More

    ವಿಡಿಯೋ ಬಗ್ಗೆ ಸಂಜನಾ ಸ್ಪಷ್ಟೀಕರಣ ಕೊಡಲಿ: ಸಂಬರಗಿ ಸವಾಲ್​

    ಸಂಜನಾ ಗಾಲ್ರಾಣಿಗೂ, ಡ್ರಗ್ಸ್​ ಮಾಫಿಯಾಗೂ ನಂಟಿದೆ ಎಂದು ಕೆಲವೇ ದಿನಗಳ ಹಿಂದೆ ಹೇಳಿದ್ದರು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಂಜನಾ, ಪ್ರಶಾಂತ್​ ಅವರು ಯಾರು ಎಂದೇ ಗೊತ್ತಿಲ್ಲ ಎಂದಿದ್ದರು. ಅಷ್ಟೇ ಅಲ್ಲ, ಪ್ರಶಾಂತ್​ ಅವರನ್ನು ನಾಯಿ, ಹಂದಿ ಎಂದು ಕರೆದಿದ್ದರು.

    ಇದನ್ನೂ ಓದಿ: ‘ತುಪ್ಪ’ದ ಬೆಡಗಿ ರಾಗಿಣಿಗೆ ಸೊಳ್ಳೆ ಕಾಟವಂತೆ! ಹೀಗಿತ್ತು ಬಂಧನದ ಮೊದಲ ರಾತ್ರಿ

    ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಪ್ರಶಾಂತ್​, ಸಂಜನಾ ಅವರು ತಮ್ಮನ್ನು ಹಂದಿ, ನಾಯಿ ಅಂತ ಕರೆದಿದ್ದು ಬೇಸರವಿಲ್ಲ ಎಂದು ಹೇಳಿದ್ದಾರೆ. ಅದರ ಜತೆಗೆ, ಒಂದು ವಿಡಿಯೋ ಬಿಡುಗಡೆ ಮಾಡಿರುವ ಪ್ರಶಾಂತ್​, ಅದಕ್ಕೆ ಸ್ಪಷ್ಟೀಕರಣ ಕೊಡಿ ಎಂದು ಕೇಳಿದ್ದಾರೆ. ಈ ವಿಡಿಯೋ ಕಳೆದ ವರ್ಷದ್ದಾಗಿದ್ದು, ಶ್ರೀಲಂಕಾದ ಕೊಲೊಂಬೋದಲ್ಲಿ ನಡೆದ ಒಂದು ಇವೆಂಟ್​ನಲ್ಲಿ ಸಂಜನಾ ಜತೆಗೆ ಶಾಸಕ ಜಮೀರ್​ ಅಹ್ಮದ್​ ಖಾನ್​ ಸಹ ಕಾಣಿಸಿಕೊಂಡಿದ್ದರು ಎಂದು ಆರೋಪಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ‘2019ರಲ್ಲಿ ಶ್ರೀಲಂಕಾದ ಕೊಲಂಬೋದ ಬಾಲಿ ಕ್ಯಾಸಿನೋದಲ್ಲಿ ಒಂದು ದೊಡ್ಡ ಇವೆಂಟ್​ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಬಾಲಿವುಡ್​ ನಟ ವಿವೇಕ್​ ಒಬೆರಾಯ್​, ಸಂಜನಾ, ಜಮೀರ್​ ಅಹ್ಮದ್​ ಖಾನ್​ ಬಲಗೈ ಬಂಟ ಸಯ್ಯದ್​ ಫೈಜುಲ್ಲ ಹಾಜರಿದ್ದರು’ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಈ ಕಾರ್ಯಕ್ರಮದಲ್ಲಿ ಜಮೀರ್​ ಅಹ್ಮದ್​ ಖಾನ್​ ಸಹ ಭಾಗವಹಿಸಿದ್ದರು ಮತ್ತು ಈ ವಿಷಯವಾಗಿ ಅವರ ಮತ್ತು ಸಂಜನಾ ಪಾಸ್​ಪೋರ್ಟ್​ಗಳನ್ನು ಪೊಲೀಸರು ಟ್ಯಾಲಿ ಮಾಡಿ ನೋಡಲಿ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಸ್ಯಾಂಡಲ್​ವುಡ್​ಗೆ ಹೊತ್ತಿಕೊಂಡ ಡ್ರಗ್ಸ್​ ಬೆಂಕಿ; ತುರ್ತು ಸಭೆ ಕರೆದ ಫಿಲಂ ಚೇಂಬರ್

    ‘ಸಂಜನಾ ಅವರು ನನಗೆ ನಾಯಿ, ಹಂದಿ ಅಂತೆಲ್ಲಾ ಹೋಲಿಸಿದ್ದು ನನಗೆ ಬೇಸರ ಇಲ್ಲ. ಈ ವಿಡಿಯೋ ಬಗ್ಗೆ ಸ್ಪಷ್ಟೀಕರಣ ಕೊಡಲಿ. ಇದು ಬರೀ ಡ್ರಗ್​ ಮಾಫಿಯಾ ವಿಷಯ ಅಷ್ಟೇ ಅಲ್ಲ, ಗ್ಯಾಂಬ್ಲಿಂಗ್​ ಮಾಫಿಯಾ ಸಹ ಇದೆ. ಗ್ಯಾಂಬ್ಲಿಂಗ್​ನಿಂದ ಬರುವ ದುಡ್ಡನ್ನು ಹವಾಲಾ ಮೂಲಕ ಕೊಲಂಬೋಗೆ ಕಳಿಸಿ, ಆ ಹಣದಿಂದ ದುಬೈನಲ್ಲಿ ಡ್ರಗ್ಸ್​ ಖರೀದಿಯಾಗಿ, ಕರಾಚಿಗೆ ರವಾನೆಯಾಗಿ, ಪಂಜಾಬ್​ ಮೂಲಕ ಭಾರತಕ್ಕೆ ಬರುತ್ತದೆ. ನಿಜ ಹೇಳಬೇಕೆಂದರೆ, ಡ್ರಗ್ಸ್​ಗೆ ಹಣ ಬರುತ್ತಿರುವುದು ಗ್ಯಾಂಬ್ಲಿಂಗ್​ ದುಡ್ಡಿನಿಂದ. ಈ ಬಗ್ಗೆ ಇಡಿ ಮತ್ತು ಇನ್​ಕಮ್​ ಟ್ಯಾಕ್ಸ್​ ಇಲಾಖೆಗಳು ಸೂಕ್ತ ತನಿಖೆ ಮಾಡಲಿ’ ಎಂದು ಹೇಳಿದ್ದಾರೆ.

    ಪೋಷಕರನ್ನು ನೆನೆದು ಕಣ್ಣೀರು ಹಾಕಿದರಂತೆ ರಾಗಿಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts