More

    ಆಯುರ್ವೇದ, ಹೋಮಿಯೋಪಥಿ ಮೂಲಕ ಕರೊನಾ ಸೋಂಕು ಗೆದ್ದ ಬ್ರಿಟನ್​ ರಾಜ, ಬೆಂಗಳೂರಿನಿಂದ ಚಿಕಿತ್ಸೆ

    ಲಂಡನ್​: ಮಾರಕ ಕರೊನಾ ವೈರಸ್​ ಸೋಂಕಿಗೆ ಔಷಧ ಕಂಡುಹಿಡಿಯಲು ವಿಶ್ವದ ಎಲ್ಲ ಪ್ರಯೋಗಾಲಯಗಳಲ್ಲಿ ಪ್ರಯೋಗಗಳು ಭರದಿಂದ ಸಾಗುತ್ತಿವೆ. ಇಂಥ ಸಂದರ್ಭದಲ್ಲೇ ಆಯುರ್ವೇದ ಮತ್ತು ಹೋಮಿಯೋಪಥಿ ಚಿಕಿತ್ಸೆ ಪಡೆಯುವ ಮೂಲಕ ಬ್ರಿಟನ್​ನ ರಾಜ ಚಾರ್ಲ್ಸ್​ ಕರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಬೆಂಗಳೂರು ಮೂಲದ ವೈದ್ಯರು ಬೆಂಗಳೂರಿನಿಂದಲೇ ಈ ಚಿಕಿತ್ಸೆ ನೀಡಿದ್ದಾರೆ ಎಂಬುದು ಕರ್ನಾಟಕದ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ.

    ಕೇಂದ್ರದ ಆಯುಷ್​ನ ರಾಜ್ಯ ಸಚಿವ ಶ್ರೀಪಾದ್​ ನಾಯಕ್​ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸೌಖ್ಯ ಎಂಬ ಆಯುರ್ವೇದ ರೆಸಾಟ್​ ನಡೆಸುತ್ತಿರುವ ಡಾ. ಐಸಾಕ್​ ಮಥಾಯ್​ ಈ ವಿಷಯವನ್ನು ತಮಗೆ ತಿಳಿಸಿದ್ದಾಗಿ ಶ್ರೀಪಾದ್​ ನಾಯಕ್​ ಗುರುವಾರ ಹೇಳಿದ್ದಾರೆ.

    ಬ್ರಿಟನ್​ನ 71 ವರ್ಷ ವಯಸ್ಸಿನ ರಾಜ ಚಾರ್ಲ್ಸ್​ ಅವರಲ್ಲಿ ಕೆಲದಿನಗಳ ಹಿಂದೆ ಕರೊನಾ ವೈರಸ್​ ಸೋಂಕಿನ ಲಕ್ಷಣ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಕಾಟ್​ಲೆಂಡ್​ನಲ್ಲಿ ಸ್ವತಃ ಕ್ವಾರಂಟೈನ್​ಗೆ ಒಳಗಾಗಿದ್ದರು. ಇವರ ಪತ್ನಿ ಕ್ಯಾಮೆಲಾ ಅವರನ್ನು ಕೂಡ ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. ಆದರೆ, ಇವರಲ್ಲಿ ಸೋಂಕು ಕಂಡುಬಂದಿರಲಿಲ್ಲ. ಆದರೆ ರಾಜ ಚಾರ್ಲ್ಸ್​ ಅವರಿಗೆ ಕರೊನಾ ವೈರಸ್​ ಸೋಂಕು ತಗುಲಿರುವುದು ಖಚಿತಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನಿಂದ ಆಯುರ್ವೇದ ಮತ್ತು ಹೋಮಿಯೋಪಥಿ ಚಿಕಿತ್ಸೆ ಪಡೆದುಕೊಂಡರು ಎನ್ನಲಾಗಿದೆ.

    ಇದೀಗ ರಾಜ ಚಾರ್ಲ್ಸ್​ ಅವರಿಗೆ ಕೊಟ್ಟಿರುವ ಚಿಕಿತ್ಸೆಯ ವಿವರವನ್ನು ಡಾ. ಐಸಾಕ್​ ಮಥಾಯ್​ ಅವರಿಂದ ಪಡೆದುಕೊಳ್ಳಲಾಗುತ್ತಿದೆ. ಈ ಚಿಕಿತ್ಸೆಯ ಕುರಿತು ಸಮಗ್ರ ಅಧ್ಯಯನ ನಡೆಸಿ ವರದಿ ನೀಡಲು ಕಾರ್ಯಪಡೆಯನ್ನು ರಚಿಸಲಾಗಿದೆ ಎಂದು ಶ್ರೀಪಾದ್​ ನಾಯಕ್​ ತಿಳಿಸಿದ್ದಾರೆ.

    ಪಾಲಿಸಿದಾರರಿಗೆ ಬಿಗ್‌ ರಿಲೀಫ್‌: ಪಾವತಿಯ ಅವಧಿ ಏ.21ರವರೆಗೆ ವಿಸ್ತರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts