More

    ಇನ್ನೊಂದು ಹಾಲಿವುಡ್​ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ನಟನೆ

    ಮುಂಬೈ: ಪ್ರಿಯಾಂಕಾ ಚೋಪ್ರಾಗೆ ಹಾಲಿವುಡ್​ ಹೊಸದೇನಲ್ಲ. ಈಗಾಗಲೇ ಅಲ್ಲಿ ಅವರು ಕೆಲವು ಚಿತ್ರಗಳಲ್ಲಿ ನಟಿಸುತ್ತಿರುವುದಷ್ಟೇ ಅಲ್ಲ, ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಇದೀಗ ಅವರು ‘ಟೆಕ್ಸ್ಟ್​​ ಫಾರ್​ ಯೂ’ ಎಂಬ ಇನ್ನೊಂದು ಹೊಸ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ.

    ಇದನ್ನೂ ಓದಿ: ಕಂಗನಾ ಮನೆ ಕೆಡವಲು ಮುಂಬೈ ಪಾಲಿಕೆ ವಕೀಲರಿಗೆ ನೀಡಿದ ಬಂಪರ್ ಮೊತ್ತವಿದು!

    ವಿಶೇಷವೆಂದರೆ, ಐದು ಬಾರಿ ಗ್ರಾಮಿ ಪ್ರಶಸ್ತಿಗಳನ್ನು ಗೆದ್ದಿರುವ ಸೆಲೀನ್​ ಡಿಯೋನ್​ ಈ ಚಿತ್ರದಲ್ಲಿ ನಟಿಸುತ್ತಿರುವುದು. ಸೆಲೀನ್​ ಡಿಯೋನ್​ ಯಾರು ಎಂದು ತಕ್ಷಣಕ್ಕೆ ನೆನಪಾಗದಿದ್ದರೆ, ‘ಟೈಟಾನಿಕ್​’ ಚಿತ್ರದ ಹಾಡನ್ನು ನೆನಪಿಸಿಕೊಳ್ಳಿ. ಆ ಹಾಡನ್ನು ಹಾಡಿದ್ದು ಅದೇ ಸೆಲೀನ್​ ಡಿಯೋನ್​. ಈಗ ಅವರು ಹಾಲಿವುಡ್​ ಚಿತ್ರದಲ್ಲಿ ನಟಿಸುತ್ತಿದ್ದಾರೆ.

    ಅಂದಹಾಗೆ, ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ಜಿಮ್​ ಸ್ಟ್ರೌಸ್​. ಈ ಹಿಂದೆ, ‘ಗ್ರೇಸ್​ ಈಸ್​ ಗಾನ್​’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಜಿಮ್​, ಇದೀಗ ಈ ಚಿತ್ರವನ್ನು ನಿರ್ದೇಶಿಸುವುದಕ್ಕೆ ಸಜ್ಜಾಗಿದ್ದಾರೆ. 2016ರಲ್ಲಿ ಬಿಡುಗಡೆಯಾದ ಒಂದು ಜರ್ಮನ್​ ಚಿತ್ರದಿಂದ ಸ್ಫೂರ್ತಿ ಪಡೆದು ನಿರ್ಮಿಸಲಾಗುತ್ತಿರುವ ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ, ಭಗ್ನಪ್ರೇಮಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಆ ಭಗ್ನಪ್ರೇಮಿಗೆ ಧೈರ್ಯ ತುಂಬುವುದರ ಜತೆಗೆ, ಇನ್ನೊಮ್ಮೆ ಪ್ರೀತಿಸುವುದಕ್ಕೆ ಪ್ರೇರೇಪಿಸುವ ಕೆಲಸವನ್ನು ಈ ಚಿತ್ರದಲ್ಲಿ ಸೆಲೀನ್​ ಡಿಯೋನ್​ ಮಾಡುತ್ತಾರಂತೆ.

    ಇದನ್ನೂ ಓದಿ: ಚಿತ್ರ ಹೇಗಿರುತ್ತದೆ ಎಂದು ಪರಿಚಯಿಸುವುದಕ್ಕೆ 25 ನಿಮಿಷಗಳ ಶೋರೀಲ್​!

    ಸದ್ಯ ಬರ್ಲಿನ್​ನಲ್ಲಿ ‘ಮ್ಯಾಟ್ರಿಕ್ಸ್​ 4’ ಚಿತ್ರೀಕರಣದಲ್ಲಿ ಭಾಗವಹಿಸಿರುವ ಪ್ರಿಯಾಂಕಾ, ಈ ಚಿತ್ರದ ಚಿತ್ರೀಕರಣವನ್ನು ಮುಗಿಸಿ, ಮುಂದಿನ ವರ್ಷದ ಆರಂಭದಿಂದ ‘ಟೆಕ್ಸ್ಟ್​ ಫಾರ್​ ಯೂ’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

    ದಸರಾ ಹಬ್ಬದಂದು ನಟಿ ಕಾಜಲ್​ ಧರಿಸಿದ್ದ ದಿರಿಸಿನ ಬೆಲೆ ಕೇಳಿದ್ರೆ ದಂಗಾಗ್ತೀರಾ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts