ಸವಣೂರ: ಪ್ರತಿಯೊಬ್ಬರ ಜೀವನದಲ್ಲಿ ನೆನಪಿನಲ್ಲಿರುವ ಶಿಕ್ಷಕ ಎಂದರೆ ಪ್ರಾಥಮಿಕ ಶಾಲೆಯ ಶಿಕ್ಷಕರು. ಅಂತವರ ಸಾಲಿನಲ್ಲಿ ನಿವೃತ್ತ ಹೊಂದಿರುವ ಎಸ್.ವಿ. ಇಚ್ಚಂಗಿಮಠ ಗುರುಗಳನ್ನು ಗುರುತಿಸಿರುವುದು ಸಂತಸದ ಸಂಗತಿ ಎಂದು ತಾಪಂ ಮಾಜಿ ಅಧ್ಯಕ್ಷ ರಮೆಶ ಅರಗೋಳ ಹೇಳಿದರು.
ತಾಲೂಕಿನ ಮಂತ್ರೋಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ನಿವೃತ್ತ ಶಿಕ್ಷಕರಿಗೆ ಹಾಗೂ ವರ್ಗಾವಣೆಗೊಂಡ ಶಿಕ್ಷಕರಿಗೆ ಸನ್ಮಾನ, ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮದ ಪೋಸ್ಟ್ ಮಾಸ್ಟರ್ ಹನಮಂತಗೌಡ ಪಾಟೀಲ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಸಾರ್ಥಕ ಸೇವೆ ಸಲ್ಲಿಸಿ, ಇತರ ಶಿಕ್ಷಕರಿಗೆ ಮಾದರಿಯಾದ ಇಚ್ಚಂಗಿಮಠ ಗುರುಗಳು ಸದಾ ಕ್ರಿಯಾಶೀಲರಾಗಿರುವುದು ಸಂತಸ ಸಂಗತಿಯಾಗಿದೆ ಎಂದರು.
ವರ್ಗಾವಣೆಗೊಂಡ ಶಿಕ್ಷಕರಾದ ಎಲ್.ಡಿ. ರಾಘವೇಂದ್ರ, ಜೆ.ಕೆ. ಮಠದ, ಮಧುಮತಿ ಹರಮಗಟ್ಟಿ ಹಾಗೂ ವಯೋ ನಿವೃತ್ತಿಗೊಂಡ ಮುಖ್ಯಗುರು ಎಸ್.ವಿ. ಇಚ್ಚಂಗಿಮಠ ಅವರನ್ನು ಸನ್ಮಾನಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಸಿದ್ದಪ್ಪ ಹುಬ್ಬಳ್ಳಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಈಶ್ವರ ವಿಜಾಪುರ, ಸದಸ್ಯರಾದ ಸುರೇಶ ಹೊನ್ನಿಕೊಪ್ಪ, ಬಾಪುಗೌಡ ಕೊಪ್ಪದ, ಮಂಜುಳಾ ಕೋಳಿವಾಡ, ಎಸ್‌ಡಿಎಂಸಿ ಪದಾಧಿಕಾರಿಗಳಾದ ಪುತ್ರಪ್ಪ ಅಂಗಡಿ, ವೆಂಕಪ್ಪ ಗುರುನಳ್ಳಿ, ಪರಶುರಾಮ ಹರಿಜನ, ವಿರೂಪಾಕ್ಷಪ್ಪ ಹರಿಜನ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಮುತ್ತಣ್ಣ ಚುರ್ಚಿ, ಎನ್.ವಿ. ಕಲಕೋಟಿ, ಶಿವಯೋಗಿ ಆಲದಕಟ್ಟಿ, ಸಿ.ಎನ್. ಲಕ್ಕನಗೌಡ್ರ, ಎಂ.ಎಸ್. ಕಲಿವಾಳ, ಎಸ್.ಟಿ. ಮಹಾಪುರುಷ, ಎನ್.ಎನ್. ಮಾದರ, ಪಿ.ಎಸ್. ಗುಜ್ಜರ, ಸಿ.ವಿ. ಗುತ್ತಲ ಹಾಗೂ ಇತರರು ಪಾಲ್ಗೊಂಡಿದ್ದರು.