More

    ಅಂಚೆ ಮತದಾರರ ನಕ್ಷೆ ಸಿದ್ಧಪಡಿಸಿ

    ತುಮಕೂರು: ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಂದ 80 ವರ್ಷ ಮೇಲ್ಪಟ್ಟ 6,595 ಮತದಾರರು ಹಾಗೂ ವಿಶೇಷ ಚೇತನ ಮತದಾರರು 2,845 ಸೇರಿ ಒಟ್ಟು 9,440 ಮತದಾರರು ಅಂಚೆ ಮತದಾನ ಮಾಡಲು ಬಯಸಿದ್ದಾರೆ.
    ಅರ್ಹ ಅಂಚೆ ಮತದಾರರ ಮಾಹಿತಿ ಪಡೆದು ಸೆಕ್ಟರ್‌ವಾರು ಮಾರ್ಗ ನಕ್ಷೆ ಸಿದ್ಧಪಡಿಸಿಟ್ಟುಕೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
    ನಗರದ ಗುಬ್ಬಿ ವೀರಣ್ಣ ಕಲಾ ಮಂದಿರದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ-2023ರ ಸಂಬಂಧ ಹೋಂ ವೋಟಿಂಗ್ ಕಾರ್ಯಕ್ಕೆ ನಿಯೋಜನೆಗೊಂಡಿರುವ ಪೋಲಿಂಗ್ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಜಿಲ್ಲೆಯಲ್ಲಿ 85,742 ಮಂದಿ ದಿವ್ಯಾಂಗ ಮತ್ತು 80ಕ್ಕೂ ಹೆಚ್ಚು ಮತದಾರರಿಗೆ 12ಡಿ ಅರ್ಜಿ ವಿತರಿಸಲಾಗಿದ್ದು, ಈ ಪೈಕಿ 9,440 ಮತದಾರರು ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಇಚ್ಛಿಸಿದ್ದು, ಅವರುಗಳ ವಾಸ ಸ್ಥಳಕ್ಕೆ ಮತಗಟ್ಟೆ ಅಧಿಕಾರಿಗಳ ತಂಡ ಭೇಟಿ ನೀಡಿ ಅಂಚೆ ಮತ ಪತ್ರ ಮೂಲಕ ಹೋಂ ವೋಟಿಂಗ್ ಮಾಡಿಸುವ ಸಂಬಂಧ ಮತಗಟ್ಟೆ ಅಧಿಕಾರಿಗಳ ತಂಡ ಕಾರ್ಯ ನಿರ್ವಹಿಸುವುದು ಎಂದರು.

    ಅಂಚೆ ಮತಪತ್ರ ಮತದಾರರು ಮತ್ತು ಸೆಕ್ಟರ್ ಆಧಾರದ ಮೇಲೆ ಮಾರ್ಗ ನಕ್ಷೆಗಳನ್ನು ಸಿದ್ಧಪಡಿಸುವುದು, ಮತಗಟ್ಟೆಗಳಿಗೆ ಭೇಟಿ ನೀಡುವ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿಕೊಳ್ಳುವುದು, ಅನುಮೋದಿತ ಸೆಕ್ಟರ್ ಮಾರ್ಗ ನಕ್ಷೆ ಅಭ್ಯರ್ಥಿಗಳೊಂದಿಗೆ ಹಂಚಿಕೊಳ್ಳಬೇಕು ಎಂದರು.

    ಇಬ್ಬರು ಚುನಾವಣಾಧಿಕಾರಿಗಳು, ಒಬ್ಬರು ಮೈಕ್ರೋ ಅಬ್ಸರ್ವರ್, ಒಬ್ಬ ಪೊಲೀಸ್ ಸಿಬ್ಬಂದಿ, ಒಬ್ಬ ವಿಡಿಯೋಗ್ರಾಫರ್ ಒಳಗೊಂಡ ಮತಗಟ್ಟೆಗೆ ತೆರಳುವ ತಂಡ ರಚಿಸಿಕೊಂಡು ನಮೂನೆ 12ಡಿರಲ್ಲಿ ದಾಖಲಿಸಿರುವ ಮತದಾರರ ವಿಳಾಸಕ್ಕೆ ತೆರಳುವುದು, ಮತದಾನದ ತಂಡ ಅಂಚೆ ಮತದಾರರಿಗೆ ಮತದಾನಕ್ಕೆ ಆಗಮಿಸುವ ಬಗ್ಗೆ ಬಿಎಲ್‌ಒ ಎಸ್‌ಎಂಎಸ್ ಅಥವಾ ಅಂಚೆ ಮೂಲಕ ಮುಂಚಿತವಾಗಿ ತಿಳಿಸಲಿದ್ದಾರೆ.

    ಅಂಚೆ ಮತಪತ್ರವನ್ನು ಮತದಾರರಿಗೆ ವಿತರಿಸುವ ಮುನ್ನ ಸದರಿ ಮತದಾರರ ಹೆಸರು ದಾಖಲೆಗಳು ಮತಪಟ್ಟಿಯಲ್ಲಿ ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು ಎಂದು ಸೂಚಿಸಿದರು.

    ಹೋಂ ವೋಟಿಂಗ್ ಪ್ರಕ್ರಿಯೆ ಏ.29ರಿಂದ ಪ್ರಾರಂಭಿಸಿ ಮತದಾನ ಮಾಡುವ ಪ್ರಕ್ರಿಯೆಯನ್ನು ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಗಳಂತೆ ಕಟ್ಟುನಿಟ್ಟಾಗಿ ಕ್ರಮವಹಿಸಲು ಜಿಲ್ಲಾಧಿಕಾರಿ ಸೂಚಿಸಿದರು.

    ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಹಾಗೂ 11 ವಿಧಾನಸಭಾ ಕ್ಷೇತ್ರಗಳ ಆರ್‌ಒ ಮತ್ತು ಇತರೆ ಪೋಲಿಂಗ್ ಅಧಿಕಾರಿಗಳು ತರಬೇತಿಯಲ್ಲಿ ಭಾಗಿಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts