More

    ಪ್ರತಿಭಾ ಕಾರಂಜಿ, ಕಲೋತ್ಸವದಲ್ಲಿ ಮಿಂದೆದ್ದ ಮಕ್ಕಳು

    ಶಿವಮೊಗ್ಗ: ನಗರದ ಹೃದಯ ಭಾಗದಲ್ಲಿ ಸೋಮವಾರ ಬಣ್ಣದ ಲೋಕ ಸೃಷ್ಟಿಯಾಗಿತ್ತು. ಮುಖಕ್ಕೆ ಅಂದವಾದ ಬಣ್ಣ ಹಚ್ಚಿಕೊಂಡು ವಿವಿಧ ವೇಷಭೂಷಣ ಧರಿಸಿ ಓಡಾಡುತ್ತಿದ್ದ ಪುಟಾಣಿ ಮಕ್ಕಳು ಆಕರ್ಷಣೆಯ ಕೇಂದ್ರ ಬಿಂದುಗಳಾಗಿದ್ದವು. ಅದು ಜಾನಪದ, ಚಿತ್ರಕಲೆ, ಭರತನಾಟ್ಯ, ಕವ್ವಾಲಿ ಸೇರಿದಂತೆ ಹತ್ತು ಹಲವು ಸ್ಪರ್ಧೆಗಳಲ್ಲಿ ತೊಡಗಿಕೊಂಡಿದ್ದ ಮಕ್ಕಳ ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾಯಿತು.
    ಇದು ಶಿವಮೊಗ್ಗ ದುರ್ಗಿಗುಡಿ ಸರ್ಕಾರಿ ಶಾಲೆ ಆವರಣದಲ್ಲಿ ಸೋಮವಾರ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಕಂಡುಬಂದ ದೃಶ್ಯಗಳು. ಶಿವಮೊಗ್ಗ ತಾಲೂಕಿನ 638 ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳ 32 ಕ್ಲಸ್ಟರ್‌ನ 2,600ಕ್ಕೂ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ತಮ್ಮಲ್ಲಿ ಅಡಗಿದ್ದ ಪ್ರತಿಭೆಯನ್ನು ಹೊರಹಾಕಿದರು.
    ಒಂದರಿಂದ ಎಸ್ಸೆಸ್ಸೆಲ್ಸಿವರೆಗೆ ಪ್ರತಿಭಾ ಕಾರಂಜಿ ಮತ್ತು 9ರಿಂದ 12ನೇ ತರಗತಿವರೆಗೆ ಕಲೋತ್ಸವ ಸ್ಪರ್ಧೆಗಳನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್, ಶಿವಮೊಗ್ಗದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆಸಲಾಯಿತು. ಕಿರಿಯ ಪ್ರಾಥಮಿಕ ವಿಭಾಗ, ಹಿರಿಯ ಪ್ರಾಥಮಿಕ ವಿಭಾಗ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಸ್ಪರ್ಧೆಗಳ ವಿಜೇತರಿಗೆ ಬ್ಯಾಂಕ್ ಖಾತೆ ಮೂಲಕ ಪ್ರಥಮ ಸ್ಥಾನ ಪಡೆದವರಿಗೆ 300 ರೂ., ದ್ವಿತೀಯ ಸ್ಥಾನ ಪಡೆದವರಿಗೆ 200 ರೂ. ಮತ್ತು ತೃತೀಯ ಸ್ಥಾನ ಪಡೆದವರಿಗೆ 150 ರೂ. ನೇರವಾಗಿ ವರ್ಗಾವಣೆಗೊಂಡಿತು.
    ಯಾವ ಯಾವ ಸ್ಪರ್ಧೆ ?:
    ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಕಂಠಪಾಠ ಕನ್ನಡ, ಕಂಠಪಾಠ ಇಂಗ್ಲಿಷ್, ಕಂಠಪಾಠ ಉರ್ದು, ಧಾರ್ಮಿಕ ಪಠಣ ಸಂಸ್ಕೃತ, ಧಾರ್ಮಿಕ ಪಠಣ ಅರೇಬಿಕ್, ಲಘು ಸಂಗೀತ, ಛದ್ಮವೇಷ, ಕಥೆ ಹೇಳುವುದು, ಚಿತ್ರಕಲೆ ಮತ್ತು ಬಣ್ಣ ಹಚ್ಚುವಿಕೆ, ಅಭಿನಯ ಗೀತೆ, ಕ್ಲೇಮಾಡ್ಲಿಂಗ್, ಭಕ್ತಿಗೀತೆ, ಆಶುಭಾಷಣವಿತ್ತದ್ದರೆ, ಪ್ರೌಢಶಾಲೆ ಮಕ್ಕಳಿಗೆ ಮಿಮಿಕ್ರಿ, ಭರತನಾಟ್ಯ, ಭಾವಗೀತೆ, ಜಾನಪದ ಗೀತೆ, ಹಾಸ್ಯ, ಚರ್ಚಾಸ್ಪರ್ಧೆ, ರಂಗೋಲಿ, ಗಝಲ್, ಜನಪದ ನೃತ್ಯ, ಕವ್ವಾಲಿ, ರಸಪ್ರಶ್ನೆ, ಕನ್ನಡ, ಇಂಗ್ಲಿಷ್ ಮತ್ತು ಉರ್ದು ಭಾಷಣ, ಸಂಸ್ಕೃತ ಮತ್ತು ಅರೇಬಿಕ್ ಧಾರ್ಮಿಕ ಪಠಣ, ಚಿತ್ರಕಲೆ ಮತ್ತು ಬಣ್ಣ ಹಚ್ಚುವಿಕೆ ಆಯೋಜಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts