More

  ಯಶ್ ಅಭಿಮಾನಿಗಳಿಗೆ 5 ಲಕ್ಷ ರೂ. ಪರಿಹಾರ, ಗಾಯಗೊಂಡಿರುವವರಿಗೂ ಶೀಘ್ರವೇ ಸಹಾಯಧನ

  ಲಕ್ಷ್ಮೇಶ್ವರ: ತಾಲೂಕಿನ ಸೂರಣಗಿ ಗ್ರಾಮದಲ್ಲಿ ಜ. 7ರಂದು ತಡರಾತ್ರಿ ಯಶ್ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು ಕಟೌಟ್ ನಿಲ್ಲಿಸುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ರ್ಸ³ಸಿ ಮೂವರು ಮೃತಪಟ್ಟಿದ್ದರು.

  ಜ. 8ರಂದು ಯಶ್ ಸೂರಣಗಿ ಗ್ರಾಮಕ್ಕೆ ಆಗಮಿಸಿ ಮೃತಪಟ್ಟ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಸಹಾಯ ಮಾಡುವ ಭರವಸೆ ನೀಡಿದ್ದರು. ಅದರಂತೆ ಯಶ್ ಫೌಂಡೇಶನ್​ನ ಯಶೋಮಾರ್ಗ ತಂಡವು ಬುಧವಾರ ಆಗಮಿಸಿ ಮೃತಪಟ್ಟವರಿಗೆ ತಲಾ 5 ಲಕ್ಷ ರೂ. ಪರಿಹಾರದ ಚೆಕ್ ನೀಡಿದೆ.

  ಯಶ್ ಪರವಾಗಿ ಅವರ ಸ್ನೇಹಿತರಾದ ಚೇತನ್, ರಾಕೇಶ್ ಹಾಗೂ ಮನೇಶ್ ಮತ್ತಿತರರು ಮೃತಪಟ್ಟವರ ಮನೆಗಳಿಗೆ ಭೇಟಿ ನೀಡಿದರು. ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ನಿಮ್ಮ ಜತೆ ನಾವಿದ್ದೇವೆ, ಯಶ್ ಅವರಿದ್ದಾರೆ ಯಾವತ್ತಿಗೂ ಎದೆಗುಂದಬೇಡಿ ಎಂದು ಧೈರ್ಯ ತುಂಬಿದರು.

  ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದಿನ ದಿನದ ಘೊರ ಘಟನೆಯಿಂದ ಕುಟುಂಬಸ್ಥರು ಹೊರಬಂದಿಲ್ಲ. ಅದೇ ರೀತಿ ಯಶ್ ಅವರೂ ನೋವಿನಲ್ಲಿದ್ದು, ಯಾವುದೇ ಶೂಟಿಂಗ್​ನಲ್ಲೂ ಭಾಗವಹಿಸುತ್ತಿಲ್ಲ, ಅವರಿಗೆ ಅಭಿಮಾನಿಗಳ ಸಾವು ತೀವ್ರ ದುಃಖ ತರಿಸಿದೆ. ಈಗ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಚೆಕ್ ವಿತರಣೆ ಮಾಡಲಾಗಿದೆ. ಅದರಂತೆ ಗಾಯಗೊಂಡವರ ಬ್ಯಾಂಕ್ ದಾಖಲೆಗಳನ್ನು ತೆಗೆದುಕೊಳ್ಳಲಾಗಿದ್ದು, ಕೂಡಲೇ ಅವರಿಗೂ ಸಹಾಯಧನ ನೀಡಲಾಗುವುದು ಎಂದರು. ಯಶೋಮಾರ್ಗ ಫೌಂಡೇಶನ್ ಜಿಲ್ಲಾ ಅಧ್ಯಕ್ಷ ಮಂಜುನಾಥ ದಾಮೋದರ, ರಾಘವೇಂದ್ರ ಪರಾಪೂರ, ರೋಹಿತ ಹಬೀಬ್, ರಜತ್ ಪಿ.ಕೆ, ಕೊಟೆಪ್ಪ ವರ್ದಿ, ವಿಜಯ ಹಳ್ಳಿ, ಪ್ರಕಾಶ ಕಳ್ಳಿಹಾಳ, ಸಂತೋಷ ಚಕ್ರಸಾಲಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts