More

    ಸುರಂಗ ಕೊರೆಯುವಾಗ ಕುಸಿದ ರಸ್ತೆ; ‘ನಮ್ಮ ಮೆಟ್ರೋ’ ಎಂಡಿ ಹೇಳಿದ್ದಿಷ್ಟು…

    ಬೆಂಗಳೂರು: ಎರಡೇ ದಿನಗಳ ಹಿಂದೆ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಕಂಬವೊಂದು, ರಸ್ತೆಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಕುಸಿದು ಬಿದ್ದು ತಾಯಿ ಮಗು ಮೃತಪಟ್ಟ ಘಟನೆ ನಡೆದಿತ್ತು. ಆ ಘಟನೆಯ ನೆನಪು ಇನ್ನೂ ಹಸಿಯಾಗಿರುವಾಗಲೇ ಮೆಟ್ರೋ ಕಾಮಗಾರಿ ನಡೆಯುವ ಸ್ಥಳದಲ್ಲಿ ಭೂಮಿ ಒಮ್ಮಿಂದೊಮ್ಮೆಲೆ ಕುಸಿದ ಕಾರಣ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಬಗ್ಗೆ ಬಿಎಂಆರ್​ಸಿಎಲ್​ ಎಂಡಿ ಆಗಿರುವ ಅಜುಂ ಪರ್ವೇಜ್​ ಹೇಳಿಕೆ ನೀಡಿದ್ದು ಯಾವುದೇ ರೀತಿಯಲ್ಲಿ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.

    ಇದನ್ನೂ ಓದಿ: ಮೆಟ್ರೋ ಪಿಲ್ಲರ್​ ದುರಂತ: ವರ್ಕ್​ ಫ್ರಂ ಹೋಮ್​ ಒಪ್ಪಿಕೊಂಡಿದ್ದರೆ ಉಳಿಯುತ್ತಿತ್ತೇ ಜೀವ?

    ಸಿಂಕ್​ ಹೋಲ್ ​ಬ್ರಿಗೇಡ್ ರಸ್ತೆಯ ಮೆಟ್ರೋ ಮಾರ್ಗದ ಬಳಿ ಸೃಷ್ಟಿಯಾಗಿದೆ. ಬ್ರಿಗೇಡ್ ರಸ್ತೆಯ ಬಳಿ ಇರುವ ಟ್ರಿನಿಟಿ ಸರ್ಕಲ್​ನಿಂದ ಶಿವಾಜಿನಗರದವರೆಗೂ ಮೆಟ್ರೊ ಕಾಮಗಾರಿ ನಡೆಯುತ್ತಿದ್ದು ಶಿವಾಜಿನಗರದಿಂದ ಎರಡನೇ ಹಂತದಲ್ಲಿ ಮೆಟ್ರೋ ಸುರಂಗ ಮಾರ್ಗ ಕಾಮಗಾರಿ ನಡೆಯುತ್ತಿದೆ.

    ಈ ಬಗ್ಗೆ ಮೆಟ್ರೋ ಎಂಡಿ ಅಜುಂ ಪರ್ವೇಜ್ ಹೇಳಿಕೆ ನೀಡಿದ್ದು ‘ನಾಲ್ಕು ದಿನದ ಹಿಂದೆ ಟಿಬಿಎಂ ಆ ಜಾಗದಿಂದ ಹಾದು ಹೋಗಿದೆ. ಟಿಬಿಎಂ ಹಾದು ಹೋದ ಜಾಗದಲ್ಲಿ ಕಾಂಕ್ರಿಟ್ ಪಿಲ್ಲರ್ ಕೂಡ ಹಾಕಲಾಗಿದೆ. ತಕ್ಷಣವೇ ಘಟನಾ ಸ್ಥಳದಲ್ಲಿ ಕಾಂಕ್ರಿಟ್ ಹಾಕಲಾಗುವುದು. ಆತಂಕ ಒಡುವ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts