More

    ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್​ 2023: ಹೊಸ ತಂತ್ರಜ್ಞಾನದ ಬಗ್ಗೆ ಎಚ್ಚರವಿರಲಿ, ಪ್ರಧಾನಿ ಮೋದಿ ಸಲಹೆ

    ನವದೆಹಲಿ: ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯಗಳು ಮತ್ತು ಸಂಕೀರ್ಣ ಸವಾಲುಗಳನ್ನು ಎದುರಿಸುವಲ್ಲಿ ಯುವ ನವೋದ್ಯಮಿಗಳ ಜಾಣ್ಮೆ ಗಮನಾರ್ಹವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೊಗಳಿದರು.

    ಇಂದು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-2023ರ ಗ್ರ್ಯಾಂಡ್ ಫಿನಾಲೆಯಲ್ಲಿ ಯುವ ನವೋದ್ಯಮಿಗಳ ಜತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಂವಹನ ನಡೆಸುವ ಮೂಲಕ ಪ್ರೋತ್ಸಾಹಿಸಿದರು.

    ನಾನು ಬೆಳಿಗ್ಗೆಯಿಂದ ನಿಮ್ಮೆಲ್ಲರ ಜೊತೆ ಮಾತನಾಡಲು ಕಾಯುತ್ತಿದ್ದೆ. ಬೆಳಗ್ಗೆಯೇ ನಿಮ್ಮ ಬಗ್ಗೆ ನಾನು ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡೆ. ನೀವೆಲ್ಲರೂ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ನಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದೀರಿ, ಅದೇ ರೀತಿ ನಾನು ಕೂಡ ಕಲಿಯುವ ಅವಕಾಶವನ್ನು ಪಡೆದಿದ್ದೇನೆ. ಈ ಕಾರಣಕ್ಕಾಗಿ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಇದ್ದಾಗಲೆಲ್ಲ ನಾನು ನಿಮ್ಮೊಂದಿಗೆ ಸಂವಹನ ನಡೆಸಲು ಪ್ರಯತ್ನಿಸುತ್ತೇನೆ ಎಂದು ಮೋದಿ ಹೇಳಿದರು.

    ಹ್ಯಾಕಥಾನ್​ ತಂಡವು ರೈಲ್ವೇ ಕಾರ್ಗೋಗಾಗಿ IoT (ಇಂಟರ್ನೆಟ್​ ಆಫ್​ ಥಿಂಗ್ಸ್​) ಆಧಾರಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದೆ ಮತ್ತು ತಂಡದಲ್ಲಿ ಬಾಂಗ್ಲಾದೇಶದ ವಿದ್ಯಾರ್ಥಿಗಳೂ ಇದ್ದಾರೆ ಎಂದು ನನಗೆ ತಿಳಿಸಲಾಯಿತು. ಭಾರತೀಯ ರೈಲ್ವೇ ತನ್ನ ಬದಲಾವಣೆ ಪಥದಲ್ಲಿ ಸಾಗುತ್ತಿದೆ. ಕೇಂದ್ರ ಸರ್ಕಾರ ಇದಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ನಮ್ಮ ಗಮನವೂ ಪ್ರಮುಖವಾಗಿ ಲಾಜಿಸ್ಟಿಕ್ಸ್ ಮೇಲೆ ಕೇಂದ್ರೀಕೃತವಾಗಿದ್ದು, ನಿಮ್ಮ ಆವಿಷ್ಕಾರವು ಉತ್ತಮ ಸಹಾಯ ಮಾಡುತ್ತದೆ. ನಿಮ್ಮ ತಂಡದಲ್ಲಿ ಬಾಂಗ್ಲಾದೇಶದ ವಿದ್ಯಾರ್ಥಿಗಳನ್ನು ನೋಡಿ ನನಗೆ ಸಂತೋಷವಾಯಿತು. ವಿದೇಶದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಭಾರತಕ್ಕೆ ಬರಲು ನಾವು ‘ಸ್ಟಡಿ ಇನ್ ಇಂಡಿಯಾ’ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

    ಚಂದ್ರಯಾನ-3 ರ ಸಾಧನೆಯಿಂದಾಗಿ ಭಾರತವು ಚಂದ್ರನ ಮೇಲೆ ಇಳಿಯಬಹುದು ಎಂಬುದು ಸಾಬೀತಾಗಿದೆ. ಈ ಒಂದು ಸಾಧನೆಯು ಜಗತ್ತಿನಾದ್ಯಂತ ಭಾರತದ ಮೇಲಿನ ಗ್ರಹಿಕೆಯನ್ನೇ ಬದಲಿಸಿದೆ. ಮುಂಬರುವ ದಶಕವು ಬಾಹ್ಯಾಕಾಶ-ತಂತ್ರಜ್ಞಾನದ ಆರ್ಥಿಕತೆಗೆ ಅತ್ಯಗತ್ಯವಾಗಿದೆ ಎಂದರು.

    ಬಹಳ ಎಚ್ಚರದಿಂದಿರಬೇಕು
    ಕೃತಕ ಬುದ್ಧಿಮತ್ತೆ ಎಂಬುದು ಇಂದು ಬಹಳ ಕ್ರಿಯಾತ್ಮಕ ಸಮಸ್ಯೆಯಾಗಿದೆ. ಒಂದು ಪರಿಹಾರವನ್ನು ಕಂಡುಹಿಡಿದರೆ ಕಿಡಿಗೇಡಿಗಳು ಇನ್ನೊಂದು ದಾರಿ ಹುಡುಕಿಕೊಳ್ಳುತ್ತಾರೆ. ಯಾವುದೇ ಹೊಸ ತಂತ್ರಜ್ಞಾನದ ಬಗ್ಗೆ ನಾವು ಬಹಳ ಎಚ್ಚರದಿಂದಿರಬೇಕು. ನಿಯಮದ ಚೌಕಟ್ಟಿನ ಒಳಗೆ ಬಳಸಿದರೆ ಅದು ತುಂಬಾ ಉಪಯುಕ್ತವಾಗಬಹುದು, ಆದರೆ ತಪ್ಪು ರೀತಿಯಲ್ಲಿ ಬಳಸಿದರೆ, ಬಹಳಷ್ಟು ಸಮಸ್ಯೆಗಳನ್ನು ಉಂಟುಮಾಡಬಹುದು. ಡೀಪ್​ ಫೇಕ್ ವೀಡಿಯೋಗಳು ಸಂಪೂರ್ಣವಾಗಿ ನೈಜವಾಗಿ ಕಾಣುತ್ತವೆ. ಆದ್ದರಿಂದ ಯಾವುದೇ ಫೋಟೋ ಅಥವಾ ವಿಡಿಯೋವನ್ನು ನಂಬುವ ಮುನ್ನ ನಾವು ಹೆಚ್ಚು ಜಾಗರೂಕರಾಗಿರಬೇಕು. ಭಾರತವು ಕೃತಕ ಬುದ್ಧಿಮತ್ತೆಗಾಗಿ ಜಾಗತಿಕ ಚೌಕಟ್ಟನ್ನು ರಚಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

    ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಶಿಕ್ಷಣ ಸಚಿವಾಲಯದ ಇನ್ನೋವೇಶನ್ ಸೆಲ್​ನ ರಾಷ್ಟ್ರವ್ಯಾಪಿ ಉಪಕ್ರಮವಾಗಿದ್ದು, ಸರ್ಕಾರ, ಸಚಿವಾಲಯಗಳು, ಇಲಾಖೆಗಳು, ಕೈಗಾರಿಕೆಗಳು ಮತ್ತು ಇತರ ಸಂಸ್ಥೆಗಳ ಸಮಸ್ಯೆಗಳನ್ನು ಪರಿಹರಿಸಲು ವಿದ್ಯಾರ್ಥಿಗಳಿಗೆ ವೇದಿಕೆಯನ್ನು ಒದಗಿಸುತ್ತದೆ. (ಏಜೆನ್ಸೀಸ್​)

    ಕೊರೆಯುವ ಚಳಿಯಲ್ಲಿ ಆರೋಗ್ಯದ ಮೇಲಿರಲಿ ಗಮನ: ಇಲ್ಲಿವೆ ನಾಲ್ಕು ಉಪಯುಕ್ತ ಸಲಹೆಗಳು…

    ಅಧಿಕ ಲಾಭಾಂಶ ಆಮಿಷವೊಡ್ಡಿ 700 ಜನರಿಗೆ 25 ಕೋಟಿ ವಂಚನೆ; ಇಬ್ಬರು ಮೋಸಗಾರರ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts