More

    ಪಾಲಿಸಿದಾರರಿಗೆ ಬಿಗ್‌ ರಿಲೀಫ್‌: ಪಾವತಿಯ ಅವಧಿ ಏ.21ರವರೆಗೆ ವಿಸ್ತರಣೆ

    ನವದೆಹಲಿ: ಆರೋಗ್ಯ ವಿಮೆ ಮತ್ತು ಥರ್ಡ್‌ ಪಾರ್ಟಿ ಮೋಟಾರ್ ವಾಹನ ವಿಮೆಗಳ ಪ್ರೀಮಿಯಂ ಪಾವತಿಯ ಅವಧಿಯನ್ನು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಏಪ್ರಿಲ್‌ 21ರವರೆಗೂ ವಿಸ್ತರಿಸಿದೆ. ದಂಡ ರಹಿತವಾಗಿ ಈ ಅವಧಿಯೊಳಗೆ ಪಾಲಿಸಿದಾರರು ಪಾಲಿಸಿ ಮೊತ್ತವನ್ನು ನೀಡಲು ಅವಕಾಶ ನೀಡಿದೆ. ಈ ಮೂಲಕ ಹಣ ಪಾವತಿಯ ಕುರಿತು ಚಿಂತೆಗೊಳಗಾಗಿದ್ದ ಪಾಲಿಸಿದಾರರಿಗೆ ಬಿಗ್‌ ರಿಲೀಫ್‌ ಸಿಕ್ಕಂತಾಗಿದೆ.

    ಮಾರ್ಚ್‌ 25ರಿಂದ ಏಪ್ರಿಲ್‌ 14ರ ಒಳಗೆ ಪಾವತಿ ಮಾಡಬೇಕಿರುವ ಥರ್ಡ್‌ ಪಾರ್ಟಿ ಆರೋಗ್ಯ ವಿಮೆ ಮತ್ತು ಮೋಟಾರ್‌ ವಾಹನ ವಿಮೆಗಳ ಮೊತ್ತಕ್ಕೆ ಇದು ಅನ್ವಯ ಆಗಲಿದೆ.

    ವಿಮಾ ಕಾಯ್ದೆ 1939ರ ಸೆಕ್ಷನ್‌ 64ವಿಬಿಯ ಪ್ರಕಾರ, ನಿಗದಿತ ಅವಧಿಯೊಳಗೆ ವಿಮಾ ಹಣವನ್ನು ಪಾವತಿ ಮಾಡದಿದ್ದರೆ ಅಂಥ ಪಾಲಿಸಿದಾರರಿಗೆ ವಿಮಾ ಮೊತ್ತ ಸಿಗುವುದಿಲ್ಲ. ಆದರೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಈ ತಿಂಗಳ ಪಾಲಿಸಿಯ ಮೊತ್ತವನ್ನು ಪಾವತಿ ಮಾಡಲು ಸಾಧ್ಯವಾಗದೇ ಪಾಲಿಸಿದಾರರು ಗೊಂದಲಕ್ಕೆ ಒಳಗಾಗಿದ್ದರು. ಅವರಲ್ಲಿ ಪಾಲಿಸಿ ಮೊತ್ತ ಕಳೆದುಕೊಳ್ಳುವ ಆತಂಕ ಉಂಟಾಗಿತ್ತು. ಅಂಥವರಿಗೆ ಸರ್ಕಾರ ಈಗ ಖುಷಿಯ ಸುದ್ದಿ ನೀಡಿದೆ.

    ಮಾರ್ಚ್‌ 25ರಿಂದ ಏಪ್ರಿಲ್‌ 14ರ ವರೆಗೂ ಪಾವತಿಯಾಗಬೇಕಾದ ಯಾವುದೇ ಆರೋಗ್ಯ ಹಾಗೂ ಆಟೊ ವಿಮೆ ಪಾಲಿಸಿ ಸ್ಥಗಿತಗೊಳ್ಳುವುದಿಲ್ಲ. ಲಾಕ್‌ಡೌನ್‌ ಸಮಯದಲ್ಲಿ ಪ್ರೀಮಿಯಂ ಪಾವತಿಸಲು ಪಾವತೀದಾರರಿಗೆ ಸಾಧ್ಯವಾಗದಿದ್ದರೆ, ಅವರು ಆತಂಕ ಪಡುವ ಅಗತ್ಯವಿಲ್ಲ. ಏಪ್ರಿಲ್‌ 21ರ ವರೆಗೂ ಪಾವತಿಗೆ ಅವಕಾಶ ನೀಡಲಾಗಿದೆ ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಕುರಿತಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೂಡ ಟ್ವೀಟ್‌ ಮಾಡುವ ಮೂಲಕ ಪಾಲಿಸಿದಾರರು ಆತಂಕ ಪಡುವ ಅಗತ್ಯವಿಲ್ಲ. ಪಾಲಿಸಿದಾರರು ಯಾವುದೇ ಕಾರಣಕ್ಕೆ ತಮ್ಮ ಪಾಲಿಸಿಯನ್ನು ಕಳೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

    ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಹಾಗೂ ಪ್ಯಾನ್‌ ಕಾರ್ಡ್‌- ಆಧಾರ್‌ ಸಂಪರ್ಕ ಮಾಡುವ ಅವಧಿಯನ್ನು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜೂನ್‌ 30ರವರೆಗೆ ಹಾಗೂ ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಕೆ ಅವಕಾಶವನ್ನು ಜೂನ್‌ 30ರ ಒಳಗೆ ಈಗಾಗಲೇ ಕೇಂದ್ರ ಸರ್ಕಾರ ವಿಸ್ತರಿಸಿದೆ.

    ನಿಮ್ಮ ಸಮೀಪದಲ್ಲಿರೋ ಕರೊನಾ ಸೋಂಕಿತನ ಬಗ್ಗೆ ಎಚ್ಚರಿಸಲಿದೆ ಕೇಂದ್ರ ಸರ್ಕಾರದ ನೂತನ ‘ಆರೋಗ್ಯ ಸೇತು’ ಆ್ಯಪ್​!

    ಲಾಕ್​ಡೌನ್​ನಿಂದ ಬಡವರಿಗೆ ತೀವ್ರ ಸಂಕಷ್ಟಕ್ಕೆ ಪ್ರಧಾನಿ ಮೋದಿ ಸ್ಪಂದನೆ, ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts