶ್​-ಡಚ್​ ಲೀಷರ್​ ಕೊರೆಂಡನ್ ಏರ್‌ಲೈನ್ಸ್ ಈ ರೀತಿಯ ಪ್ರಯೋಗಕ್ಕೆ ಮುಂದಾಗಿದ್ದು, ಮಕ್ಕಳು ಮುಕ್ತ ವಾತಾವರಣವನ್ನು ಬಯಸುವ 16 ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಈ ಯೋಜನೆ ಅನ್ವಯವಾಗಲಿದೆ. ಈ ಯೋಜನೆಯ ಅಡಿಯಲ್ಲಿ ಕೊರೆಂಡನ್ ಏರ್​ಬಸ್​-350ಯಲ್ಲಿ ಕೆಲವು ಆಸನಗಳನ್ನು ಇದಕ್ಕಾಗಿ ಮೀಸಲಿಡಲಾಗುತ್ತಿದೆ.

    Flight

    ಇದನ್ನೂ ಓದಿ: ಅರುಣಾಚಲ ಪ್ರದೇಶ, ಅಕ್ಸಾಯ್​ ಚಿನ್​ ತನ್ನದೆಂದ ಚೀನಾ; ಪ್ರಧಾನಿ ಮೋದಿಗೆ ಚಾಟಿ ಬೀಸಿದ ಕಾಂಗ್ರೆಸ್​

    ನವೆಂಬರ್​ ತಿಂಗಳಿನಿಂದ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಆ್ಯಮ್​ಸ್ಟರ್​​ಡ್ಯಾಂ ಹಾಗೂ ಕುರಾಕೊ ನಡುವೆ ಸಂಚರಿಸುವ ವಿಮಾದಲ್ಲಿ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ. ಪ್ರಯಾಣಿಕರಿಂದ ಪ್ರತಿಕ್ರಿಯೆಯನ್ನು ಗಮನಿಸಿ ಮುಂದಿನ ದಿನಗಳಲ್ಲಿ ಬೇರೆ ವಿಮಾನಗಳಲ್ಲಿಯೂ ಈ ಯೋಜನೆಯನ್ನು ಜಾರಿ ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

    ವಿಮಾನದಲ್ಲಿ ಈ ವಲಯವು ಮಕ್ಕಳ ಕಿರಿಕಿರಿ ಇಲ್ಲದೆ ಪ್ರಯಾಣಿಸುವ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗುತ್ತಿದೆ. ಈ ಯೋಜನೆಯು ಪೋಷಕರ ಮೇಲೂ ಧನಾತ್ಮಕವಾಗಿ ಪರಿಣಾಮ ಬೀರಲಿದ್ದು, ಉತ್ತಮ ಪ್ರತಿಕ್ರಿಯೆ ಪಡೆಯುವ ವಿಶ್ವಾಸವಿದೆ. ಇದಕ್ಕಾಗಿ ವಿಮಾನದಲ್ಲಿ ಪ್ರತ್ಯೇಕವಾದ ಜೋನ್​ ಒಂದನ್ನು ಸಿದ್ದಪಡಿಸಲಾಗುತ್ತಿದೆ. ಈ ಜೋನ್​ನಲ್ಲಿ ಪ್ರಯಾಣಿಸುವವರು ಹೆಚ್ಚುವರಿ ಶುಲ್ಕವನ್ನು ಭರಿಸಬೇಕು ಎಂದು ಸಂಸ್ಥೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts