More

    ಪಾಕಿಸ್ತಾನ ವಿರುದ್ಧ 2ನೇ ಟಿ20 ಪಂದ್ಯ ಗೆದ್ದ ದಕ್ಷಿಣ ಆಫ್ರಿಕಾ, ಸರಣಿ ಸಮ

    ಲಾಹೋರ್: ವೇಗಿ ಡ್ವೇನ್ ಪ್ರಿಟೋರಿಯಸ್ (17ಕ್ಕೆ 5) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಆತಿಥೇಯ ಪಾಕಿಸ್ತಾನ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ ಹೆನ್ರಿಕ್ ಕ್ಲಾಸೆನ್ ಬಳಗ 3 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ನಿರ್ಣಾಯಕ ಅಂತಿಮ ಟಿ20 ಪಂದ್ಯ ಭಾನುವಾರ ನಡೆಯಲಿದೆ.

    ಗದ್ದಾಫಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನ, ವಿಕೆಟ್ ಕೀಪರ್-ಆರಂಭಿಕ ಮೊಹಮದ್ ರಿಜ್ವಾನ್ (51 ರನ್, 41 ಎಸೆತ, 6 ಬೌಂಡರಿ, 1 ಸಿಕ್ಸರ್) ಅರ್ಧಶತಕದ ನಡುವೆ, ಪ್ರಿಟೋರಿಯಸ್ ದಾಳಿಗೆ ಕುಸಿದು 7 ವಿಕೆಟ್‌ಗೆ 144 ರನ್ ಪೇರಿಸಿತು. ಪ್ರತಿಯಾಗಿ ದಕ್ಷಿಣ ಆಫ್ರಿಕಾ ತಂಡ, ರೀಜಾ ಹೆಂಡ್ರಿಕ್ಸ್ (42) ಮತ್ತು ಪಿಟ್ ವಾನ್ ಬಿಜೋನ್ (42) ಉಪಯುಕ್ತ ಆಟದಿಂದ ಸುಲಭವಾಗಿ ಗೆಲುವಿನತ್ತ ಮುನ್ನಡೆಯಿತು. ಅಂತಿಮವಾಗಿ ಡೇವಿಡ್ ಮಿಲ್ಲರ್ (25*) ಮತ್ತು ನಾಯಕ ಕ್ಲಾಸೆನ್ (17*) ಆಸರೆಯಲ್ಲಿ 16.2 ಓವರ್‌ಗಳಲ್ಲಿ 4 ವಿಕೆಟ್‌ಗೆ 145 ರನ್ ಗಳಿಸಿ ಪ್ರವಾಸದ ಮೊದಲ ಗೆಲುವಿನ ನಗೆ ಬೀರಿತು.

    ಇದನ್ನೂ ಓದಿ: ಕೋಮು ಆಧಾರದಲ್ಲಿ ತಂಡ ಆಯ್ಕೆ, ನಿರ್ಗಮನ ಕೋಚ್​ ವಾಸಿಂ ಜಾಫರ್ ವಿರುದ್ಧ ಉತ್ತರಾಖಂಡ ಆರೋಪ

    ಪಾಕಿಸ್ತಾನ: 7 ವಿಕೆಟ್‌ಗೆ 144 (ರಿಜ್ವಾನ್ 51, ಅಜಮ್ 5, ಇಫ್ತಿಕಾರ್ ಅಹ್ಮದ್ 20, ಹೀಮ್ ಅಶ್ರ್ 30*, ಡ್ವೇನ್ ಪ್ರಿಟೋರಿಯಸ್ 17ಕ್ಕೆ 5, ಶಮ್ಸಿ 16ಕ್ಕೆ 1), ದಕ್ಷಿಣ ಆಫ್ರಿಕಾ: 16.2 ಓವರ್‌ಗಳಲ್ಲಿ 4 ವಿಕೆಟ್‌ಗೆ 145 (ರೀಜಾ ಹೆಂಡ್ರಿಕ್ಸ್ 42, ಬಿಜೋನ್ 42, ಡೇವಿಡ್ ಮಿಲ್ಲರ್ 25*, ಕ್ಲಾಸೆನ್ 17*, ಶಹೀನ್ ಷಾ ಅಫ್ರಿದಿ 18ಕ್ಕೆ 2, ನವಾಜ್ 27ಕ್ಕೆ 1).

    ರೋಹಿತ್ ಶರ್ಮ ಶತಕದಾಟ, ಗೌರವಯುತ ಮೊತ್ತ ಕಲೆಹಾಕಿದ ಭಾರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts