More

    ಅಕಾಲಿಕ ಮಳೆ, ಕೊಳೆಯುತ್ತಿದೆ ಶೇಂಗಾ ಬೆಳೆ

    ಡಂಬಳ: ವಾರದಿಂದ ಆಗಾಗ ಸುರಿಯುತ್ತಿರುವ ಮಳೆ ಮತ್ತು ಮೋಡ ಕವಿದ ವಾತಾವರಣದಿಂದ ಕಟಾವು ಮಾಡಿ ಬಿಟ್ಟಿರುವ ಗೆಜ್ಜೆ ಶೇಂಗಾ ಜಮೀನಿನಲ್ಲೇ ಮೊಳಕೆಯೊಡೆಯುತ್ತಿದೆ. ಅಲ್ಲದೇ ಅಲ್ಲೇ ಕೊಳೆತು ಹಾಳಾಗುತ್ತಿದೆ. ಇದರಿಂದ ರೈತರಲ್ಲಿ ಆತಂಕ ಮೂಡಿದೆ.

    ಡಂಬಳ ವ್ಯಾಪ್ತಿಯ ಡೋಣಿ, ಹಿರೇವಡ್ಡಟ್ಟಿ, ಡೋಣಿ ತಾಂಡಾ, ಮುರುಡಿ, ಚಿಕ್ಕವಡ್ಡಟ್ಟಿ, ಹಾರೋಗೇರಿ, ದಿಂಡೂರು ತಾಂಡಾ ಸೇರಿದಂತೆ ನೂರಾರು ರೈತರು ಬೇಸಿಗೆ ಗೆಜ್ಜೆ ಶೇಂಗಾ ಕಟಾವು ಮಾಡಿದ್ದಾರೆ. ಇದೀಗ ವಾರದಿಂದ ಸುರಿಯುತ್ತಿರುವ ಮಳೆಗೆ ಕಿತ್ತು ಹಾಕಿರುವ ಶೇಂಗಾ ಈ ಮಳೆಗೆ ದಿನ ದಿನಕ್ಕೆ ಕೊಳೆಯುಲಾರಂಭಿಸಿದೆ. ಮೊಳಕೆಯೊಡೆಯಲಾರಂಭಿಸಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಆಭಾವ ಕಾಡುವ ಆತಂಕ ರೈತರಲ್ಲಿ ಮನೆಮಾಡಿದೆ.

    ಡಂಬಳ ಗ್ರಾಮದ ರೈತ ಬಸಪ್ಪ ಸೊರಟೂರ ಅವರು, ತಮ್ಮ 2 ಎಕರೆ ಜಮೀನಿನಲ್ಲಿ ನೀರಾವರಿ ಆಶ್ರಿತ ಬೇಸಿಗೆ ಶೇಂಗಾ ಬೆಳೆದಿದ್ದಾರೆ. ಕಳೆದ ವಾರವಷ್ಟೇ ಬೆಳೆ ಕಿತ್ತು ಜಮೀನಿನಲ್ಲೇ ಬಿಟ್ಟಿದ್ದಾರೆ. ಆಗಾಗ ಸುರಿಯುತ್ತಿರುವ ಮಳೆಗೆ ಶೇಂಗಾ ಅಲ್ಲಿಯೇ ಮೊಳಕೆ ಮತ್ತು ಕೊಳೆಯ ಲಾರಂಭಿಸಿದೆ. ಶೇಂಗಾ ರಕ್ಷಣೆ ಮಾಡಲು ಪ್ಲಾಸ್ಟಿಕ್ ತಾಡಪತ್ರಿ ಹೊದಿಕೆ ಮಾಡಲಾಗುತ್ತದೆ. ಆದರೂ, ಶೇಂಗಾ ಹೊಟ್ಟು ಕೊಳೆಯುತ್ತಿದೆ. ಹೀಗಾಗಿ ಕೈಬಂದ ತುತ್ತು ಬಾಯಿಗೆ ಬಾರದಂತ ಸ್ಥಿತಿ ನಿರ್ವಣವಾಗಿದೆ.

    ಉತ್ತಮ ಬೀಜ, ಗೊಬ್ಬರ, ಕಳೆ ನಾಶಕ ಸಿಂಪಡಣೆ ಎಂದು ಬಿತ್ತನೆಗೆಂದು ಸಾವಿರಾರು ರೂಪಾಯಿ ಖರ್ಚು ಮಾಡಲಾಗಿದೆ. ಈಗ ಸುರಿಯುತ್ತಿರುವ ಮಳೆಗೆ ಶೇಂಗಾ ಬೆಳೆ ಹಾಳಾಗುತ್ತಿದೆ. ಇದನ್ನು ನೋಡಿದರೆ ಮಾಡಿದ ಖರ್ಚೂ ಬಾರದ ಸ್ಥಿತಿ ಇದೆ.

    ನೀರಾವರಿ ಭೂಮಿ ಹೊಂದಿರುವ ರೈತರು ಬೇಸಿಗೆ ಗೆಜ್ಜೆ ಶೇಂಗಾ ಹೆಚ್ಚಾಗಿ ಬಿತ್ತನೆ ಮಾಡಿದ್ದಾರೆ. ಶೇಂಗಾ ಬೆಳೆ ಕಟಾವು ಮಾಡಿದ್ದಾರೆ. ರೈತರು ಕಾಲಮಿತಿ ಅರಿತು ಬಿತ್ತನೆ ಮಾಡಬೇಕು. ಈ ಮಳೆಗೆ ಕಟಾವು ಮಾಡಿರುವ ಶೇಂಗಾ ಮೊಳಕೆ ಒಡೆಯುವ ಸಾಧ್ಯತೆ ಇರುತ್ತದೆ ಮತ್ತು ಶೇಂಗಾ ಮೇವಿನ ಅಭಾವ ಕಾಡುತ್ತದೆ.

    | ಎಸ್.ಬಿ. ರಾಮೇನಹಳ್ಳಿ,

    ರೈತ ಸಂಪರ್ಕ ಕೇಂದ್ರ ಅಧಿಕಾರಿ ಡಂಬಳ

    ಎರಡು ಎಕರೆ ಜಮೀನಿನಲ್ಲೇ ಬೇಸಿಗೆ ಶೇಂಗಾ ಬೆಳೆಯಲಾಗುತ್ತದೆ. ಶೇಂಗಾ ಕಿತ್ತು ಹಾಕಿ ಒಂದು ವಾರ ಆಯಿತು. ಕಳೆದ ವಾರದಿಂದ ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ ಶೇಂಗಾ ಬೆಳೆ ಸಂರಕ್ಷಣೆ ಮಾಡುವುದು ಸವಾಲಿನ ಕಾರ್ಯವಾಗಿದೆ. ಶೇಂಗಾ ಹೊಲದಲ್ಲೇ ಕೊಳೆಯುತ್ತಿದೆ. ಇದರಿಂದ ಮುಂಬರುವ ದಿನಗಳಿಲ್ಲಿ ದನಕರುಗಳಿಗೆ ಮೇವಿನ ತೊಂದರೆ ಆಗುತ್ತದೆ. ದನಕರುಗಳನ್ನು ಸಾಕುವುದು ಕಷ್ಟವಾಗುತ್ತದೆ.

    | ಬಸಪ್ಪ ಸೊರಟೂರ ರೈತ ಡಂಬಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts