More

    ಭಾರತದ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ರಮಣ: ರಾಷ್ಟ್ರಪತಿ ಅಸ್ತು

    ನವದೆಹಲಿ : ಭಾರತದ 48ನೇ ಮುಖ್ಯ ನ್ಯಾಯಮೂರ್ತಿಗಳಾಗಿ ನ್ಯಾಯಮೂರ್ತಿ ಎನ್​.ವಿ.ರಮಣ ಅವರನ್ನು ನೇಮಕ ಮಾಡುವ ಆದೇಶಕ್ಕೆ ಇಂದು ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ್​​ ಅವರು ಸಹಿ ಹಾಕಿದ್ದಾರೆ. ಏಪ್ರಿಲ್ 24 ರಂದು ಸುಪ್ರೀಂ ಕೋರ್ಟ್​ನ ಮುಖ್ಯಸ್ಥರಾಗಿ ನ್ಯಾಯಮೂರ್ತಿ ರಮಣ ಅಧಿಕಾರ ಸ್ವೀಕರಿಸಲಿದ್ದಾರೆ.

    ಏಪ್ರಿಲ್ 23 ರಂದು ನಿವೃತ್ತರಾಗಲಿರುವ ಈಗಿನ ಮುಖ್ಯ ನ್ಯಾಯಮೂರ್ತಿಗಳಾದ ಎಸ್​.ಎ.ಬೋಬ್ಡೆ ಅವರು ಕಳೆದ ತಿಂಗಳು ನ್ಯಾ. ರಮಣ ಅವರನ್ನು ಈ ಸ್ಥಾನಕ್ಕೆ ಶಿಫಾರಸು ಮಾಡಿದ್ದರು. ನ್ಯಾ. ರಮಣ ಅವರು ತಮ್ಮ ಸೇವಾ ನಿವೃತ್ತಿ ದಿನಾಂಕವಾದ 2022 ರ ಆಗಸ್ಟ್ 26 ರವರೆಗೆ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಲಿದ್ದಾರೆ.

    ಇದನ್ನೂ ಓದಿ: ಹೌಸ್​ವೈಫ್​ ಎಂದರೆ ಮೂದಲಿಕೆ ಏಕೆ? ಅವರ ಶ್ರಮಕ್ಕೆ ಮನ್ನಣೆ ನೀಡೋದನ್ನು ಕಲಿಯಿರಿ ಸುಪ್ರೀಂ ಕೋರ್ಟ್

    1957 ರ ಆಗಸ್ಟ್​ 27 ರಂದು ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಪೊನ್ನವರಂ ಗ್ರಾಮದಲ್ಲಿ ಜನಿಸಿದ ನ್ಯಾ.ರಮಣ ಅವರು, 1983 ರ ಫೆಬ್ರವರಿ 10 ರಂದು ವಕೀಲ ವೃತ್ತಿ ಆರಂಭಿಸಿದರು. ಅವರು ಜೂನ್ 27, 2000 ರಂದು ಆಂಧ್ರಪ್ರದೇಶದ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡರು ಮತ್ತು ಮಾರ್ಚ್ 2013 ರಿಂದ ಮೇ 2013 ರವರೆಗೆ ಕಾರ್ಯಕಾರಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದರು. ಅವರನ್ನು ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ 2013 ರ ಸೆಪ್ಟೆಂಬರ್ 2 ರಂದು ಮತ್ತು ನಂತರ ಫೆಬ್ರವರಿ 17, 2014 ರಂದು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಿಸಲಾಗಿತ್ತು. (ಏಜೆನ್ಸೀಸ್)

    ಅಮಿತ್ ಷಾ-ಆದಿತ್ಯನಾಥರ ಮೇಲೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ದಾಳಿ ಬೆದರಿಕೆ

    90 ಮತದಾರರಿದ್ದ ಬೂತ್​ನಲ್ಲಿ 171 ಮತ ಚಲಾವಣೆ !

    ಬೇಸಿಗೆಯಲ್ಲಿ ನಿಮ್ಮ ತ್ವಚೆಯ ಆರೈಕೆಗಾಗಿ ಹೀಗೆ ಮಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts