More

    300 ಕೇಂದ್ರಗಳಲ್ಲಿ ಹಾಫ್​ ಸೆಂಚ್ಯುರಿ ಬಾರಿಸಿದ ‘ಕಾಂತಾರ’

    ಬೆಂಗಳೂರು: ಯಶ್​ ಅಭಿನಯದ ‘ಕೆಜಿಎಫ್​ 2’ ಮತ್ತು ರಕ್ಷಿತ್​ ಶೆಟ್ಟಿ ಅಭಿನಯದ ‘777 ಚಾರ್ಲಿ’ ನಂತರ ಇನ್ನೊಂದು ಚಿತ್ರ ಈ ವರ್ಷ 50 ದಿನಗಳನ್ನು ಪೂರೈಸಿದೆ. ಆದರೆ, ಆ ಎರಡೂ ಚಿತ್ರಗಳು ಮಾಡದ ಒಂದು ದಾಖಲೆಯನ್ನು ‘ಕಾಂತಾರ’ ಮಾಡಿದೆ. ಚಿತ್ರವು 50 ದಿನಗಳನ್ನು ಪೂರೈಸಿರುವುದಷ್ಟೇ ಅಲ್ಲ, 300 ಕೇಂದ್ರಗಳಲ್ಲಿ ಪೂರೈಸಿರುವುದು ವಿಶೇಷ.

    ಇದನ್ನೂ ಓದಿ: ‘ಜೈಲರ್​’ ಜತೆಯಾದ ಶಿವಣ್ಣ; ಚಿತ್ರೀಕರಣದಲ್ಲಿ ಭಾಗಿ

    ಹೊಂಬಾಳೆ ಫಿಲಂಸ್ ಬ್ಯಾನರ್​​ನಡಿ ವಿಜಯ್ ಕುಮಾರ್ ಕಿರಗಂದೂರು ನಿರ್ಮಿಸಿ, ರಿಷಭ್ ಶೆಟ್ಟಿ ಅಭಿನಯಿಸಿ-ನಿರ್ದೇಶಿಸಿರುವ ‘ಕಾಂತಾರ’ ಚಿತ್ರವು ಸೆ. 30ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಚಿತ್ರವು ರಾಜ್ಯದ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲದೆ, ವಿದೇಶಗಳಲ್ಲೂ ಹಲವು ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಮುಗಿಸಿ, 100ನೇ ದಿನದತ್ತ ಮುನ್ನಡೆದಿದೆ.

    ಬರೀ ಕನ್ನಡವಷ್ಟೇ ಅಲ್ಲ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂಗೆ ಡಬ್ ಆಗಿರುವ ‘ಕಾಂತರ’, ಅಲ್ಲೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಕನ್ನಡ ಅವತರಣಿಕೆ ಬಿಡುಗಡೆಯಾಗಿ ಎರಡು ವಾರಗಳಲ್ಲಿ ಆ ಬೇರೆ ಅವರತರಣಿಕೆಯ ಚಿತ್ರಗಳು ಬಿಡುಗಡೆಯಾಗಿದ್ದು, ಆ ಅವತರಣಿಕೆಗಳು ಸಹ ಸದ್ಯದಲ್ಲೇ ಸದ್ಯದಲ್ಲೇ 50 ದಿನಗಳನ್ನು ಪೂರೈಸಲಿದೆ.

    ಕಲೆಕ್ಷನ್​ ವಿಷಯದಲ್ಲಿ ಹೇಳುವುದಾದರೆ, ಕನ್ನಡ ಅವತರಣಿಕೆಯೊಂದೇ ಕಳೆದ 50 ದಿನಗಳಲ್ಲಿ 130 ಪ್ಲಸ್​ ಕೋಟಿ ರೂ.ಗಳನ್ನು ಬಾಚಿಕೊಂಡಿದೆ ಎಂದು ಹೇಳಲಾಗುತ್ತಿದೆ. ಹಿಂದಿ ಅವತರಣಿಕೆಯು 60 ಕೋಟಿ ರೂ. ಮತ್ತು ತೆಲುಗು ಅವತರಣಿಕೆಯು 60 ಕೋಟಿ ರೂ.ಗಳ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ತಮಿಳು ಮತ್ತು ಮಲಯಾಳಂ ಅವತರಣಿಕೆಗಳಿಗೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಇದುವರೆಗೂ ‘ಕಾಂತಾರ’ ಚಿತ್ರವು ಜಗತ್ತಿನಾದ್ಯಂತ 300ಕ್ಕೂ ಹೆಚ್ಚು ಕೋಟಿ ರೂ.ಗಳನ್ನು ಸಂಗ್ರಹಿಸಿದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ‘ಬಿಂಗೊ’ ಎನ್ನುತ್ತಿದ್ದಾರೆ ರಾಗಿಣಿ; ಹೊಸ ಚಿತ್ರದಲ್ಲಿ ನಟನೆ

    ‘ಕಾಂತಾರ’ ಚಿತ್ರವನ್ನು ಹೊಂಬಾಳೆ ಫಿಲಂಸ್​ನ ವಿಜಯ್​ ಕುಮಾರ್​ ಕಿರಗಂದೂರು ನಿರ್ಮಿಸಿದ್ದು, ರಿಷಭ್​ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಿಷಭ್​, ಸಪ್ತಮಿ ಗೌಡ, ಅಚ್ಯುತ್​ ಕುಮಾರ್​, ಕಿಶೋರ್​ ಮುಂತಾದವರು ಅಭಿನಯಿಸಿದ್ದು, ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸಿದ್ದಾರೆ.

    ಥಾಯ್​ ಭಾಷೆಗೆ ಡಬ್​ ಆದ ‘777 ಚಾರ್ಲಿ; ಡಿ.1ಕ್ಕೆ ಥಾಯ್ಲೆಂಡ್​ನಲ್ಲಿ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts