More

    ಕರೊನಾ, ಒಕ್ಕೂಟದ ಸಹಕಾರಕ್ಕೆ ಉತ್ತಮ ನಿದರ್ಶನ

    ನವದೆಹಲಿ: ಮಹಾಮಾರಿ ಕರೊನಾ ವೈರಸ್ ವಿರುದ್ಧ ನಡೆಯುತ್ತಿರುವ ಹೋರಾಟ ದೇಶದ ಒಕ್ಕೂಟ ವ್ಯವಸ್ಥೆಯ ಸಹಕಾರಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರು.

    ಮುಂದೊಂದು ದಿನ ಕರೊನಾ ವೈರಸ್ ವಿರುದ್ಧ ಭಾರತ ನಡೆಸಿದ ಹೋರಾಟದ ಬಗ್ಗೆ ವಿಶ್ಲೇಷಿಸಿದಾಗ, ನಾವು ಹೇಗೆ ಒಂದಾಗಿ ಕೆಲಸ ಮಾಡಿದೆವು ಎಂದು ಈ ದಿನಗಳನ್ನು ನೆನೆಯಲಾಗುತ್ತದೆ.ನಿಸ್ಸಂಶಯವಾಗಿಯೂ ಇದು ಒಕ್ಕೂಟ ತತ್ವದ ಸಹಕಾರದ ಉತ್ತಮ ದೃಷ್ಟಾಂತವಾಗಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

    ಕೋವಿಡ್-19 ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಪರಿಶೀಲನೆಗೆ ಹಾಗೂ ಕರೊನಾ-ವಿರೋಧಿ ಹೋರಾಟದ ಇದುವರೆಗಿನ ಅನುಭವ, ಎದುರಿಸುತ್ತಿರುವ ಸಮಸ್ಯೆ ವಿವರ ಪಡೆಯಲು ಮುಖ್ಯಮಂತ್ರಿಗಳ ಜತೆಗೆ ಮೋದಿ ಮಂಗಳವಾರ ವಿಡಿಯೋ ಕಾನ್ಪರೆನ್ಸ್ ಸಭೆ ನಡೆಸಿದರು. ಈ ಸಭೆಯಲ್ಲಿ ಸೋಂಕು ಕಡಿಮೆ ಇರುವ 21 ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು. ಸೋಂಕು ಅತಿಯಾಗಿರುವ 15 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮೋದಿ ಬುಧವಾರ ಚರ್ಚಿಸುವರು.

    ಅನ್​ಲಾಕ್ ಭಾಗ ಒಂದರ ಮೂಲಕ ನಾವು ಸಹಜ ಸ್ಥಿತಿಗೆ ಮರಳುತ್ತಿದ್ದೇವೆ. ಎಲ್ಲ ಮುಂಜಾಗ್ರತೆ ಕ್ರಮಗಳನ್ನು ನಾವು ಅನುಸರಿಸಿದರೆ ಕರೊನಾ ವಿರುದ್ಧದ ಹೋರಾಟವನ್ನು ಕನಿಷ್ಠ ಹಾನಿಯೊಂದಿಗೆ ಗೆಲ್ಲಬಹುದಾಗಿದೆ. ಮಾಸ್ಕ್ ಧರಿಸದೆ ಹೊರ ಹೋಗುವುದನ್ನು ಕಲ್ಪಿಸಿಕೊಳ್ಳಲೂ ಆಗದು. ಸಾಮಾಜಿಕ ಅಂತರ ನಿಯಮಗಳನ್ನು ಕಾಪಾಡಬೇಕು. ನಿಯಮಿತವಾಗಿ ಕನಿಷ್ಠ 20 ಸೆಕೆಂಡ್ ಕಾಲ ಕೈ ತೊಳೆದುಕೊಳ್ಳುತ್ತಿರಬೇಕು.
    | ನರೇಂದ್ರ ಮೋದಿ ಪ್ರಧಾನ ಮಂತ್ರಿ

    ಲಾಕ್​ಡೌನ್ ಮಾದರಿ: ಭಾರತ ಲಾಕ್​ಡೌನ್ ಅನುಷ್ಠಾನಗೊಳಿಸಿದ ವಿಧಾನ ಹಾಗೂ ಭಾರತೀಯರು ಈ ಅವಧಿಯಲ್ಲಿ ತೋರಿಸಿದ ಶಿಸ್ತಿನ ಬಗ್ಗೆ ಜಗತ್ತಿನ ಪ್ರಸಿದ್ಧ ತಜ್ಞರು ರ್ಚಚಿಸುತ್ತಿದ್ದಾರೆ. ಭಾರತದಲ್ಲಿ ಗುಣಮುಖತೆ ದರ ಶೇಕಡಾ 50ಕ್ಕಿಂತ ಹೆಚ್ಚಾಗಿದೆ. ಕರೊನಾ-ಬಾಧಿತ ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡುತ್ತಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ಹಲವು ರಾಜ್ಯಗಳ ಅನುಭವ ಸ್ಪೂರ್ತಿದಾಯಕವಾಗಿದೆ ಎಂದು ಮೋದಿ ಹೇಳಿದರು. ದೇಶದ ಜನಸಂಖ್ಯೆ ಅಪಾರವಿದ್ದರೂ ಕಡಿಮೆ ಸಾವು ಹಾಗೂ ಹೆಚ್ಚಿನ ಗುಣಮುಖ ಪ್ರಮಾಣ ಜಗತ್ತಿನ ಚರ್ಚೆಯ ವಿಷಯವಾಗಿದೆ. ಪ್ರತಿ ಭಾರತೀಯರ ಪ್ರಾಣ ಉಳಿಸಲು ನಾವು ಹಗಲೂ-ರಾತ್ರಿ ಶ್ರಮಿಸಿದ್ದೇವೆ ಎಂದರು.

    ಸುಧಾರಣೆಯ ಹಾದಿಯಲ್ಲಿ: ದೇಶ ಇದೀಗ ಆರ್ಥಿಕ ಸುಧಾರಣೆಯ ಹಾದಿಯಲ್ಲಿದೆಯೆಂಬುದನ್ನು ಅನೇಕ ಅಂಶಗಳು ದೃಢಪಡಿಸುತ್ತಿವೆ. ವಿದ್ಯುತ್ ಬಳಕೆ ಪ್ರಮಾಣ ಕಳೆದ ಕೆಲವು ದಿನಗಳಿಂದ ಹೆಚ್ಚಾಗುತ್ತಿದೆ. ರಸಗೊಬ್ಬರ ಖರೀದಿ ನಾಟಕೀಯ ರೀತಿಯಲ್ಲಿ ಏರಿಕೆಯಾಗಿದೆ. ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಏರಿಕೆಯಾಗಿದೆ. ರಫ್ತು, ಕೋವಿಡ್-19 ಪೂರ್ವ ಮಟ್ಟ ತಲುಪುತ್ತಿದೆ ಎಂದು ವಿವರಿಸಿದರು. ಸಣ್ಣ ಕಾರ್ಖಾನೆಗಳಿಗೆ ಮಾರ್ಗದರ್ಶನ ಮತ್ತು ಸೂಕ್ತ ನೆರವಿನ ಅಗತ್ಯವಿದೆ ಎಂದರು.

    ಭಾಗವಹಿಸಿದ್ದ ಪ್ರಮುಖರು: ಮಂಗಳವಾರ ನಡೆದ ಮೊದಲ ಸುತ್ತಿನ ಸಭೆಯಲ್ಲಿ ಪಂಜಾಬ್ (ಅಮರಿಂದರ್ ಸಿಂಗ್) ತ್ರಿಪುರಾ (ವಿಪ್ಲವ್ ಕುಮಾರ್ ದೇವ್), ಗೋವಾ (ಪ್ರಮೋದ್ ಸಾವಂತ್) ಮೊದಲಾದ 20 ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಭಾಗವಹಿಸಿದ್ದರು.

    ಇದನ್ನೂ ಓದಿ: ಕೋವಿಡ್ ಕಂಟಕ: ಐದನೆಯ ಆರ್ಥಿಕ ಹಿಂಜರಿತ ಎದುರಿಸುತ್ತಿದೆ ಭಾರತ

    ಶೇ. 90 ಕೈಗಾರಿಕೆಗಳು ಪುನರಾರಂಭ
    ಲಾಕ್​ಡೌನ್ ಸಡಿಲಿಕೆ ಹಿನ್ನೆಲೆ ಉತ್ತರಾಖಂಡದ ಶೇ. 90 ಕೈಗಾರಿಕಾ ಘಟಕಗಳು ಉತ್ಪಾದನೆ ಪುನರಾರಂಭಿಸಿವೆ ಎಂದು ರಾಜ್ಯದ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಪ್ರಧಾನಿಯವರ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ 300 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳ ಕಾರ್ಯವನ್ನು ಪುನರಾರಂಭಿಸಲಾಗಿದೆ. ಬೇರೆ ರಾಜ್ಯಗಳಿಂದ ಮರಳಿರುವ ಯುವಕರಿಗೆ ಇಲ್ಲಿಯೇ ಕೆಲಸ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸ್ವರೋಜ್​ಗಾರ್ ಯೋಜನೆಯನ್ನು ಆರಂಭಿಸಲಾಗಿದೆ. ಅದಕ್ಕೆಂದು 110 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. 23 ಸಾವಿರಕ್ಕೂ ಅಧಿಕ ಮಂದಿ ನೂತನವಾಗಿ ನರೇಗಾ ಯೋಜನೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಗೋವಾದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ 2018ರಿಂದ ಸ್ಥಗಿತಗೊಂಡಿರುವ ಕಬ್ಬಿಣದ ಅದಿರು ಗಣಿಯನ್ನು ಪುನರಾರಂಭ ಮಾಡುವುದಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬೇಡಿಕೆಯನ್ನಿಟ್ಟಿದ್ದಾರೆ. ಗಣಿ ಪುನರಾರಂಭದಿಂದ ಆರ್ಥಿಕ ಬಿಕ್ಕಟ್ಟು ಕೊಂಚ ಸುಧಾರಿಸುವುದಾಗಿ ಅವರು ತಿಳಿಸಿದ್ದಾರೆ.

    ಚೀನಾ-ಭಾರತ ಸಂಘರ್ಷ: ಭಾರತದ 20 ಯೋಧರು ಹುತಾತ್ಮ, 40ಕ್ಕೂ ಹೆಚ್ಚು ಚೀನಾ ಯೋಧರೂ ಹತರಾಗಿರುವ ಶಂಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts