More

    ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಅಗತ್ಯ

    ಅರಟಾಳ: ಗರ್ಭಿಣಿ ಮತ್ತು ಬಾಣಂತಿಯರು ಪೌಷ್ಟಿಕ ಆಹಾರ ಸೇವಿಸುವುದರಿಂದ ಆರೋಗ್ಯ ಸದೃಢವಾಗುತ್ತದೆ. ಜತೆಗೆ ತಾಯಿ-ಮಗು ಮರಣ ತಡೆಗಟ್ಟಬಹುದು ಎಂದು ಹಿರಿಯ ಮೇಲ್ವಿಚಾರಕಿ ಸುಜಾತಾ ಪಾಟೀಲ್ ಅಭಿಪ್ರಾಯ ಪಟ್ಟರು.

    ಗುರುವಾರ ಗ್ರಾಮದ ಅಂಗನವಾಡಿ ಕೇಂದ್ರ-3ರಲ್ಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಅಥಣಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪೋಷಣ ಪಂಚಾಯತ ಸಮಾರಂಭದಲ್ಲಿ ಅವರು ಮಾತನಾಡಿದರು. ಆರೋಗ್ಯ ತಪ್ಪಿದಾಗ ಆರೋಗ್ಯ ಕೇಂದ್ರಕ್ಕೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು.

    ಕರೊನಾ ಬಗ್ಗೆ ಯಾರಲ್ಲೂ ಭಯ ಬೇಡ. ಗರ್ಭಿಣಿಯರು ಉತ್ತಮವಾದ ಶೇಂಗಾ ಹೋಳಿಗೆ, ಮೆಂತ್ಯೆಪರೋಟ, ದೋಸೆ, ಇಡ್ಲಿ, ಸಜ್ಚಕ, ಅನ್ನಸಾಂಬಾರ, ಮೊಳಕೆ ಕಾಳು, ಹಾಲು, ಮೊಟ್ಟೆ, ಹಸಿ ತರಕಾರಿ ಸೇವಿಸಬೇಕು. ಇದರಿಂದ ಹಿಮೋಗ್ಲೊಬೀನ್ ಪ್ರಮಾಣ ಹೆಚ್ಚಾಗಿ ತಾಯಿ-ಮಗುವಿನ ಆರೋಗ್ಯ ವೃದ್ಧಿಸುತ್ತದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪೌಷ್ಟಿಕ ಆಹಾರ ಮತ್ತು ತಾಯಿಯ ಎದೆ ಹಾಲು ಅಗತ್ಯವಾಗಿದೆ ಎಂದು ತಿಳಿಸಿದರು.

    ಮುತ್ತವ್ವ ಪೂಜಾರಿ ಮಾತನಾಡಿ, ಹಸಿರು ತರಕಾರಿಗಳಲ್ಲಿ ಪೌಷ್ಟಿಕಾಂಶ ಹೆಚ್ಚಾಗಿರುತ್ತದೆ. ಗರ್ಭಿಣಿಯರು ತರಕಾರಿಯನ್ನು ಕಡ್ಡಾಯವಾಗಿ ಸೇವಿಸಬೇಕು . ತನ್ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

    ಗ್ರಾಪಂ ಸದಸ್ಯ ಮಾಳಪ್ಪ ಕಾಂಬಳೆ, ಲಕ್ಷ್ಮಣ ರೇಡೆಕರ, ಕರವೇ ಅಧ್ಯಕ್ಷ ಶ್ರೀಶೈಲ ಪೂಜಾರಿ, ಗಂಗಪ್ಪ ಹಟ್ಟಿ, ಅಂಗನವಾಡಿ ಕಾರ್ಯಕರ್ತೆಯರಾದ ಎಂ.ಎಸ್. ಪೂಜಾರಿ, ಭುವನೇಶ್ವರಿ ಮರಡಿ, ಸಾವಿತ್ರಿ ತೇಲಿ, ಶಾಂತಾ ಕಟ್ಟಿಮನಿ, ಮಾಲಾ ಕಾಂಬಳೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts