ಉತ್ತರಕನ್ನಡ: ಆಟೋ ರಿಕ್ಷಾ ಡಿಕ್ಕಿಯಾಗಿ ಗರ್ಭಿಣಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಮದಲ್ಲಿ ಇಂದು (ಏಪ್ರಿಲ್ 13) ನಡೆದಿದೆ.
ಶೋಭಾ ಗೋಪಾಲ ನಾಯಕ (28) ಮೃತ ದುರ್ದೈವಿ. ಶೋಭಾ ಅವರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು. ಗಂಡನೊಂದಿಗೆ ಮನೆಯ ಎದುರಿನ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.
ಇದನ್ನೂ ಓದಿ: ಮದುವೆಗೂ ಮುನ್ನ ನಟನೊಂದಿಗೆ ಸಂಬಂಧ: ಖುಷ್ಬೂ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ ತೆಲುಗು ನಟಿ
ಅತಿವೇಗ ಕಾರಣ
ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ಬಂದ ಕಾರಣ ಆಟೋ ರಿಕ್ಷಾ, ಚಾಲಕನ ನಿಯಂತ್ರಣ ತಪ್ಪಿ, ಗರ್ಭಿಣಿಗೆ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ಗರ್ಭಿಣಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾಳೆ.
ಚಾಲಕ ಪರಾರಿ
ಅಪಘಾತದ ಬಳಿಕ ರಿಕ್ಷಾ ಸಮೇತ ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್)
ಜಾನಪದ ಗಾಯಕಿ ಮೇಲೆ ನೋಟಿನ ಸುರಿಮಳೆ: ಸಂಗ್ರಹವಾದ ಒಟ್ಟು ಮೊತ್ತ ಕೇಳಿದ್ರೆ ದಂಗಾಗ್ತೀರಾ!