More

    ಎಚ್ಡಿಡಿ ಭೇಟಿ ಮಾಡಿದ್ದು ತಪ್ಪಲ್ಲ ; ಹಿರಿಯರನ್ನು ಭೇಟಿ ಮಾಡುವುದು ಸಂಪ್ರದಾಯ ಎಂದ ಡಾ.ಜಿ.ಪರಮೇಶ್ವರ್

    ತುಮಕೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ ವಿಚಾರ ಬಿಜೆಪಿಯಲ್ಲೇ ಅಸಮಾಧಾನದ ಹೊಗೆಯಾಡುವಂತೆ ಮಾಡಿದ್ದರೆ, ಯಾವುದೇ ಪಕ್ಷದ ಮುಖ್ಯಮಂತ್ರಿಗಳಾಗಲಿ, ಸಾಮಾನ್ಯವಾಗಿ ಹಿರಿಯರನ್ನು ಭೇಟಿ ಮಾಡುವುದು ಸಂಪ್ರದಾಯ ಎಂದು ಹೇಳುವ ಮೂಲಕ ಕಾಂಗ್ರೆಸ್ ಶಾಸಕ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಬೊಮ್ಮಾಯಿಯ ಬೆಂಬಲಕ್ಕೆ ನಿಂತಿದ್ದು, ಅವರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಮಾಜಿ ಪ್ರಧಾನಿ ದೇವೇಗೌಡರನ್ನು ಸಿಎಂ ಭೇಟಿಯಾಗಿದ್ದು ತಪ್ಪಿಲ್ಲ. ನಮ್ಮ ರಾಜ್ಯದಿಂದ ಪ್ರಧಾನಿಯಂತಹ ಉನ್ನತ ಸ್ಥಾನಕ್ಕೇರಿದವರು ದೇವೇಗೌಡರು. ಅವರ ಹಿರಿತನ, ರಾಜಕೀಯ ಮುತ್ಸದ್ಧಿತನ ಮಾರ್ಗದರ್ಶನಕ್ಕಾಗಿ ಬೊಮ್ಮಾಯಿ ಅವರು ಗೌಡರನ್ನು ಭೇಟಿಯಾಗಿದ್ದರಲ್ಲಿ ತಪ್ಪೇನಿಲ್ಲ. ಇದು ಮೊದಲಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ. ಬೇರೆ ಅರ್ಥ ಕಲ್ಪಿಸಿದರೆ ನಾವು ಸಣ್ಣವರಾಗುತ್ತೇವೆ ಎಂದು ತೀಕ್ಷ ್ಣವಾಗಿ ಪ್ರತಿಕ್ರಿಯಿಸಿದರು.

    ಪ್ರೀತಮ್‌ಗೌಡಗೆ ಸಲಹೆ ನೀಡಿ: ದೇವೇಗೌಡ ಅವರನ್ನು ಸಿಎಂ ಬೊಮ್ಮಾಯಿ ಭೇಟಿಯಾಗಿದ್ದಕ್ಕೆ ಸ್ವಪಕ್ಷದ ಶಾಸಕ ಪ್ರೀತಮ್‌ಗೌಡ ಅಪಸ್ವರ ಎತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಮೊದಲ ಬಾರಿ ಶಾಸಕನಾಗಿದ್ದೀಯಾ. ನೀನು ಕೂಡ ಇವೆಲ್ಲಾ ಕಲಿತುಕೊಳ್ಳಬೇಕು ಎಂದು ಯಾರಾದರೂ ಸಲಹೆ ನೀಡಬೇಕು ಎಂದು ಹೇಳಿದರು.

    ಖಾತೆ ಹಂಚಿಕೆ ಅತೃಪ್ತಿ: ಸರ್ಕಾರ ಅಸ್ತಿತ್ವಕ್ಕೆ ಬಂದಾಗ, ಸಂಪುಟ ರಚನೆಯಾದಾಗ ಅಸಮಾಧಾನ ಭುಗಿಲೇಳುವುದು ಸ್ವಾಭಾವಿಕ. ಬಯಸಿದ ಖಾತೆ ಸಿಗದೆ ಇದ್ದಾಗ ಕೆಲವರು ಬೇಸರಗೊಳ್ಳುವುದು ಸಹಜ ಪ್ರಕ್ರಿಯೆ. ಹಾಗಾಗಿ, ಈಗಿನ ರಾಜಕೀಯ ಬೆಳವಣಿಗೆಗಳು ಕೂಡ ಅಷ್ಟೇ. ಸಚಿವ ಆನಂದ್ ಸಿಂಗ್ ರಾಜೀನಾಮೆ ವದಂತಿ ಮಾಧ್ಯಮಗಳಲ್ಲಿ ವರದಿಯಾಗಿದೆ. ನಮಗಂತೂ ಬಿಜೆಪಿ ಸರ್ಕಾರ ಬೀಳುವುದು ಇಷ್ಟವಿಲ್ಲ ಆದರೆ, ಅವರಾಗಿಯೇ ಸರ್ಕಾರ ಬೀಳಿಸಿಕೊಳ್ಳಲಿದ್ದಾರೆ ಎಂದು ಪರಮೇಶ್ವರ್ ತಿವಿದರು.

    ಬ್ಲಾಕ್‌ಮೇಲ್ ಒಳ್ಳೆಯದಲ್ಲ: ಸೆಪ್ಟೆಂಬರ್ ಒಳಗಡೆ ತಮ್ಮನ್ನು ಒಬಿಸಿ ಪಟ್ಟಿಗೆ ಸೇರಿಸಿ ಎಂದು ಪಂಚಮಸಾಲಿಗಳು ಒತ್ತಡ ಹೇರುವುದು ಬ್ಲಾಕ್‌ಮೇಲ್ ಎನಿಸಲಿದೆ. ಈ ರೀತಿ ಎಲ್ಲರೂ ಬ್ಲಾಕ್ ಮೇಲ್ ಮಾಡಲು ಹೋದರೆ ಸಂವಿಧಾನಕ್ಕೆ, ಕಾನೂನಿಗೆ ಬೆಲೆ ಇರುವುದಿಲ್ಲ. ಒಬಿಸಿ ಹಕ್ಕನ್ನು ರಾಜ್ಯ ಸರ್ಕಾರಕ್ಕೆ ನೀಡಿರುವ ಕೇಂದ್ರದ ನಿರ್ಧಾರ ಸ್ವಾಗತಾರ್ಹ. ಅದೇ ರೀತಿ ಜನರ ಒತ್ತಾಯ ತಡೆದುಕೊಳ್ಳುವ ಶಕ್ತಿ ಸರ್ಕಾರಕ್ಕಿರಬೇಕು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗಲೂ ಈ ಪ್ರಸ್ತಾಪವಿತ್ತು ಎಂದು ಪರಮೇಶ್ವರ್ ಹೇಳಿದರು.

    ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ವಾತನಾಡಿದ್ದು ಸರಿಯಲ್ಲ. ಈಶ್ವರಪ್ಪ ಪದೇಪದೆ ಈ ರೀತಿ ವಾತನಾಡುವ ದಾಟಿ ಸರಿಪಡಿಸಿಕೊಳ್ಳಬೇಕು. ವಿರೋಧ ಪಕ್ಷದ ಬಗ್ಗೆ ಟೀಕೆ ಟಿಪ್ಪಣಿ ವಾಡಲಿ, ಅದು ಸ್ವಾಭಾವಿಕ. ಆದರೆ, ಇಂಥ ಕೀಳುಭಾಷೆ ಬಳಕೆ ವಾಡುವುದು ಅವರ ಘನತೆಗೆ ಶೋಭೆ ತರುವುದಿಲ್ಲ. ಇಲ್ಲದಿದ್ದರೆ ನಾವು ಅವರನ್ನು ಬೇರೆ ರೀತಿಯಲ್ಲೇ ಅರ್ಥ ವಾಡಿಕೊಳ್ಳಬೇಕಾಗುತ್ತದೆ.
    ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts