More

    ಅಗಲಿದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಕೆ: ಧ್ರುವನಾರಾಯಣ ಹೆಸರು ಸೇರಿಸಲು ಸ್ಪೀಕರ್​ಗೆ ಪ್ರತಾಪ್​ ಸಿಂಹ ಮನವಿ

    ಬೆಂಗಳೂರು: ನಿನ್ನೆ (ಜುಲೈ 20) ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ಆರಂಭವಾಗಿದೆ. ಸಾಮಾನ್ಯವಾಗಿ ಮೊದಲ ದಿನದ ಕಲಾಪದಲ್ಲಿ ಮೃತಪಟ್ಟ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ವಾಡಿಕೆ. ಆದರೆ, ಮಾಜಿ ಸಂಸದ ದಿವಂಗತ ಧ್ರುವನಾರಾಯಣ ಅವರ ಹೆಸರನ್ನು ಮರೆತಿರುವ ಹಿನ್ನೆಲೆ ಅವರ ಹೆಸರನ್ನು ಸೇರಿಸುವಂತೆ ಸಂಸದ ಪ್ರತಾಪ್​ ಸಿಂಹ ಲೋಕಸಭಾ ಸ್ಪೀಕರ್​ಗೆ ಮನವಿ ಮಾಡಿದ್ದಾರೆ.

    ಈ ಬಗ್ಗೆ ಪ್ರತಾಪ್​ ಸಿಂಹ ಅವರು ತಮ್ಮ ಫೇಸ್​ಬುಕ್ ಪೇಜ್​ನಲ್ಲಿ ಬರೆದುಕೊಂಡಿದ್ದಾರೆ.​ ಲೋಕಸಭೆ ಅಧಿವೇಶನ ಪ್ರಾರಂಭದ ದಿನ ಮೃತ ಮಾಜಿ ಮತ್ತು ಹಾಲಿ ಸಂಸದರಿಗೆ ಶ್ರದ್ಧಾಂಜಲಿ ಅರ್ಪಿಸುವುದು ವಾಡಿಕೆ. ಆದರೆ ನಿನ್ನೆ ಶ್ರದ್ಧಾಂಜಲಿ ಅರ್ಪಿಸುವಾಗ ಧ್ರುವನಾರಾಯಣ ಸಾಹೇಬರ ಹೆಸರು ಬಿಟ್ಟು ಹೋಗಿತ್ತು. ಇಂದು ಸ್ಪೀಕರ್ ಅವರನ್ನು ಭೇಟಿಯಾಗಿ ಶ್ರದ್ಧಾಂಜಲಿ ಸಲ್ಲಿಸುವಂತೆ ಮನವಿ ಮಾಡಿಕೊಂಡೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ‘ಬೇಬಿ’ ಚಿತ್ರದ ಸಕ್ಸಸ್​ ಮೀಟ್​​ನಲ್ಲಿ ‘ಪುಷ್ಪಾ-2’ ಡೈಲಾಗ್​ ಹೊಡೆದ ಅಲ್ಲು ಅರ್ಜುನ್​; ಸುಳಿವು ಬಿಟ್ಟುಕೊಟ್ಟಿದ್ಯಾಕೆ ಎಂದ ಫ್ಯಾನ್ಸ್?

    ಸ್ಪೀಕರ್​​ ಮನವಿ ಮಾಡಿಕೊಂಡಿರುವ ಪತ್ರವನ್ನು ಸಹ ಪ್ರತಾಪ್​ ಸಿಂಹ ಅವರ ಫೇಸ್​ಬುಕ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

    ಧ್ರುವನಾರಾಯಣ ಕುರಿತು

    ಕಾಂಗ್ರೆಸ್​ ಕಟ್ಟಾಳು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​. ಧ್ರುವನಾರಾಯಣ (61) ಅವರು ತೀವ್ರ ಹೃದಯಾಘಾತದಿಂದ ಮೈಸೂರಿನ ಡಿಆರ್​ಎಂ ಆಸ್ಪತ್ರೆಯಲ್ಲಿ ಕಳೆದ ಮಾ.11ರಂದು ವಿಧಿವಶರಾದರು. ಧ್ರುವನಾರಾಯಣ ಅವರು ಕಾಂಗ್ರೆಸ್​ ಪಕ್ಷದ ನಿಷ್ಠಾವಂತ ನಾಯಕರಾಗಿದ್ದರು. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 2004ರಲ್ಲಿ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ಒಂದು ಮತದ ಅಂತರದಲ್ಲಿ ಗೆಲುವು ಸಾಧಿಸಿದ್ದರು.

    ಇದನ್ನೂ ಓದಿ: ಬಿಜೆಪಿಯವರು ಗಾಂಧೀಜಿಯನ್ನು ಕೊಂದ ವಂಶದವರು; ಗಾಂಧಿ ಪ್ರತಿಮೆ ಮುಂದೆ ಕೂರಲು ಇವರಿಗೆ ಯಾವ ನೈತಿಕತೆಯಿದೆ: ಸಿಎಂ

    2008ರ ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2009 ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. 2014ರಲ್ಲೂ ಕೂಡ ಗೆಲುವು ಪಡೆದಿದ್ದರು. ಆದರೆ, 2018ರಲ್ಲಿ ಶ್ರೀನಿವಾಸ್ ಪ್ರಸಾದ್ ವಿರುದ್ಧ ಸೋಲು ಕಂಡಿದ್ದರು. ಸೋಲಿನ ಬಳಿಕವೂ ತುಂಬಾ ಆ್ಯಕ್ಟೀವ್ ಆಗಿದ್ದ ಧ್ರುವನಾರಾಯಣ್, ವಿಧಾನಸಭಾ ಚುನಾವಣೆಗೆ ನಂಜನಗೂಡು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು. ಸಂಸದರಾಗಿದ್ದ ವೇಳೆ ಅನುದಾನ ಬಳಕೆ ವಿಚಾರದಲ್ಲೂ ಉತ್ತಮ ಹೆಸರು ಪಡೆದಿದ್ದರು. ಅಲ್ಲದೆ, ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿಗಳ ವಿಚಾರದಲ್ಲೂ ಉತ್ತಮ ಹೆಸರು ಪಡೆದಿದ್ದರು. (ದಿಗ್ವಿಜಯ ನ್ಯೂಸ್​)

    ತೀವ್ರ ಹೃದಯಾಘಾತದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​. ಧ್ರುವನಾರಾಯಣ ವಿಧಿವಶ

    ಮಿಸ್ಟರ್ ಮೋದಿಯವರೇ ಈ ರೀತಿ ಮಾಡಿದ್ರೆ ಬಡವರು ಏನು ಮಾಡ್ಬೇಕು? ಸಿಎಂ ಸಿದ್ದರಾಮಯ್ಯ ಪ್ರಶ್ನೆ

    ಬೆತ್ತಲೆ ಮೆರವಣಿಗೆ ಕೇಸ್​: ದೇಶವನ್ನು ರಕ್ಷಿಸಿದ ನನಗೆ ಪತ್ನಿಯನ್ನು ರಕ್ಷಿಸಲಾಗಲಿಲ್ಲ, ನಿವೃತ್ತ ಯೋಧನ ಕಣ್ಣೀರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts