More

    ಬೆಳೆ ನಷ್ಟ ಪರಿಹಾರ ಮುಂಗಡ ಪಾವತಿಗೆ ತಯಾರಿ

    ಬೆಂಗಳೂರು: ರೈತರಿಗೆ ಬೆಳೆ ನಷ್ಟ ಪರಿಹಾರ ಮುಂಗಡ ಪಾವತಿ ಮಾಡಲು ಕಂದಾಯ ಇಲಾಖೆ ಸಜ್ಜಾಗುತ್ತಿದೆ.
    ಬೆಳಗಾವಿ ಅಧಿವೇಶನದ ಒತ್ತಡದಲ್ಲಿದ್ದ ಕಂದಾಯ ಸಚಿವರು ಶನಿವಾರ ಬೆಂಗಳೂರಲ್ಲಿ ಇಲಾಖೆ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಬರ ಪರಿಹಾರ ಮುಂಗಡ ಪಾವತಿಗೆ ಆಗಬೇಕಾದ ತಯಾರಿ ಬಗ್ಗೆ ಚರ್ಚೆ ನಡೆಸಿ ಸೂಚನೆಗಳನ್ನು ನೀಡಿದರು.
    ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಪರಿಹಾರ ಕೊಡಲು ಇನ್ನೂ ಪ್ರಾಥಮಿಕ ಸಭೆಯನ್ನೇ ನಡೆಸದ ಹಿನ್ನೆಲೆಯಲ್ಲಿ ರಾಜ್ಯದಿಂದ ತುರ್ತು ಕ್ರಮವಾಗಿ ಮೊದಲ ಕಂತಿನ ಬೆಳೆ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ನವೆಂಬರ್ 30ರಂದು ಪ್ರಕಟಿಸಿದ್ದರು.
    ಮುಂದಿನ ಒಂದು ವಾರದೊಳಗೆ ಬೆಳೆ ನಷ್ಟ ಪರಿಹಾರದ ಮುಂಗಡವಾಗಿ ಗರಿಷ್ಠ 2 ಸಾವಿರ ರೂ.ನಂತೆ ಜಮಾ ಮಾಡುವುದಾಗಿ ಘೋಷಿಸಿದ್ದರು. ಬಳಿಕ ರೈತರ ಮಾಹಿತಿ, ರೈತರ ಜಮೀನಿನ ಮಾಹಿತಿ ಸರಿಯಾದ ರೀತಿಯಲ್ಲಿ ಅಪ್ಡೇಟ್ ಮಾಡಲು ಕಾಲಾವಕಾಶ ಮಾಡಿಕೊಳ್ಳಲು ಅವಕಾಶ ನೀಡಿತ್ತು.
    ಇದೀಗ ಅಪ್ಡೇಟ್ ಕಾರ್ಯ ನಡೆದಿದ್ದು, ಯಾವುದೇ ಸಂದರ್ಭದಲ್ಲಿ ಪರಿಹಾರದ ಮೊದಲ ಕಂತನ್ನು ಜಮಾ ಮಾಡಲು ತಯಾರಿ ಮಾಡಿಕೊಳ್ಳುವಂತೆ ಕಂದಾಯ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
    ಭೂ ಮಾಲಿಕತ್ವ ಹೊಂದಿದ ರೈತ ಬೆಳೆ ನಷ್ಟ ಮಾಡಿಕೊಂಡಿದ್ದರೆ ಪರಿಹಾರ ನೀಡಲಾಗುತ್ತದೆ. ರಾಜ್ಯ ಸರ್ಕಾರದ ಮೊದಲ ಕಂತಿನ ರೂಪದಲ್ಲಿ ಗರಿಷ್ಠ 2 ಸಾವಿರ ರೂ. ವರೆಗೆ ನೀಡಲಾಗುತ್ತದೆ. ಕೇಂದ್ರ ಪರಿಹಾರ ಬಿಡುಗಡೆ ಮಾಡಿದ ಬಳಿಕ ನಷ್ಟ ಪರಿಹಾರದಲ್ಲಿ ಮೊದಲ ಕಂತಿನ ಪಾವತಿಯನ್ನು ಕಳೆದು ಉಳಿದ ಬಾಕಿಯನ್ನು ಜಮಾ ಮಾಡಲಾಗುತ್ತದೆ.
    ಮಳೆ ಆಶ್ರಿತ ಪ್ರದೇಶದ ಪ್ರತಿ ಹೆಕ್ಟೇರ್‌ಗೆ 8,500 ರೂ., ನೀರಾವರಿಯಾದರೆ 17 ಸಾವಿರ ರೂ., ಬಹು ವಾರ್ಷಿಕ ಬೆಳೆಯಾದರೆ 22,500 ರೂ. ನಷ್ಟ ಪರಿಹಾರವೆಂದು ನಿಗದಿ ಮಾಡಲಾಗಿದೆ. ಇದರಲ್ಲಿ ಗರಿಷ್ಠ ಎರಡು ಸಾವಿರ ರೂ. ಗರಿಷ್ಠ ಐದು ಎಕರೆಗೆ ಮಾತ್ರ ಪರಿಹಾರ ನೀಡಲಾಗುತ್ತದೆ. ಸದ್ಯ ರಾಜ್ಯ ಸರ್ಕಾರ ಮುಂಗಡ ರೂಪದಲ್ಲಿ ಗರಿಷ್ಠ ಎರಡು ಸಾವಿರ ರೂ. ವರೆಗೆ ಡಿಬಿಟಿ ಮೂಲಕ ಜಮಾ ಮಾಡುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts