More

    ವಿಕಾಸ ಬ್ಯಾಂಕ್‌ಗೆ 8.41 ಕೋಟಿ ರೂ. ನಿವ್ವಳ ಲಾಭ

    ಹೊಸಪೇಟೆ: ಸಹಕಾರ ತತ್ವದ ಆಶಯಗಳೊಂದಿಗೆ ತಂತ್ರಜ್ಞಾನ ಮತ್ತು ವೃತ್ತಿಪರತೆಯೊಂದಿಗೆ ವಿಕಾಸ ಬ್ಯಾಂಕ್ ಪ್ರಗತಿ ಪಥದಲ್ಲಿ ಸಾಗುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ 1162 ಕೋಟಿ ರೂ. ವ್ಯವಹಾರ ನಡೆಸಿದ್ದು, ಆದಾಯ ತೆರಿಗೆ ಹಾಗೂ ಇತರ ಅವಕಾಶಗಳ ನಂತರ 8.41 ಕೋಟಿ ರೂ. ನಿವ್ವಳ ಲಾಭವಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ.ಹಿರೇಮಠ ಹೇಳಿದರು.

    2022-23ನೇ ಆರ್ಥಿಕ ವರ್ಷಕ್ಕೆ 58 ಕೋಟಿ ರೂ. ಸ್ವಂತ ಬಂಡವಾಳ ಹೂಡಲಾಗಿದ್ದು, 704 ಕೋಟಿ ರೂ. ಠೇವಣಿ ಸಂಗ್ರಹವಾಗಿದೆ. ಸಾಲ ಹಾಗೂ ಮುಂಗಡರೂಪದಲ್ಲಿ 459 ಕೋಟಿ ರೂ. ನೀಡಲಾಗಿತ್ತು. ಒಟ್ಟಾರೆ 1162 ಕೋಟಿ ರೂ. ವ್ಯವಹಾರ ನಡೆಸಿದ್ದು, 16.31 ಕೋಟಿ ರೂ. ಲಾಭವಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಬ್ಯಾಂಕ್‌ನ ಅನುತ್ಪಾದಕ ಆಸ್ತಿಯಲ್ಲಿ ಹಿಂದಿನ ಸಾಲಿಗಿಂತ ಕಡಿಮೆಯಾಗಿದೆ. 2021-22ನೇ ಆರ್ಥಿಕ ವರ್ಷದಲ್ಲಿ ಶೇ.2.85 ಇತ್ತು. ಆದರೆ, ಈ ಬಾರಿ ಅದು ಶೇ.1.85 ಕ್ಕೆ ಇಳಿಕೆಯಾಗಿದೆ ಎಂದು ವಿವರಿಸಿದರು.

    9 ಹೊಸ ಶಾಖೆಗಳು: ವಿಕಾಸ ಬ್ಯಾಂಕ್‌ನಿಂದ ಹೊಸದಾಗಿ 9 ಶಾಖೆಗಳನ್ನು ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಿದೆ. ರಾಯಚೂರು, ಲಿಂಗಸೂಗೂರು, ಹುಬ್ಬಳ್ಳಿ, ಬೀದರ್, ಗದಗ, ದಾವಣಗೆರೆ, ವಿಜಯನಗರ, ಕೊಪ್ಪಳ ಜಿಲ್ಲೆಗಳಲ್ಲಿ ಒಟ್ಟು 9 ನೂತನ ಶಾಖೆಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಅದಕ್ಕಾಗಿ ಸೂಕ್ತ ಕಟ್ಟಗಳನ್ನು ಗುರುತಿಸಲಾಗುತ್ತಿದೆ. ನೂತನ ಶಾಖೆಗಳ ಆರಂಭದಿಂದ ವಿಕಾಸ ಬ್ಯಾಂಕ್ ಶಾಖೆಗಳ ಸಂಖ್ಯೆ 17ಕ್ಕೆ ಏರಿಕೆಯಾಗಲಿವೆ. ಉತ್ತರ ಕರ್ನಾಟಕದ ಬೀದರ್‌ನಿಂದ ಮಧ್ಯ ಕರ್ನಾಟಕದವರೆಗೆ ವಿಕಾಸ ಬ್ಯಾಂಕ್‌ನ ಸೇವೆ ವಿಸ್ತರಣೆಯಾಗಲಿದೆ ಎಂದರು.

    ಬ್ಯಾಂಕ್ ನಿರ್ದೇಶಕರಾದ ಛಾಯಾ ದಿವಾಕರ್, ರಮೇಶ್ ಪುರೋಹಿತ, ಎಂ.ವೆಂಕಪ್ಪ, ಗಂಗಾಧರ ಪತ್ತಾರ, ಸಿಇಒ ಪ್ರಸನ್ನ ಹಿರೇಮಠ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts