More

    ವಿಮಾನದಲ್ಲಿ ಸ್ಫೋಟಗೊಂಡ ಪವರ್ ಬ್ಯಾಂಕ್​! ಬೆಚ್ಚಿಬಿದ್ದ ಪ್ರಯಾಣಿಕರ ವಿಡಿಯೋ ವೈರಲ್​…

    ನವದೆಹಲಿ: ಇನ್ನೇನು ಹೊರಡಲಿದ್ದ ವಿಮಾನದಲ್ಲಿ ಪವರ್​ಬ್ಯಾಂಕ್​ಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಪ್ರಯಾಣಿಕರು ಗಾಬರಿಯಾಗಿದ್ದಾರೆ. ಪವರ್​ ಬ್ಯಾಂಕ್​ಗೆ ಬೆಂಕಿ ಹತ್ತಿಕೊಂಡಿರುವ ವಿಡಿಯೋ ಈಗ ಎಲ್ಲೆಡೆ ವೈರಲ್​ ಆಗುತ್ತಿದೆ.

    ತೈವಾನ್‌ನಲ್ಲಿ ಇನ್ನೇನು ಟೇಕ್​ಆಫ್ ಮಾಡಲು ತಯಾರಿ ನಡೆಸುತ್ತಿದ್ದಾಗ ಪವರ್​ ಬ್ಯಾಂಕ್​ ಒಮ್ಮೆಲೆ ಓವರ್​ ಹೀಟ್​ ಆಗಿ ಸ್ಫೋಟಗೊಂಡಿದ್ದರಿಂದ ಇಬ್ಬರು ಗಾಯಗೊಂಡಿದ್ದಾರೆ. ಫ್ಲೈಟ್ ಅಟೆಂಡೆಂಟ್‌ಗಳು ಗಾಬರಿಯಾಗಿದ್ದ ಪ್ರಯಾಣಿಕರನ್ನು ಶಾಂತವಾಗಿಡಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

    ಈ ವಿಮಾನ ತಾವೊವಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಿಂಗಾಪುರಕ್ಕೆ ತೆರಳಬೇಕಿತ್ತು. ಪವರ್ ಬ್ಯಾಂಕ್ ಬ್ಲಾಸ್ಟ್​ ಆದ ಕಾರಣ ಕ್ಯಾಬಿನ್ ಹೊಗೆಯಿಂದ ತುಂಬಿದೆ. ಈ ಸಂದರ್ಭ ಎಲ್ಲಾ 189 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸ್ಥಳಾಂತರಿಸಲಾಯಿತು. ಘಟನೆಯ ಸಂದರ್ಭ ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅನಾಹುತ ಬೆಳಕಿಗೆ ಬರುತ್ತಿದ್ದಂತೆ ವಿಮಾನವನ್ನು ನಿಲ್ಲಿಸಲಾಗಿದೆ. (ಏಜೆನ್ಸೀಸ್)

    https://twitter.com/sg_trending/status/1613021671497269248

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts