More

    ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ; ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿಯ ಬಂಧನ

    ಬೆಂಗಳೂರು: ಹಿಂದು ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎನ್​ಐಎ ತಂಡ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ತೌಫೀಲ್​ ಬಂಧಿತ ಆರೋಪಿ. ಎನ್ಐಎ ಅಧಿಕಾರಿಗಳು ನಿನ್ನೆ (ಮಾ.4) ರಾತ್ರಿ 9.30 ಕ್ಕೆ ಅಮೃತಹಳ್ಳಿ ಠಾಣೆ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ಬಂಧಿಸಿದ್ದಾರೆ.

    ಇದನ್ನೂ ಓದಿ: ಚಾಲೆಂಜ್ ಮಾಡಿ ಹೇಳುತ್ತಿದ್ದೇನೆ… ಡಿಕೆಶಿ ಮತ್ತು ಕುಮಾರಸ್ವಾಮಿ ನಿರುದ್ಯೋಗಿಗಳಾಗುವುದು ಖಚಿತ; ನಳಿನ್ ಕುಮಾರ್ ಕಟೀಲ್

    ಕೊಲೆ ಪ್ರಕರಣದ ಬಳಿಕೆ ತಲೆ ಮರೆಸಿಕೊಂಡಿದ್ದ ಆರೋಪಿ ತೌಫೀಲ್ ಪತ್ತೆಗಾಗಿ 5 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದರು. ಅಮೃತಹಳ್ಳಿಯ ಮಾರುತಿ ಲೇಔಟ್​ನಲ್ಲಿ ನಂಜುಂಡಪ್ಪ ಎಂಬುವರ ಮನೆಯಲ್ಲಿ ತೌಫಿಲ್ ಕಳೆದ ಐದಾರು ತಿಂಗಳಿನಿಂದ ಬಾಡಿಗೆಗೆ ಇದ್ದ. ಮೂರು ಅಂತಸ್ತಿನ ಕಟ್ಟಡದ ಮೊದಲನೇ ಮಹಡಿಯಲ್ಲಿ ವಾಸವಿದ್ದ ತೌಫಿಲ್ ಯಾರ ಜತೆಗೂ ಅಷ್ಟಾಗಿ ಸೇರದೆ, ಒಬ್ಬನೇ ಇದ್ದ. ಹೀಗಾಗಿ ಯಾರೂ ಆತನನ್ನು ಅಷ್ಟಾಗಿ ಮಾತನಾಡಿಸುತ್ತಿರಲಿಲ್ಲ.

    ಮಡಿಕೇರಿ ಮೂಲದ ಆರೋಪಿ ತೌಫಿಲ್ ಸದ್ಯ ಬಂಧಿಸಿರುವ ಎನ್ಐಎ ತಂಡ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸಂಬಂಧ ಈವರೆಗೆ 14 ಆರೋಪಿಗಳನ್ನು ಬಂಧಿಸಿಲಾಗಿದ್ದು, 6 ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

    ಇದನ್ನೂ ಓದಿ: ಮಹಿಳಾ ದಿನಾಚರಣೆ ಪ್ರಯುಕ್ತ ವಿಶೇಷ ಕೊಡುಗೆ ನೀಡಿದ ವಂಡರ್‌ಲಾ; ಮಹಿಳೆಯರಿಗೆ ಒಂದು ಟಿಕೆಟ್‌ ಖರೀದಿಗೆ ಮತ್ತೊಂದು ಟಿಕೆಟ್‌ ಉಚಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts