More

    ನಟ ಪ್ರಭಾಸ್​ ತೆಗೆದುಕೊಂಡ ಈ ನಿರ್ಧಾರ ಕನ್ನಡಿಗರನ್ನು ಕೆಣಕುವಂತಿದೆ!

    ಪ್ಯಾನ್​ ಇಂಡಿಯಾ ಸ್ಟಾರ್​ಗಿರಿ ಪಟ್ಟ ಗಿಟ್ಟಿಸಿಕೊಂಡಿರುವ ಟಾಲಿವುಡ್​ ನಟ ಪ್ರಭಾಸ್​ ಹಲವು ಸಿನಿಮಾ ಪ್ರಾಜೆಕ್ಟ್​ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಒಪ್ಪಿಕೊಂಡಿರುವ ಮೂರ್ನಾಲ್ಕು ಸಿನಿಮಾಗಳು ಬಹುಭಾಷೆಯಲ್ಲಿ ಸಿದ್ಧವಾಗುತ್ತಿದ್ದು, ಆ ಪೈಕಿ ಪ್ರಭಾಸ್​ ಅವರ 20ನೇ ಸಿನಿಮಾದ ಫಸ್ಟ್ ಲುಕ್​ ನಾಳೆ (ಜು. 10) ಬೆಳಗ್ಗೆ 10ಕ್ಕೆ ಬಿಡುಗಡೆ ಆಗಲಿದೆ. ತೆಲುಗಿನ ಜತೆಗೆ ತಮಿಳು, ಹಿಂದಿ, ಮಲಯಾಳಂನಲ್ಲಿ ಲುಕ್​ ಬಿಡುಗಡೆ ಮಾಡಲು ತಂಡ ನಿರ್ಧರಿಸಿದೆ. ಆದರೆ, ಕನ್ನಡದಲ್ಲಿ ಮಾತ್ರ ಈ ಸಿನಿಮಾದ ಫಸ್ಟ್ ಲುಕ್​ ರಿಲೀಸ್​ ಆಗುತ್ತಿಲ್ಲ. ಚಿತ್ರತಂಡದ ಈ ನಡೆ ಸದ್ಯ ಕನ್ನಡ ಸಿನಿಮಾ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

    ಇದನ್ನೂ ಓದಿ: ಈ ಒಂದು ಕಾರಣಕ್ಕಾ ಸುಶೀಲ್ ಗೌಡ ಆತ್ಮಹತ್ಯೆ ಮಾಡಿಕೊಂಡಿದ್ದು

    ದಕ್ಷಿಣದಲ್ಲಿ ಸಿದ್ಧವಾಗುತ್ತಿರುವ ಬಹುತೇಕ ಬಿಗ್​ ಬಜೆಟ್​ ಸಿನಿಮಾಗಳು ಕನ್ನಡದಲ್ಲೂ ಡಬ್​ ಆಗುತ್ತಿವೆ. ಈಗಾಗಲೇ ಸಾಕಷ್ಟು ಸಿನಿಮಾಗಳು ಕನ್ನಡಕ್ಕೆ ಡಬ್​ ಆಗಿ ತೆರೆಕಂಡಿದ್ದೂ ಉಂಟು. ಇನ್ನೂ ಅನೇಕ ಸಿನಿಮಾಗಳು ಆ ಹಾದಿಯಲ್ಲಿವೆ. ಆದರೆ, ಪ್ರಭಾಸ್​ ನಟನೆಯ ಸಾಹೋ ಆವತ್ತೂ ಕನ್ನಡದಲ್ಲಿ ಬಿಡುಗಡೆಯಾಗಿರಲಿಲ್ಲ. ಈಗ ಹೊಸ ಪ್ರಾಜೆಕ್ಟ್​ನಲ್ಲೂ ಕನ್ನಡ ಕಾಣುತ್ತಿಲ್ಲ. ಅಷ್ಟಕ್ಕೂ ಕನ್ನಡದಲ್ಲಿ ಡಬ್​ ಮಾಡಿ ತೆರೆಗೆ ತರದಿರಲು ಕಾರಣ ಏನಿರಬಹುದು?

    ಇದನ್ನೂ ಓದಿ: ರೋಗ ನಿರೋಧಕ ಶಕ್ತಿ ವಿಚಾರಕ್ಕೆ ಅಜಯ್ ದೇವಗನ್ ಟ್ರೋಲ್

    ಈಗಾಗಲೇ ಪ್ರಭಾಸ್​ಗೆ ಕರ್ನಾಟಕದಲ್ಲೂ ಅಭಿಮಾನಿಗಳಿದ್ದಾರೆ. ತೆಲುಗು ಸಿನಿಮಾವನ್ನೇ ಮುಗಿಬಿದ್ದು ನೋಡುವ ವರ್ಗವಿದೆ. ಆ ಒಂದೇ ಒಂದು ಕಾರಣಕ್ಕೆ ಪ್ರಭಾಸ್​ ಅವರ ಸಿನಿಮಾಗಳು ಡಬ್​ ಆಗದೆ, ಮೂಲ ತೆಲುಗಿನಲ್ಲಿ ಕರ್ನಾಟಕದಲ್ಲಿ ತೆರೆಕಂಡು ಒಳ್ಳೇ ಕಲೆಕ್ಷನ್​ ಮಾಡಿಕೊಳ್ಳುತ್ತಿವೆ. ಹಾಗಾಗಿ ನಿರ್ಮಾಪಕರೂ ಕನ್ನಡದ ಡಬ್ಬಿಂಗ್​ ಸಹವಾಸಕ್ಕೆ ಹೋಗಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಆದರೂ ಪ್ರಸ್ತುತ ದಕ್ಷಿಣದ ಎಲ್ಲ ಸಿನಿಮಾಗಳು ದಕ್ಷಿಣದ ಎಲ್ಲ ಭಾಷೆಗಳಿಗೆ ಡಬ್​ ಆಗಿ ತೆರೆಕಾಣುತ್ತಿರುವುದರಿಂದ, ಪ್ರಭಾಸ್​ ಅವರ ಈ ಚಿತ್ರವೂ ಕನ್ನಡಕ್ಕೆ ಡಬ್​ ಆಗಬೇಕಿತ್ತು ಎಂಬುದು ಅಭಿಮಾನಿ ವಲಯದ ಬೇಡಿಕೆ. (ಏಜೆನ್ಸೀಸ್​)

    ಪುಟ್ಟ ಮಗನ ಜತೆ ದೋಣಿವಿಹಾರಕ್ಕೆ ಹೋಗಿದ್ದಾಗಲೇ ನೀರಿಗೆ ಹಾರಿದ ನಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts