More

    ಯುವರತ್ನನಿಗೂ ತಟ್ಟಿದ ಪೈರಸಿ ಬಿಸಿ: ಬಿಡಗಡೆಯಾದ ಮೊದಲ ದಿನವೇ ಟೆಲಿಗ್ರಾಂ ಸೇರಿ ಎಲ್ಲೆಡೆ ಹರಿದಾಡ್ತಿದೆ ವಿಡಿಯೋ!

    ಬೆಂಗಳೂರು: ಪೈರಸಿ ಭೂತ ಚಿತ್ರರಂಗವನ್ನು ಬಿಟ್ಟು ಬಿಡದೆ ಕಾಡುತ್ತಿದೆ. ದರ್ಶನ್​ ಅಭಿನಯದ ರಾಬರ್ಟ್ ಚಿತ್ರದ​ ನಂತರ ಇದೀಗ ನಟ ಪುನೀತ್​ ರಾಜ್​ಕುಮಾರ್​ ಅಭಿನಯದ ಯುವರತ್ನ ಚಿತ್ರಕ್ಕೂ ಪೈರಸಿ ಸೋಂಕು ಅಂಟಿದೆ.

    ಚಿತ್ರವು ಏಪ್ರಿಲ್​ 1ರ ಗುರುವಾರ ತೆರೆಕಂಡಿದ್ದು, ಮೊದಲ ದಿನವೇ ಪೈರಸಿ ಆಗಿದೆ. ಟೆಲಿಗ್ರಾಂ ಸೇರಿದಂತೆ ಎಲ್ಲೆಡೆ ಯುವರತ್ನ ಚಿತ್ರ ಹರಿದಾಡುತ್ತಿದೆ. ಪೈರಸಿ ಲಿಂಕ್​ಗಳನ್ನ ರಿಪೋರ್ಟ್ ಮಾಡಿ, ತಕ್ಷಣ ಅದರ ಬಗ್ಗೆ ಕ್ರಮಕೈಗೊಳ್ಳುತ್ತೇವೆ. ಪೈರಸಿ ವಿರುದ್ಧ ಎಲ್ಲರು ಒಗ್ಗಟ್ಟಾಗೋಣ ಎಂದು ಟ್ವಿಟರ್ ಮೂಲಕ ವಿರತಕ ಕಾರ್ತಿಕ್ ಮನವಿ ಮಾಡಿದ್ದಾರೆ.

    ಇದನ್ನೂ ಓದಿರಿ: ಬಿಜೆಪಿ ಶಾಸಕನ ಜೀಪಿನಲ್ಲಿ ಇವಿಎಂ ಪತ್ತೆ: ಚುನಾವಣೆಯನ್ನೇ ಕದಿಯುವ ಯತ್ನ ಎಂದು ಕಾಂಗ್ರೆಸ್ ವ್ಯಂಗ್ಯ!​

    ಪುನೀತ್​ ಅಭಿಮಾನಿಗಳು ಸಹ ಪೈರಸಿ ವಿರುದ್ಧ ಧ್ವನಿಯೆತ್ತಿದ್ದು, ಟೆಲಿಗ್ರಾಂ ಮತ್ತು ತಮಿಳು ರಾಕರ್ಸ್ ಮೇಲೆ ಒಂದು ಕಣ್ಣು ಇಟ್ಟಿರಿ ಎಂದು ವಿತರಕ ಕಾರ್ತಿಕ್​ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

    ಮಾರ್ಚ್​ 11ರ ಶಿವರಾತ್ರಿ ಹಬ್ಬದಂದು ಬಿಡುಗಡೆಯಾದ ರಾಬರ್ಟ್​ ಚಿತ್ರ ಸಹ ಪೈರಸಿ ಆಯಿತು. ಚಿತ್ರದ ನಿರ್ಮಾಪಕರೇ ಹೇಳಿದಂತೆ ಸುಮಾರು 2 ಸಾವಿರಕ್ಕೂ ಹೆಚ್ಚು ಲಿಂಕ್​ಗಳನ್ನು ಆನ್​ಲೈನ್​ನಿಂದ ತೆಗೆದಿದ್ದೇವೆಂದು ಹೇಳಿಕೊಂಡಿದ್ದರು. ಆದರೂ ರಾಬರ್ಟ್​ ಚಿತ್ರ ಹಣಗಳಿಕೆಯಲ್ಲಿ ಹಿಂದೆ ಬೀಳಲಿಲ್ಲ. (ದಿಗ್ವಿಜಯ ನ್ಯೂಸ್​)

    VIDEO| ಎರಡು ಬೆರಳಲ್ಲಿ 234 ಬುಗುರಿ ತಿರುಗಿಸಿ ಚುನಾವಣಾ ಪ್ರಚಾರ!

    ಬಾಯ್​ಫ್ರೆಂಡ್​ಗೆ ಕರೊನಾ ಬಂದ ಬೆನ್ನಲ್ಲೇ ಬಾಲಿವುಡ್​ ಬೆಡಗಿ ಆಲಿಯಾ ಭಟ್​ಗೂ ತಗುಲಿದ ಸೋಂಕು

    ಸುಷ್ಮಾ, ಜೇಟ್ಲಿ ಸಾವಿಗೆ ಪ್ರಧಾನಿಯತ್ತ ಬೊಟ್ಟು ಮಾಡಿದ ಡಿಎಂಕೆ- ಬೆಳ್ಳಂಬೆಳಗ್ಗೆ ಐಟಿ ಇಲಾಖೆ ನೀಡಿತು ಬಿಗ್​ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts