More

    ಬಾಂಗ್ಲಾ ಸಂಸದ ಹತ್ಯೆ ಪ್ರಕರಣ; ಚರ್ಮ ಸುಲಿದು, ಮೃತದೇಹ ತುಂಡರಿಸಿ ವಿವಿಧ ಸ್ಥಳಗಳಲ್ಲಿ ಎಸೆದ ಹಂತಕರು

    ಕೋಲ್ಕತ: ಚಿಕಿತ್ಸೆಗೆಂದು ಬಂದು ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಆಡಳಿತಾರೂಢ ಅವಾಮಿ ಲೀಗ್‌ನ ಸಂಸದ ಅನ್ವರುಲ್ ಅಜೀಮ್ ಅನಾರ್ ಅವರ ಮೃತದೇಹ ತುಂಡರಿಸಿದ ರೀತಿಯಲ್ಲಿ ಪತ್ತೆಯಾಗಿದ್ದು, ನಗರದ ಹಲವು ಭಾಗಗಳಲ್ಲಿ ಎಸೆದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಓರ್ವನನ್ನು ವಶಕ್ಕೆ ಪಡೆದಿದ್ದು, ಬಂಧಿತನನ್ನು ಜಿಹಾದ್​ ಹವಾಲ್ದಾರ್​ ಎಂದು ಗುರುತಿಸಲಾಗಿದೆ. ಸಂಸದರ ಆಪ್ತ ಸ್ನೇಹಿತನೆ ಅವರ ಹತ್ಯೆಗೆ ಸುಪಾರಿ ನೀಡಿರುವುದಾಗಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಸಂಸದರು ಫ್ಲ್ಯಾಟ್​ ಪ್ರವೇಶಿಸುತ್ತಿರುವ ಸಿಸಿಟಿವಿ ದೃಶ್ಯ ಲಭ್ಯವಾಗಿದ್ದು, ಹಂತಕರು ಅವರನ್ನು ಹತ್ಯೆಗೈದು ಬಳಿಕ ದೇಹವನ್ನು ತುಂಡು ಮಾಡಿ ಸೂಟ್​ಕೇಸ್​ಗಳಲ್ಲಿ ತುಂಬಿ ನಗರದ ವಿವಿಧೆಡೆ ಎಸೆದಿದ್ದಾರೆ. ಇದಲ್ಲದೆ ಉಳಿದ ಭಾಗಗಳನ್ನು ಫ್ರಿಡ್ಜ್​ನಲ್ಲಿ ಇರಿಸಿದ್ದಾಗಿ ವರದಿಯಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಅನಾರ್ ಅವರಿಗೆ ಮಹಿಳೆಯು ನ್ಯೂ ಟೌನ್ ಫ್ಲಾಟ್‌ಗೆ ಬರುವಂತೆ ಆಮಿಷವೊಡ್ಡಿದ್ದಾರೆಂದು ತೋರುತ್ತದೆ. ಅವರು ಫ್ಲಾಟ್‌ಗೆ ಹೋದ ಕೂಡಲೇ ಅವರನ್ನು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಅನಾರ್ ಅವರು  ಒಬ್ಬ ವ್ಯಕ್ತಿ ಮತ್ತು ಮಹಿಳೆಯೊಂದಿಗೆ ಫ್ಲಾಟ್‌ಗೆ ಪ್ರವೇಶಿಸಿದ ಸಿಸಿಟಿವಿ ದೃಶ್ಯಾವಳಿಗಳು ಲಭಿಸಿದೆ.

    ಇದನ್ನೂ ಓದಿ: ಜೆಂಟಲ್​ ರಿಮೈಂಡರ್​; ಆರ್​ಸಿಬಿಯನ್ನು ಮತ್ತೊಮ್ಮೆ ಕೆಣಕಿದ ಅಂಬಾಟಿ ರಾಯುಡು

    ಸಿಸಿಟಿವಿ ದೃಶ್ಯಗಳಲ್ಲಿ, ರಾಜಕಾರಣಿ ಇಬ್ಬರು ವ್ಯಕ್ತಿಗಳೊಂದಿಗೆ ಫ್ಲಾಟ್‌ಗೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ. ಇಬ್ಬರೂ ನಂತರ ಹೊರಗೆ ಬಂದು ಮರುದಿನ ಫ್ಲಾಟ್‌ಗೆ ಮತ್ತೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ ಆದರೆ ಸಂಸದರು ಮತ್ತೆ ಕಾಣಿಸಲಿಲ್ಲ. ನಂತರ ಇಬ್ಬರೂ ದೊಡ್ಡ ಸೂಟ್‌ಕೇಸ್‌ನೊಂದಿಗೆ ಫ್ಲಾಟ್‌ನಿಂದ ಹೊರಬಂದಿದ್ದಾರೆ. ಸೂಟ್​​ಕೇಸ್​ ಅಲ್ಲದೇ ದೇಹದ ಭಾಗಗಳನ್ನು ಎಸೆಯಲು ಹಲವಾರು ಪ್ಲಾಸ್ಟಿಕ್ ಚೀಲಗಳನ್ನು ಸಹ ಬಳಸಲಾಗಿದೆ. ಸಂಸದರ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಕೊಲೆ ಮಾಡಿದ ನಂತರ, ಅವರ ಚರ್ಮವನ್ನು ಸುಲಿದು ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಲಾಯಿತು. ಮೂಳೆಗಳಿಂದ ಮಾಂಸವನ್ನು ಬೇರ್ಪಡಿಸಿ ಮತ್ತು ಕೊಳೆಯುವಿಕೆ ನಿಧಾನವಾಗಲು ಅರಿಶಿನ ಪುಡಿ ಹಚ್ಚಲಾಗಿತ್ತು. ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ದೇಹದ ಭಾಗಗಳನ್ನು ಟ್ರಾಲಿ ಬ್ಯಾಗ್‌ನಲ್ಲಿ ಇರಿಸಿ ನಂತರ ಬೇರೆ ಬೇರೆ ಸ್ಥಳಗಳಲ್ಲಿ ಎಸೆಯಲಾಗಿದೆ. ಕೆಲವು ಭಾಗಗಳನ್ನು ಫ್ರಿಡ್ಜ್‌ನಲ್ಲಿಯೂ ಇರಿಸಲಾಗಿತ್ತು. ಆತನ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಶಂಕೆ ಬಾರದಂತೆ ಹಂತಕರು ಆತನ ಸಂಪರ್ಕಗಳಿಗೆ ಸಂದೇಶಗಳನ್ನು ಕಳುಹಿಸಿದ್ದು, ದೆಹಲಿಗೆ ಪ್ರಯಾಣಿಸುತ್ತಿರುವ ಕಾರಣ ಸಂಪರ್ಕಿಸದಂತೆ ಕೇಳಿಕೊಂಡಿದ್ದಾರೆ. ತನಿಖೆ ನಡೆಯುತ್ತಿದ್ದು, ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts