More

    ಹೊಟ್ಟೆಯಲ್ಲಿ ತಿಂಗಳು ತುಂಬಿದ ಮಗುವಿದ್ದರೂ ಕೋಟಿ ಕೋಟಿ ದುಡಿಯುತ್ತಾರೆ ಸೆಲೆಬ್ರಿಟಿಗಳು! ಅದು ಹೇಗೆ ಗೊತ್ತಾ?

    ಬೆಂಗಳೂರು: ಸೆಲೆಬ್ರಿಟಿಗಳು ಏನು ಮಾಡಿದರೂ ಅದು ಸುದ್ದಿಯೇ. ಹಾಗಿರುವಾಗ ಸೆಲೆಬ್ರಿಟಿಗಳು ಗರ್ಭಿಣಿಯಾದ್ರೆ? ಹೊಟ್ಟೆಯಲ್ಲಿ ಮಗು ಇರುವ ಸೆಲೆಬ್ರಿಟಿಗಳು ಏನು ಕೆಲಸ ಮಾಡದಿದ್ದರೂ ಕೋಟಿ ಕೋಟಿ ದುಡಿಯುತ್ತಾರಂತೆ. ಅದು ಹೇಗೆ? ಅಷ್ಟೊಂದು ಹಣವನ್ನು ಯಾರು ಕೊಡುತ್ತಾರೆ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

    ಇದನ್ನೂ ಓದಿ: ನಿನ್ನ ಆರೋಗ್ಯ ಸರಿಯಿಲ್ಲ…ನಾನು 2ನೇ ಮದುವೆಯಾಗ್ತೀನಿ ಎಂದ ಎರಡು ಮಕ್ಕಳ ತಂದೆಯ ಗತಿ ಏನಾಯ್ತು?

    ಸೆಲೆಬ್ರಿಟಿಗಳ ಮದುವೆ ಸುದ್ದಿಯನ್ನು ಕೇಳಿದ ಮೇಲೆ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತದೆಯಂತೆ. ಹೇಗೆ ಮದುವೆ. ಎಷ್ಟು ಸಂಭ್ರಮವಿತ್ತು ಎನ್ನುವುದನ್ನು ನೋಡಿದ ಮೇಲೆ ಅಭಿಮಾನಿಗಳೂ ಅವರಿಂದ ಸಾಕಷ್ಟು ಹೊಸತನವನ್ನು ಕಲಿಯುತ್ತಾರೆ. ನೆಚ್ಚಿನ ಸೆಲೆಬ್ರಿಟಿ ಮದುವೆಯಾದ ಮೇಲೆ ಯಾವಾಗ ಮಗು ಮಾಡಿಕೊಳ್ಳುತ್ತಾರೆ? ಗಂಡು ಮಗುವಾಗುತ್ತದೆಯೋ ಅಥವಾ ಹೆಣ್ಣೋ? ಏನು ಹೆಸರಿಡುತ್ತಾರೆ ಹೀಗೆ ಪ್ರತಿಯೊಂದನ್ನೂ ಕುತೂಹಲದಿಂದ ಕಾಯುತ್ತಿರುತ್ತಾರೆ. ಅದನ್ನೇ ಬಂಡವಾಳ ಮಾಡಿಕೊಳ್ಳುವ ದೊಡ್ಡ ದೊಡ್ಡ ಕಂಪನಿಗಳು, ತಮ್ಮ ಸಂಸ್ಥೆಯ ವಸ್ತುಗಳಿಗೆ ಆ ಗರ್ಭಿಣಿ ಸೆಲೆಬ್ರಿಟಿಗಳನ್ನು ಮಾರ್ಕೆಟಿಂಗ್​ಗೆ ಬಳಸಿಕೊಳ್ಳುತ್ತಾರೆ.

    ಗರ್ಭಧಾರಣ ಪರೀಕ್ಷೆ ಕಿಟ್​ನಿಂದ ಹಿಡಿದು, ಮಕ್ಕಳಿಗೆ ಹಾಕುವ ಡೈಪರ್​ವರೆಗೆ ಪ್ರತಿಯೊಂದಕ್ಕೆ ಒಂದಿಲ್ಲೊಂದು ಕಂಪನಿಗಳು ಒಪ್ಪಂದ ಮಾಡಿಕೊಳ್ಳುತ್ತವೆ. ಅವರು ತೊಡುವ ಬಟ್ಟೆಗಳನ್ನೂ ಒಪ್ಪಂದದ ಮೇರೆಗೇ ತೊಡುತ್ತಾರಂತೆ. ಫೇವರಿಟ್​ ಸೆಲೆಬ್ರಿಟಿ ಗರ್ಭಿಣಿಯಾದಾಗ ಏನು ತೊಟ್ಟಿದ್ದಾರೆ ಎಂದು ನೋಡುವ ಜನರು ಅದನ್ನೇ ಅನುಕರಣೆ ಮಾಡುತ್ತಾರಂತೆ. ಆದರೆ ಈ ವಿಚಾರ ಗರ್ಭಿಣಿ ಕುಟುಂಬ ಮತ್ತು ಕಂಪನಿಗೆ ಮಾತ್ರ ಗೊತ್ತಿರುತ್ತದೆ. ಹೊರಗಿನ ಪ್ರಪಂಚಕ್ಕೆ ಈ ಸೂಕ್ಷ್ಮತೆ ಗೊತ್ತಾಗದಂತೆ ಕಾಪಾಡಿಕೊಳ್ಳಲಾಗುತ್ತದೆ.

    ಇದನ್ನೂ ಓದಿ: ಮತ್ತೆ ಸಚಿವರ ಖಾತೆ ಅದಲು-ಬದಲು! ಯಾರಿಗೆ, ಯಾವುದು ಸಿಕ್ತು? ಇಲ್ಲಿದೆ ಡಿಟೇಲ್ಸ್​

    ವಿದೇಶಗಳಲ್ಲಂತೂ ಈ ಒಪ್ಪಂದ ತುಂಬಾ ಮಾಮೂಲಿಯಾಗಿದೆ. ಸೆಲೆಬ್ರಿಟಿಗಳ ಅಭಿಮಾನಿ ಬಳಗದ ಆಧಾರದ ಮೇಲೆ ಒಪ್ಪಂದದ ಮೌಲ್ಯವೂ ನಿಂತಿರುತ್ತದೆ. 7-8 ಕೋಟಿ ರೂಪಾಯಿ ಪಡೆಯುವ ಸೆಲೆಬ್ರಿಟಿಗಳೂ ಇದ್ದಾರಂತೆ. ಭಾರತದಲ್ಲಿಯೂ ಸೆಲೆಬ್ರಿಟಿಗಳು ಇದೇ ರೀತಿ ಒಪ್ಪಂದ ಮಾಡಿಕೊಂಡು ಮಾರ್ಕೆಂಟಿಗ್​ ಮಾಡುತ್ತಿದ್ದಾರಾ ಎನ್ನುವುದು ಮಾತ್ರ ಸೆಲೆಬ್ರಿಟಿಗಳಿಗೇ ಗೊತ್ತಿರುವ ವಿಚಾರ. (ಏಜೆನ್ಸೀಸ್​)

    ಕಬ್ಬಿನ ಗದ್ದೆಯಲ್ಲಿ ಅತ್ತಿಗೆ ಮೈದುನನ ಚಕ್ಕಂದ! ಸರಸದಲ್ಲಿದ್ದ ಜೋಡಿಯನ್ನು ಕೊಚ್ಚಿ ಕೊಂದ ಗಂಡ!

    ಫ್ರೀ ಇನ್ನರ್​ವೇರ್​ ಆಫರ್​ಗೆ ಮರುಳಾದ ಯುವತಿ! ಮುಂದೇನಾಯ್ತು ಕೇಳಿದರೆ ಶಾಕ್​ ಆಗೋದು ಗ್ಯಾರಂಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts