More

    ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಲಿ, ಸ್ತ್ರೀರೋಗ ತಜ್ಞೆ ಡಾ.ಗಿರಿಜಾ ಸಲಹೆ ಆರೋಗ್ಯ ತಪಾಸಣೆ ಶಿಬಿರ

    ದೇವದುರ್ಗ: ಸುರಕ್ಷಿತ ಹೆರಿಗೆ, ತಾಯಿ ಮಗುವಿನ ಉತ್ತಮ ಆಹಾರಕ್ಕಾಗಿ ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಬೇಕು. ಇದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸ್ತ್ರೀರೋಗ ತಜ್ಞೆ ಗಿರಿಜಾ ಬೆನಕನ್ ಹೇಳಿದರು.

    ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಆಸ್ಪತ್ರೆ ಹಾಗೂ ರಾಯಚೂರಿನ ರಿಮ್ಸ್ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಗರ್ಭಿಣಿಯರ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಶುಕ್ರವಾರ ಮಾತನಾಡಿದರು.

    ಇಂದು ಹೆರಿಗೆ ತುಂಬಾ ಎಚ್ಚರಿಕೆ ವಿಷಯವಾಗಿದ್ದು, ಸ್ವಲ್ಪ ಅಜಾಗರುಕತೆವಹಿಸಿದರೆ ತಾಯಿ ಮಗುವಿನ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದೆ.
    ಗರ್ಭಿಣಿಯರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡದೆ ಕೆಲಸದ ಜತೆಗೆ ಆರೋಗ್ಯ ಕಾಪಾಡಿಕೊಳ್ಳಬೇಕು. ಸುರಕ್ಷಿತ ಹೆರಿಗೆಗಾಗಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳಬೇಕು. ಪ್ರತಿ ತಿಂಗಳು ತಪಾಸಣೆ ಮಾಡಿಸಿ, ವೈದ್ಯರ ಸಲಹೆ ಸೂಚನೆಗಳನ್ನು ತಪ್ಪದೆ ಪಾಲಿಸಬೇಕು. ನಿಯಮಿತ ಆಹಾರ, ವಿಶ್ರಾಂತಿ ಹಾಗೂ ವೈದ್ಯರ ಸಲಹೆ ಪಡೆದರೆ ಸುರಕ್ಷಿತ ಹೆರಿಗೆ ಸಾಧ್ಯ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts