More

    ನಟಿ ರಶ್ಮಿಕಾ ಮಂದಣ್ಣ ಬಳಿ ಕ್ಷಮೆಯಾಚಿಸಿದ ಕ್ರಿಕೆಟಿಗ ಡೇವಿಡ್​ ವಾರ್ನರ್: ಕಾರಣ ಈ ಒಂದು ವಿಡಿಯೋ….​

    ಹೈದರಾಬಾದ್​: ಐಪಿಎಲ್ (IPL)​ನಿಂದಾಗಿ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್​ ವಾರ್ನರ್​ (David Warner) ಭಾರತೀಯರಿಗೆ ತುಂಬಾ ಹತ್ತಿರವಾಗಿದ್ದಾರೆ. ಅದರಲ್ಲೂ ತೆಲುಗು ಜನರಿಗೆ ವಾರ್ನರ್​ ಅಂದ್ರೆ ತುಂಬಾ ಇಷ್ಟ. ಏಕೆಂದರೆ, ವಾರ್ನರ್​ ಹೈದರಾಬಾದ್​ (Hyderabad) ತಂಡದ ಪರ ಆಡಿದ್ದು ಮಾತ್ರವಲ್ಲ, ತೆಲುಗು ಸಿನಿಮಾಗಳ ಹಾಡಿಗೆ ತಮ್ಮ ಕುಟುಂಬದೊಂದಿಗೆ ಹೆಜ್ಜೆ ಹಾಕುವ ಮೂಲಕ ತೆಲುಗು ಮಂದಿಯ ಮನಸ್ಸನ್ನು ಗೆದ್ದಿದ್ದಾರೆ.

    ತಮ್ಮ ಇನ್​ಸ್ಟಾಗ್ರಾಂ (Instagram)ನಲ್ಲಿ ತೆಲುಗು ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋವನ್ನು ಆಗಾಗ ವಾರ್ನರ್​ ಶೇರ್​ ಮಾಡಿಕೊಳ್ಳುತ್ತಾರೆ. ಅದರಲ್ಲೂ ನಟರ ಮುಖಕ್ಕೆ ತಮ್ಮ ಮುಖವನ್ನು ಎಡಿಟ್​ ಮಾಡಿದ ವಿಡಿಯೋಗಳನ್ನು ಹೆಚ್ಚಾಗಿ ಶೇರ್​ ಮಾಡಿಕೊಂಡಿದ್ದಾರೆ. ಈ ಬಾರಿ ವಾರ್ನರ್​ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಕ್ಷಮೆ ಕೇಳಿದ್ದಾರೆ. ಅದಕ್ಕೆ ಕಾರಣವೂ ಇದೆ. ರಶ್ಮಿಕಾ ನಟನೆಯ ಭೀಷ್ಮಾ (Bheeshma) ಚಿತ್ರದ ಹಾಡಿಗೆ ವಾರ್ನರ್​ ಹೆಜ್ಜೆ ಹಾಕಿದ್ದಾರೆ. ಅಂದರೆ, ನಿಜವಾಗಿಯು ಅಲ್ಲ. ರಶ್ಮಿಕಾ ಅವರ ಮುಖಕ್ಕೆ ತಮ್ಮ ಮುಖವನ್ನು ಎಡಿಟ್​ ಮಾಡಿದ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಅಲ್ಲದೆ, ನೆಟ್ಟಿಗರು ಫಿದಾ ಸಹ ಆಗಿದ್ದಾರೆ.

    ವಿಡಿಯೋ ಪೋಸ್ಟ್​ ಮಾಡಿರುವ ವಾರ್ನರ್​ ರಶ್ಮಿಕಾರ ಬಳಿ ಕ್ಷಮೆ ಸಹ ಕೋರಿದ್ದಾರೆ. ಈ ವಿಡಿಯೋ ಮಾಡಿದ್ದಕ್ಕಾಗಿ ಕ್ಷಮೆ ಇರಲಿ ಎಂದಿದ್ದಾರೆ. ಸದ್ಯ ಈ ವಿಡಿಯೋ 6 ಲಕ್ಷಕ್ಕೂ ಅಧಿಕ ಲೈಕ್ಸ್​ ಪಡೆದುಕೊಂಡಿದೆ. 17 ಸಾವಿರಕ್ಕೂ ಹೆಚ್ಚು ಮಂದಿ ಕಾಮೆಂಟ್​ ಮಾಡಿದ್ದಾರೆ. ಈ ವಿಡಿಯೋ ನೋಡಿ ರಶ್ಮಿಕಾ ಏನೆಂದು ಕಾಮೆಂಟ್​ ಮಾಡಲಿದ್ದಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸುವುದನ್ನು ಮರೆಯಬೇಡಿ. (ಏಜೆನ್ಸೀಸ್​)

    ನಮ್ಮ ಅವಧಿಯಲ್ಲಿ ಮತದಾರರ ಮಾಹಿತಿ ದುರ್ಬಳಕೆಯಾಗಿದ್ರೆ ನಮ್ಮನ್ನು ಬಂಧಿಸಲಿ: ಸರ್ಕಾರಕ್ಕೆ ಡಿಕೆಶಿ ಸವಾಲು

    ನಾಯಕನಾಗಿ ಹಾರ್ದಿಕ್ ಪಾಂಡ್ಯಾ ಉತ್ಸಾಹವನ್ನು ಕಪಿಲ್ ದೇವ್​ಗೆ ಹೋಲಿಸಿದ ರವಿಶಾಸ್ತ್ರಿ…

    ದಕ್ಷಿಣ ಪಿನಾಕಿನಿ ನದಿ ನೀರು ಹಂಚಿಕೆ ನೆಪದಲ್ಲಿ ನ್ಯಾಯಾಧಿಕರಣ ರಚಿಸಲು ಕೇಂದ್ರ ಹುನ್ನಾರ: ಮಾಜಿ ಸಿಎಂ ಎಚ್​ಡಿಕೆ ವಿರೋಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts