More

    ರಿಷಿ ಚಿತ್ರದ ಮೂಲಕ ನಿರ್ದೇಶಕರಾಗಿ ಪ್ರಮೋಷನ್​ ಪಡೆದ ಸಂಭಾಷಣೆಕಾರ ಪ್ರಶಾಂತ್ ರಾಜಪ್ಪ

    ಬೆಂಗಳೂರು: ಸ್ಯಾಂಡಲ್​ವುಡ್​ನ ಜನಪ್ರಿಯ ಸಂಭಾಷಣೆಕಾರರ ಪೈಕಿ ಪ್ರಶಾಂತ್ ರಾಜಪ್ಪ ಸಹ ಒಬ್ಬರು. ‘ವಿಕ್ಟರಿ’, ‘ಅಧ್ಯಕ್ಷ’, ‘ರನ್ನ’, ‘ಪೊಗರು’, ‘ಹೊಂದಿಸಿ ಬರೆಯಿರಿ’ ಸೇರಿದಂತೆ 25ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಭಾಷಣೆ ಬರೆದಿರುವ ಪ್ರಶಾಂತ್​ ರಾಜಪ್ಪ, ಈಗ ನಿರ್ದೇಶಕರಾಗುವುದಕ್ಕೆ ಹೊರಟಿದ್ದಾರೆ. ರಿಷಿ ಅಭಿನಯದ ಹೊಸ ಚಿತ್ರಕ್ಕೆ ಆಕ್ಷನ್​-ಕಟ್​ ಹೇಳುವುದಕ್ಕೆ ಸಿದ್ಧತೆ ನಡೆಸಿದ್ದಾರೆ.

    ಇದನ್ನೂ ಓದಿ: 300 ಕೇಂದ್ರಗಳಲ್ಲಿ ಹಾಫ್​ ಸೆಂಚ್ಯುರಿ ಬಾರಿಸಿದ ‘ಕಾಂತಾರ’

    ನಿರ್ದೇಶಕನಾಗಬೇಕು ಎಂಬುದು ಪ್ರಶಾಂತ್ ರಾಜಪ್ಪ ಅವರ ಬಹಳ ವರ್ಷದ ಕನಸಂತೆ. ಅದೀಗ ನನಸಾಗುವ ಹಂತಕ್ಕೆ ಬಂದಿದೆ. ಇದಕ್ಕೂ ಮುನ್ನ ಗುರುಪ್ರಸಾದ್, ಪಿ.ಸಿ. ಶೇಖರ್, ಮುಂತಾದವರ ಚಿತ್ರಗಳಿಗೆ ಅಸೋಸಿಯೇಟ್​ ಆಗಿ ಕೆಲಸ ಮಾಡಿರುವ ಪ್ರಶಾಂತ್​, ಈಗ ರಿಷಿ ಅಭಿನಯದ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸುವುದರ ಜತೆಗೆ ನಿರ್ದೇಶಕರಾಗುತ್ತಿದ್ದಾರೆ.

    ‘ಆಪರೇಷನ್ ಅಲಮೇಲಮ್ಮ’, ‘ಕವಲು ದಾರಿ’ ಮುಂತಾದ ಚಿತ್ರಗಳಲ್ಲಿ ನಟಿಸಿರುವ ರಿಷಿ ಈ ಬಾರಿ ಕಾಮಿಡಿ ಎಮೋಷನಲ್ ಡ್ರಾಮಾಗೆ ಗ್ರೀನ್​ ಸಿಗ್ನಲ್​ ನೀಡದ್ದಾರೆ. ಈ ಚಿತ್ರದ ಪ್ರೀಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಡಿಸೆಂಬರ್​ನಲ್ಲಿ ಸಿನಿಮಾದ ಮುಹೂರ್ತ ನಡೆಯಲಿದೆಯಂತೆ.

    ಇದನ್ನೂ ಓದಿ: ತಮನ್ನಾ ಮದುವೆಯಂತೆ! ಅಭಿಮಾನಿಗಳಿಗೆ ಹುಡುಗನ ದರ್ಶನ ಮಾಡಿಸಿದ ನಟಿ

    ಡಿಸೆಂಬರ್​ನಲ್ಲಿ ಚಿತ್ರದ ಮುಹೂರ್ತವಾದರೂ ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಸದ್ಯದಲ್ಲೇ ಸಿನಿಮಾದ ಶೀರ್ಷಿಕೆ ಮತ್ತು ತಾರಾಬಳಗವನ್ನು ಬಹಿರಂಗಗೊಳಿಸುವ ಐಡಿಯಾ ಚಿತ್ರತಂಡದ್ದು.

    ನಟಿ ರಶ್ಮಿಕಾ ಮಂದಣ್ಣ ಬಳಿ ಕ್ಷಮೆಯಾಚಿಸಿದ ಕ್ರಿಕೆಟಿಗ ಡೇವಿಡ್​ ವಾರ್ನರ್: ಕಾರಣ ಈ ಒಂದು ವಿಡಿಯೋ….​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts