More

    ‘ಪ್ರಾಜೆಕ್ಟ್​​-ಕೆ’ನ ಮೊದಲ ದಿನದ ಶೂಟಿಂಗ್ ಅನುಭವ ಹಂಚಿಕೊಂಡ ಅಮಿತಾಭ್-ಪ್ರಭಾಸ್! ಹೇಗಿತ್ತು?

    ಬಾಲಿವುಡ್​ನ ಬಿಗ್ ಬಿ ಎಂದೇ ಫೇಮಸ್ ಆಗಿರುವ ನಟ ಅಮಿತಾಭ್ ಬಚ್ಚನ್ ಅವರ ಜತೆಗೆ ನಟಿಸಲು ಬಹುತೇಕ ಎಲ್ಲರಿಗೂ ಆಸೆಯಿರುತ್ತೆ. ಆದರೆ, ಆ ಆಸೆ ಕೇವಲ ಕೆಲವರಿಗೆ ಈಡೇರುತ್ತೆ. ಇನ್ನು, ಅಂತಹ ಮೇರು ನಟ ಹಾಗೂ ತಮ್ಮ 79 ವರ್ಷದ ವಯಸ್ಸಲ್ಲೂ ಸಾಲುಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ಬಿಗ್ ಬಿ ಅವರ ಜೆತೆಗೆ ನಟಿಸಲು ದಕ್ಷಿಣ ಭಾರತದ ನಟ ಡಾರ್ಲಿಂಗ್ ಪ್ರಭಾಸ್ ಅವರಿಗೆ ಲಭಿಸಿದೆ. ಹೌದು, ಬಾಲಿವುಡ್​ನ ಬಿಗ್ ಬಿ ಮತ್ತು ದಕ್ಷಿಣ ಭಾರತದ ಡಾರ್ಲಿಂಗ್ ತೆರೆಯನ್ನು ಹಂಚಿಕೊಳ್ಳುತ್ತಾರೆ ಎಂಬ ಸುದ್ದಿ ಅಭಿಮಾನಿಗಳಿಗೆ ಸಖತ್ ಥ್ರಿಲ್ ಕೊಟ್ಟಿದೆ. ಅಂದಹಾಗೆ, ‘ಪ್ರಾಜೆಕ್ಟ್​ ಕೆ’ ಎಂದು ತಾತ್ಕಾಲಿಕವಾಗಿ ಕರೆಯಲಾಗುತ್ತಿರುವ ಸಿನಿಮಾಗೆ ತೆಲುಗಿನ ನಾಗ್ ಅಶ್ವಿನ್ ಅವರು ನಿರ್ದೇಶನ ಮಾಡುತ್ತಿದ್ದಾರೆ.
    ಈ ಸಿನಿಮಾದಲ್ಲೇ ಬಿಗ್ ಬಿ, ಡಾರ್ಲಿಂಗ್ ಪ್ರಭಾಸ್ ಒಟ್ಟಿಗೆ ಕಾಣಿಸಿಕೊಳ್ಳುವುದು. ಈ ಚಿತ್ರದಲ್ಲಿ ಬಾಲಿವುಡ್​ನ ಹಾಟ್ ನಟಿ ದೀಪಿಕಾ ಪಡುಕೋಣೆ ನಾಯಕಿಯಾಗಿದ್ದಾರೆ. ಇದೀಗ, ಸಿನಿಮಾದಲ್ಲಿ ಪ್ರಭಾಸ್ ಹಾಗೂ ಅಮಿತಾಭ್ ಪಾತ್ರಗಳು ಜತೆಯಾಗಿ ನಟಿಸುವ ಭಾಗಗಳ ಶೂಟಿಂಗ್ ನಡೆಯುತ್ತಿದೆ. ಹಾಗಾಗಿ, ಶುಕ್ರವಾರ ದಂದು ನಟ ಪ್ರಭಾಸ್ ಹಾಗೂ ಅಮಿತಾಭ್ ಅವರು ಮೊದಲ ಬಾರಿಗೆ ಶೂಟಿಂಗ್​ ಸೆಟ್​ನಲ್ಲಿ ಭೇಟಿಯಾಗಿದ್ದಾರೆ. ಈ ಮೊದಲ ಬಾರಿಯ ಭೇಟಿಯ ಅನುಭವವನ್ನು ಇವರಿಬ್ಬರು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದು, ಆ ಪೋಸ್ಟ್​ಗಳು ವೈರಲ್ ಆಗುತ್ತಿವೆ. ನಟ ಅಮಿತಾಭ್ ಬಚ್ಚನ್ ಅವರು ಪ್ರಭಾಸ್ ಜತೆಗಿನ ಮೊದಲ ದಿನದ ಶೂಟಿಂಗ್ ಅನುಭವವನ್ನು ಹಂಚಿಕೊಂಡಿದ್ದು, ಪ್ರಭಾಸ್​ ಅವರನ್ನು ಹಾಡಿ ಹೊಗಳಿದ್ದಾರೆ.
    ಮೊದಲ ದಿನ.. ಮೊದಲ ಶಾಟ್.. ‘ಬಾಹುಬಲಿಪ್ರಭಾಸ್ ಅವರೊಂದಿಗಿನ ಮೊದಲ ಚಿತ್ರ.. ಪ್ರಭಾಸ್ ಅವರ ಪ್ರತಿಭೆ, ಮತ್ತು ಅವರ ನಮ್ರತೆ ಕಂಡು ಅಂತಹ ವ್ಯಕ್ತಿತ್ವದ ಜತೆಗೆ ಕೆಲಸ ಮಾಡುವುದು ದೊಡ್ಡ ಗೌರವ ಮತ್ತು ಕಲಿಯಲು ಉತ್ತಮ ಅವಕಾಶ ಅನಿಸಿದೆ”, ಎಂದು ಅಮಿತಾಭ್ ಪೋಸ್ಟ್ ಮಾಡಿದ್ದಾರೆ. ಮತ್ತೊಂದೆಡೆ, ನಟ ಅಮಿತಾಭ್ ಜತೆ ತೆರೆ ಹಂಚಿಕೊಂಡಿರುವುದರ ಬಗ್ಗೆ ಪ್ರಭಾಸ್ ಕೂಡ ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘’ಅಮಿತಾಭ್ ಬಚ್ಚನ್ ಅವರೊಂದಿಗೆ ತೆರೆ ಹಂಚಿಕೊಳ್ಳುವ ಕನಸು ನನಸಾಯಿತು’ ಎಂದು ಪ್ರಭಾಸ್ ಇನ್​ಸ್ಟಾಗ್ರಾಂನಲ್ಲಿ ಅಮಿತಾಭ್ ನಟನೆಯ 1975ರಲ್ಲಿ ತೆರೆಕಂಡ ಸೂಪರ್ ಹಿಟ್ ಚಿತ್ರ ‘ದೀವಾರ್​’ನ ಫೋಟೋ ಒಂದನ್ನು ಪೋಸ್ಟ್ ಮಾಡಿ ಕ್ಯಾಪ್ಷನ್ ನೀಡಿದ್ದಾರೆ

    ‘ಪ್ರಾಜೆಕ್ಟ್​​-ಕೆ’ನ ಮೊದಲ ದಿನದ ಶೂಟಿಂಗ್ ಅನುಭವ ಹಂಚಿಕೊಂಡ ಅಮಿತಾಭ್-ಪ್ರಭಾಸ್! ಹೇಗಿತ್ತು? ‘ಪ್ರಾಜೆಕ್ಟ್​​-ಕೆ’ನ ಮೊದಲ ದಿನದ ಶೂಟಿಂಗ್ ಅನುಭವ ಹಂಚಿಕೊಂಡ ಅಮಿತಾಭ್-ಪ್ರಭಾಸ್! ಹೇಗಿತ್ತು?

    ನಟಿ ಶ್ರುತಿ ಹರಿಹರನ್ ಇನ್​ಸ್ಟಾಗ್ರಾಂ ಖಾತೆ ಹ್ಯಾಕ್! ಅನುಯಾಯಿಗಳಿಗೆ ಎಚ್ಚರಿಕೆ…

    ‘ಅಖಂಡ’ ಚಿತ್ರದ ನಿರ್ದೇಶಕನ ಜತೆಗೆ ಪ್ಯಾನ್ ಇಂಡಿಯಾ ಸಿನಿಮಾಗೆ ನಟ ರಾಮ್ ಪೋತಿನೇನಿ ರೆಡಿ!

    ಕುಡಿದ ಮತ್ತಿನಲ್ಲಿ ಮಹಿಳಾ ಪೊಲೀಸ್ ಕೊರಳು ಪಟ್ಟಿ ಹಿಡಿದ ನಟಿ ಕಾವ್ಯಾ ತಾಪರ್ ಬಂಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts