More

    ಸಿದ್ದರಾಮಯ್ಯ ಹೈವೆ ವೀಕ್ಷಣೆ ಬರುತ್ತಿಲ್ಲ, ಬರ್ತಿರೋದು ಜಾಲಿ ರೈಡ್​​ಗೆ; ಪ್ರತಾಪ್ ಸಿಂಹ ಟಾಂಗ್​

    ಮಂಡ್ಯ : ಮಾಜಿ ಸಿಎಂ ಸಿದ್ದರಾಮಯ್ಯ ಹೈವೆ ವೀಕ್ಷಣೆಗೆ ಬರುತ್ತಿದ್ದಾರೆ. ವೀಕ್ಷಣೆಗೂ ಜಾಲಿ ರೈಡಿಗೂ ವ್ಯತ್ಯಾಸ ಇದೆ. ಸಿದ್ದರಾಮಯ್ಯ ಬರ್ತಿರೋದು ಜಾಲಿ ರೈಡ್​​ಗೆ ಎಂದು ಮಂಡ್ಯದ ಗೆಜ್ಜಲಗೆರೆ ಕಾಲೋನಿಯಲ್ಲಿ ಸಂಸದ ಪ್ರತಾಪ್ ಸಿಂಹ ಟಾಂಗ್ ಕೊಟ್ಟಿದ್ದಾರೆ.

    ಕಾಮಗಾರಿ ಪ್ರಗತಿಯಲ್ಲಿದ್ದಾಗ ವೀಕ್ಷಕಣೆಗೆ ಬಂದರೆ ಅದು ರಿವ್ಯೂ ಆಗುತ್ತದೆ. ಉದ್ಘಾಟನೆಗೆ ಸಿದ್ಧವಾಗಿದ್ದಾಗ ಬಂದರೆ ಅದು ಜಾಲಿ ರೈಡ್ ಆಗುತ್ತದೆ. ಅವರ ಕೊಡುಗೆ ಇದ್ದಿದ್ದರೆ ಕಾಮಗಾರಿ ಪ್ರಗತಿಯಲ್ಲಿದ್ದಾಗ ಬಂದು ರಿವ್ಯೂ ಮಾಡುತ್ತಿದ್ದರು. ಕೋಲಾರದಲ್ಲಿ ಸಿದ್ದರಾಮಯ್ಯಗೆ ನೆಲೆ ಸಿಗುವುದು ಡೌಟ್ ಆಗಿದೆ. ಅವರು ಮತ್ತೆ ವರುಣಾ ಹೋಗಬೇಕು.ಅದಕ್ಕಾಗಿ ಈ ರಸ್ತೆಯಲ್ಲಿ ಜಾಲಿ ರೈಡ್‌ಗೆ ಬರ್ತಿದ್ದಾರೆಂದು ವಾಗ್ಧಾಳಿ ಮಾಡಿದ್ದಾರೆ.

    ನೂತನ ಹೆದ್ದಾರಿ ನಾಮಕರಣ ವಿಚಾರವಾಗಿ ಇನ್ನೂ ತೀರ್ಮಾನವಾಗಿಲ್ಲ. ಈ ವಿಚಾರದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇಡೀ ದೇಶದಲ್ಲಿ ಯಾವುದೇ ಹೆದ್ದಾರಿಗೆ ವ್ಯಕ್ತಿ ಹೆಸರಿಟ್ಟ ಉದಾಹರಣೆ‌ ಇಲ್ಲ. ನಗರದ ರಸ್ತೆಗಳಿಗೆ ವ್ಯಕ್ತಿಗಳ ಹೆಸರಿಟ್ಟಿದ್ದಾರೆ. ಉ.ಪ್ರ ಸರ್ಕಾರ ಹೆದ್ದಾರಿಗೆ ಗಂಗಾ, ಯಮುನಾ ನದಿಗಳ ಹೆಸರು ಇಡಲಾಗಿತ್ತು. ಯಾಕೆಂದರೆ ಪವಿತ್ರ ನದಿಗಳು ಎಂಬ ಕಾರಣಕ್ಕಾಗಿದೆ  ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಒಂದು ತಿಂಗಳ ಕಾಲ ಕೀಟ ತಿಂದು, ತನ್ನ ಮೂತ್ರವನ್ನೇ ಕುಡಿದು ಬದುಕುಳಿದ!

    ಮಂಡ್ಯ, ಮೈಸೂರು, ಬೆಂಗಳೂರು ಸುಭಿಕ್ಷವಾಗಿರಲು ಕಾವೇರಿ ತಾಯಿ ಕಾರಣ. ಅದಕ್ಕಾಗಿ ಕಾವೇರಿ ಹೆಸರಿಡಲು ಸೂಚಿಸಿದ್ದೇನೆ. ಆದರೆ ಕೆಲವರು ನಾಲ್ವಡಿ ಕೃಷ್ಣರಾಜರ ಹೆಸರು ಹೇಳಿದ್ದರು. ಈ ಹೆಸರು ಮೈಸೂರು ಏರ್‌ಪೋರ್ಟ್‌ಗೆ ಇಡುತ್ತಿದ್ದೇವೆ.319 ಕೋಟಿ ರೂ. ಮೈಸೂರು ಏರ್‌ಪೋರ್ಟ್‌ಗೆ ನೀಡಲಾಗಿದೆ ಎಂದಿದ್ದಾರೆ.

    ರೈಲ್ವೆ ಸ್ಟೇಷನ್‌ಗೆ ಹಳಿ ಹಾಕಲು ಪ್ರಾರಂಭಿಸಿದ್ದು ಚಾಮರಾಜ ಒಡೆಯರು. ಹಾಗಾಗಿ ರೈಲ್ವೆ ಸ್ಟೇಷನ್‌ಗೆ ಅವರ ಹೆಸರು ನಾಮಕರಣ ಮಾಡಲಾಗಿದೆ. ಅನಗತ್ಯ ಗೊಂದಲ ಬೇಡ ಎಲ್ಲರೂ ಒಪ್ಪಿಗೆ ಕೊಟ್ಟರೆ ಎಕ್ಸ್‌ಪ್ರೆಸ್‌ ವೇಗೆ ಕಾವೇರಿ ಹೆಸರು ಇಡಲಾಗುತ್ತದೆ. ಮಂಡ್ಯದ ಪ್ರತಿ ಮನೆಯಲ್ಲೂ ಕಾವೇರಿ ಮಾತೆ ಪೂಜಿಸುತ್ತಾರೆ.ಅದನ್ನ ಅರ್ಥ ಮಾಡಿಕೊಂಡು ಜನರ ಭಾವನೆಗೆ ಬೆಲೆ‌ ಕೊಡಿ. ಹೆಸರು ವಿಚಾರದಲ್ಲಿ ಈಗ ಯಾವುದೇ ತೀರ್ಮಾನ ತೆಗೆದುಕೊಳ್ಳಲ್ಲ ಎಂದು ಹೇಳಿದ್ದಾರೆ.

    ಇನ್‌ಸ್ಟಾಗ್ರಾಮ್‌ ರೀಲ್‌ ಚಿತ್ರೀಕರಿಸುವ ವೇಳೆ ಭೀಕರ ಅಪಘಾತ: ಮಹಿಳೆ ಸಾವು, ಇಬ್ಬರು ಅರೆಸ್ಟ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts