More

    ಸಾಯಿ ಪ್ರಣೀತ್‌ಗೆ ಕರೊನಾ ಪಾಸಿಟಿವ್, ರೂಮ್‌ಮೇಟ್ ಶ್ರೀಕಾಂತ್ ಕೂಡ ಔಟ್

    ಬ್ಯಾಂಕಾಕ್: ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಕನಸಿನಲ್ಲಿರುವ ಭಾರತದ ಷಟ್ಲರ್ ಬಿ.ಸಾಯಿ ಪ್ರಣೀತ್ ಕರೊನಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟೊಯೊಟಾ ಥಾಯ್ಲೆಂಡ್ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇದರಿಂದಾಗಿ, ಪ್ರಣೀತ್ ಜತೆ ಕೊಠಡಿ ಹಂಚಿಕೊಂಡಿದ್ದ ಮಾಜಿ ವಿಶ್ವ ನಂ.1 ಕೆ.ಶ್ರೀಕಾಂತ್ ಕೂಡ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಮೊದಲ ಸುತ್ತಿನ ಪಂದ್ಯ ಆಡಿ ಗೆದ್ದಿದ್ದ ಶ್ರೀಕಾಂತ್, ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಮಾರ್ಗಸೂಚಿಯಂತೆ 2ನೇ ಸುತ್ತಿನ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ.

    ಇದನ್ನೂ ಓದಿ: ಭಾರತ ವಿರುದ್ಧ ಸೋಲಿನ ಬೆನ್ನಲ್ಲೇ ಆಸೀಸ್ ಕ್ರಿಕೆಟ್‌ನಲ್ಲಿ ತಲೆದಂಡಕ್ಕೆ ಸಿದ್ಧತೆ!

    * ಎಚ್‌ಎಸ್ ಪ್ರಣಯ್‌ಗೆ ಜಯ
    ಎಚ್‌ಎಸ್ ಪ್ರಣಯ್ ಟೂರ್ನಿಯಲ್ಲಿ ಇಂಡೋನೇಷ್ಯಾದ ವಿಶ್ವ ನಂ.7 ಜೋನಾಥನ್ ಕ್ರೈಸ್ಟಿಗೆ ಆಘಾತ ನೀಡಿದರು. ಬುಧವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಎಚ್‌ಎಸ್ ಪ್ರಣಯ್ 18-21, 21-16, 23-21ರಿಂದ ಜೋನಾಥನ್ ಅವರನ್ನು 75 ನಿಮಿಷಗಳ ಹೋರಾಟದಲ್ಲಿ ಮಣಿಸಿದರು. ಇಂಡೋನೇಷ್ಯಾ ಆಟಗಾರನ ಎದುರು 4ನೇ ಮುಖಾಮುಖಿಯಲ್ಲಿ ಜಯ ದಾಖಲಿಸಿದರು. 28 ವರ್ಷದ ಪ್ರಣಯ್‌ಗೆ ಎರಡು ತಿಂಗಳ ಹಿಂದಷ್ಟೇ ಕೋವಿಡ್-19 ವೈರಸ್ ಕಾಣಿಸಿಕೊಂಡಿತ್ತು. ಇದರಿಂದಾಗಿ ದೈಹಿಕವಾಗಿ ಸಾಕಷ್ಟು ಬಳಲಿದ್ದರು.

    ಇದನ್ನೂ ಓದಿ: ಆಸೀಸ್‌ನಲ್ಲಿ ಭಾರತದ ದಿಗ್ವಿಜಯಕ್ಕೆ ಪಾಕ್ ಕ್ರಿಕೆಟಿಗರಿಂದಲೂ ಪ್ರಶಂಸೆ

    ಪುರುಷರ ಡಬಲ್ಸ್ ವಿಭಾಗದಲ್ಲಿ ಎಂಆರ್ ಅರ್ಜುನ್-ಧ್ರುವ್ ಕಪಿಲಾ ಜೋಡಿ 23-21, 21-17 ನೇರ ಗೇಮ್‌ಗಳಿಂದ ನ್ಯೂಜಿಲೆಂಡ್‌ನ ಒಲಿವೆರ್ ಲೇಡಾನ್-ಅಭಿನವ್ ಮನೊಟಾ ಜೋಡಿಯನ್ನು ಮಣಿಸಿದರು. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಜೋಡಿ 11-21, 19-21 ರಿಂದ ಜರ್ಮನಿಯ ಲಿಂಡಾ ಫೆಲರ್ ಹಾಗೂ ಇಸಾಬೆಲ್ ಹರ್‌ಟ್ರಿಚ್ ಜೋಡಿ ಎದುರು ಸೋಲು ಕಂಡಿತು. ಮಿಶ್ರ ಡಬಲ್ಸ್ ವಿಭಾಗದಲ್ಲೂ ಸಿಕ್ಕಿ ರೆಡ್ಡಿ -ಸುಮಿತ್ ರೆಡ್ಡಿ ಜೋಡಿ ನಿರಾಸೆ ಕಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts