More

  ಭಾರತದ ದುಬಾರಿ ನಟಿ; 40 ಕೋಟಿ ರೂ. ಸಂಭಾವನೆ ಪಡೆಯುವ ಪ್ರಿಯಾಂಕಾ

  ಬಾಲಿವುಡ್ ಭಾರತದ ಶ್ರೀಮಂತ ಚಿತ್ರರಂಗ ಎಂದರೆ ತಪ್ಪಲ್ಲ. ಉಳಿದೆಲ್ಲ ಚಿತ್ರರಂಗಗಳಿಗೆ ಹೋಲಿಸಿದರೆ ಇಲ್ಲಿನ ನಟ, ನಟಿಯರಿಗೆ ಸಂಭಾವನೆ ಹೆಚ್ಚು. ಸಾಮಾನ್ಯವಾಗಿ ನಟಿಯರ ಸಂಭಾವನೆ ನಟರಿಗಿಂತ ಕಡಿಮೆ ಇರುತ್ತದೆ. ಆದರೆ, ಈಗ ಕಾಲ ಬದಲಾದಂತೆ ನಟ, ನಟಿಯರ ಸಂಭಾವನೆಯಲ್ಲೂ ಸಮಾನತೆ ಉಂಟಾಗುತ್ತಿದೆ. ಹೀಗಾಗಿ ನಟಿಯರು ಕೂಡ ಸಾಕಷ್ಟು ಗಳಿಕೆ ಮಾಡುತ್ತಿದ್ದಾರೆ.

  ದೀಪಿಕಾ ಪಡುಕೊಣೆ, ಆಲಿಯಾ ಭಟ್, ಪ್ರಿಯಾಂಕ ಚೋಪ್ರಾ ಸೇರಿದಂತೆ ಹಲವರು ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಸಿದ್ಧಿ ಹೊಂದಿದ್ದಾರೆ. ಇಂದಿನ ನಟಿಯರೂ ಬರೋಬ್ಬರಿ 40 ಕೋಟಿ ರೂ.ವರೆಗೂ ಸಂಭಾವನೆ ಪಡೆಯುತ್ತಿದ್ದಾರೆ. ಮೂಲಗಳ ಪ್ರಕಾರ ಹಾಲಿವುಡ್‌ನಲ್ಲೂ ಮಿಂಚುತ್ತಿರುವ ಪ್ರಿಯಾಂಕ ಚೋಪ್ರಾ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತದ ತಾರೆ. ಅವರು ಪ್ರತಿ ಚಿತ್ರಕ್ಕೆ 15 ಕೊಟಿ.ರೂ ಇಂದ ಹಿಡಿದು 40ಕೋಟಿ ರೂ.ವರೆಗೂ ಸಂಭಾವನೆ ಪಡೆದು ನಂಬರ್ 1 ಸ್ಥಾನದಲ್ಲಿದ್ದಾರೆ.

  ದೀಪಿಕಾ ಪ್ರತಿ ಚಿತ್ರಕ್ಕೆ ಸುಮಾರು 30ಕೋಟಿ ರೂ. ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಕನಿಷ್ಠ 15 ಕೋಟಿ ರೂ. ಹಾಗೂ 27 ಕೋಟಿ ರೂ.ವರೆಗೂ ಸಂಭಾವನೆ ಪಡೆಯುವ ಕಂಗನಾ ಮೂರನೇ ಸ್ಥಾನದಲ್ಲಿದ್ದರೆ, ಕತ್ರಿನಾ 15ರಿಂದ 21 ಕೋಟಿ ರೂ., ಆಲಿಯಾ ಭಟ್ ಸುಮಾರು 20 ಕೋಟಿ ರೂ., ಅನುಷ್ಕಾ ಶರ್ಮಾ 8-12 ಕೋಟಿ ರೂ. ಹಾಗೂ ಸ್ಟಾರ್ ಕಲಾವಿದೆ ಐಶ್ವರ್ಯಾ ರೈ ಬಚ್ಚನ್‌ಗೆ 10 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. (ಏಜೆನ್ಸೀಸ್)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts