More

    ಮೊದಲ ಬಾರಿಗೆ ಫೈಟರ್​ ಜೆಟ್​ ಹತ್ತಿದ ರಾಷ್ಟ್ರಪತಿ ದ್ರೌಪದಿ ಮುರ್ಮು!

    ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಮೊದಲ ಬಾರಿಗೆ ಫೈಟರ್ ಜೆಟ್ ಹಾರಿಸಿದರು. ಆಯಕಟ್ಟಿನ ವಾಯುನೆಲೆಯಾದ ಅಸ್ಸಾಂನ ತೇಜ್‌ಪುರ್ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಸುಖೋಯ್ 30 MKI ಯುದ್ಧ ವಿಮಾನಕ್ಕೆ ಕಾಲಿಡುವ ಮೊದಲು ಅವರು ಗುರುತ್ವಾಕರ್ಷಣೆ ವಿರೋಧಿ ಸೂಟ್ ಧರಿಸಿ ಕಾಣಿಸಿಕೊಂಡಿದ್ದರು.

    ಹಾರಾಟದ ಸಮಯದಲ್ಲಿ ರಾಷ್ಟ್ರಪತಿ ಮಾಡಿದ್ದಿಷ್ಟು…

    ಭಾರತೀಯ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುವ ರಾಷ್ಟ್ರಪತಿಗಳು, ಬ್ರಹ್ಮಪುತ್ರ ಮತ್ತು ತೇಜ್‌ಪುರ ಕಣಿವೆಯನ್ನು ಹಿಮಾಲಯದ ವೀಕ್ಷಣೆ ಮಾಡುತ್ತಾ ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸಿ ವಾಯುಪಡೆಯ ನಿಲ್ದಾಣಕ್ಕೆ ಮರಳಿದರು.

    106 ಸ್ಕ್ವಾಡ್ರನ್‌ನ ಕಮಾಂಡಿಂಗ್ ಆಫೀಸರ್ ಗ್ರೂಪ್ ಕ್ಯಾಪ್ಟನ್ ನವೀನ್ ಕುಮಾರ್ ಅವರು ವಿಮಾನವನ್ನು ಹಾರಿಸಿದರು. ವಿಮಾನವು ಸಮುದ್ರ ಮಟ್ಟದಿಂದ ಸುಮಾರು ಎರಡು ಕಿಲೋಮೀಟರ್ ಎತ್ತರದಲ್ಲಿ ಗಂಟೆಗೆ ಸುಮಾರು 800 ಕಿಲೋಮೀಟರ್ ವೇಗದಲ್ಲಿ ಹಾರಿದೆ. ದ್ರೌಪದಿ ಮುರ್ಮು ಅವರು ದೇಶದ ರಾಷ್ಟ್ರಪತಿಗಳಲ್ಲಿ ಫೈಟರ್​ ಜೆಟ್​ನಲ್ಲಿ ಹಾರಾಟ ನಡೆಸಿದ ಮೂರನೇಯವರಾಗಿದ್ದು ಮತ್ತು ಎರಡನೇ ಮಹಿಳಾ ರಾಷ್ಟ್ರಪತಿಯಾಗಿದ್ದಾರೆ.

    ಫೈಟರ್​ ಜೆಟ್​ ಹಾರಿಸಿದ ಕೆಲವೇ ರಾಷ್ಟ್ರಪತಿಗಳಲ್ಲಿ ಇವರೂ ಒಬ್ಬರು!

    2009ರಲ್ಲಿ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಮುಂಚೂಣಿ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು.

    ಸುಖೋಯ್-30 MKI ಟ್ವಿನ್-ಸೀಟರ್ ಮಲ್ಟಿರೋಲ್ ಫೈಟರ್ ಜೆಟ್ ಆಗಿದ್ದು, ಇದನ್ನು ರಷ್ಯಾದ ಸುಖೋಯ್ ಅಭಿವೃದ್ಧಿಪಡಿಸಿದೆ. ಭಾರತದ ಏರೋಸ್ಪೇಸ್ ದೈತ್ಯ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಿಂದ ಪರವಾನಗಿ ಅಡಿಯಲ್ಲಿ ನಿರ್ಮಿಸಲಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts