ಪ್ರಾಥಮಿಕ ಶಿಕ್ಷಣ ಭವಿಷ್ಯಕ್ಕೆ ಬುನಾದಿಯಾಗಲಿ

ಬೆಳಗಾವಿ: ಜೀವನದಲ್ಲಿ ಎಲ್ಲದಕ್ಕಿಂತ ಶ್ರೇಷ್ಠದಾನ ವಿದ್ಯಾದಾನ. ಪ್ರಾಥಮಿಕ ಶಿಕ್ಷಣ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿಯಾಗಬೇಕು. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಬಿ.ಕೆ.ಇಟಗಿ ಶಿಕ್ಷಣ ಸಂಸ್ಥೆ ಜಿಲ್ಲಾದ್ಯಂತ ಹೆಸರುವಾಸಿಯಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಗ್ರೂಪ್ ವಿದ್ಯಾವರ್ಧಕ ಸಂಘ, ಕರ್ನಾಟಕ ಸಂಯುಕ್ತ ಪದವಿಪೂರ್ವ ಕಾಲೇಜು, ಕರ್ನಾಟಕ ಬಾಲನಿಕೇತನ ಕನ್ನಡ ಪ್ರಾಥಮಿಕ ಶಾಲೆ, ಬಿ.ಕೆ.ಇಟಗಿ ರಾಷ್ಟ್ರೀಯ ಇಂಗ್ಲಿಷ್ ಮಿಡಿಯಂ ಸ್ಕೂಲ್ ಸಂಯುಕ್ತಾಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ 2023-24 ಹಾಗೂ ಸನ್ಮಾನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿ, ಶಾಲಾ ಮಕ್ಕಳ ಬಗ್ಗೆ ಆಡಳಿತ ಮಂಡಳಿ ತೆಗೆದುಕೊಳ್ಳುವ ಕಾಳಜಿ ನಿಜಕ್ಕೂ ಮೆಚ್ಚುವಂಥದ್ದು ಎಂದರು.

ಮಕ್ಕಳ ಭವಿಷ್ಯದ ಬಗ್ಗೆ ಸದಾ ಚಿಂತಿಸುವ ಆಡಳಿತ ಮಂಡಳಿ ನಿರ್ದೇಶಕರು, ವೈಯಕ್ತಿಕವಾಗಿ ಶಾಲೆಗೆ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದೇನೆ. ಇಲ್ಲಿ ಓದುವ ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸುರೇಶ ಇಟಗಿ, ಸಿ.ಸಿ.ಪಾಟೀಲ, ಬಿ.ಜಿ.ವಾಲಿಇಟಗಿ, ಪುಷ್ಪಾವತಿ ನಾಯ್ಕರ್, ಎಸ್.ಸಿ. ಓಂಕಾರಿ, ಉಳವಪ್ಪ ನಂದಿ, ರಮೇಶ ಬಸರಕೊಡ, ಐ.ಬಿ. ಅರಳಿಕಟ್ಟಿ, ವೈ.ಎಲ್. ಪಾಟೀಲ, ಗೊದಮ್ಮ ಭರಮನಿ, ದಯಾನಂದ ಹಂಚಿನಮನಿ, ಶಿವನಾಯ್ಕ ನಾಯ್ಕರ್, ಶಿವಲಿಂಗ ಗುಂಧಾನಿ, ಪಿ.ಎಸ್. ಕಳಸದ, ಎಂ.ಕೆ.ಕರಿದಾವಲ್, ಆನಂದ ಕಳಸದ, ಆನಂದ ಶಿರಕೋಳ, ಗೌಸಮೊದ್ದಿನ ಜಾಲಿಕೊಪ್ಪ, ಶ್ರೀಕಾಂತ ಮಾದುಭರಮಣ್ಣವರ, ಅಡಿವೇಶ್ ಇಟಗಿ, ಯಲ್ಲಪ್ಪ ಕೆಳಗೇರಿ, ಸೈಯದ್ ಸನದಿ, ಗೌಡಪ್ಪ ಹಾದಿಮನಿ, ಸಲೀಂ ಸತ್ತಿಗೇರಿ ಹಾಗೂ ಶಿಕ್ಷಣ ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

Share This Article

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ