More

    ಕೋಳಿ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಕರು ಕಳೇಬರ !

    ಶಿವಮೊಗ್ಗ: ಕೋಳಿ ತ್ಯಾಜ್ಯದಿಂದ ಉಪ ಉತ್ಪನ್ನಗಳನ್ನು ತಯಾರಿಸುತ್ತಿರುವ ಮಾಚೇನಹಳ್ಳಿ ಕೈಗಾರಿಕಾ ವಲಯದ ಮಲ್ನಾಡ್ ಫ್ರೋರಿಚ್ ಎಂಬ ಘಟಕದಲ್ಲಿ ಕರುವಿನ ಕಳೇಬರ ಪತ್ತೆಯಾಗಿದ್ದು ಸುಮೋಟೋ ಪ್ರಕರಣ ದಾಖಲಾಗಿದೆ.

    ಕಮಲೇಶ್ ಎಂಬುವರಿಗೆ ಸೇರಿದ ಘಟಕದಲ್ಲಿ ಶಿವಮೊಗ್ಗ ಹಾಗೂ ಭದ್ರಾವತಿಯ ಕೋಳಿ ಮಾಂಸದ ಅಂಗಡಿಗಳಿಂದ ಕೋಳಿಯ ತ್ಯಾಜ್ಯಗಳನ್ನು ಸಂಗ್ರಹಿಸಿ ಬಾಯಲ್ ಮಾಡಿ ಅದನ್ನು ಫುಡ್ ಪ್ಯಾಕೇಟ್‌ಗಳನ್ನಾಗಿ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು ಗುರುವಾರ ಈ ಘಟಕದಲ್ಲಿ ಕೋಳಿ ತ್ಯಾಜ್ಯದೊಂದಿಗೆ ಹಸು ಕರುಗಳನ್ನೂ ಸಹ ಸೇರಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ತುಂಗಾನಗರ ಠಾಣೆ ಪೊಲೀಸರು ದಾಳಿ ನಡೆಸಿದ್ಗಾ ಕರುವಿನ ತಲೆ ಹಾಗೂ ತ್ಯಾಜ್ಯಗಳು ಪತ್ತೆಯಾಗಿವೆ.
    ನರಸಿಂಹ ಮೂರ್ತಿ ಎಂಬುವರು ಶಿವಮೊಗ್ಗ ಹಾಗೂ ಭದ್ರಾವತಿಯಿಂದ ಕೋಳಿ ತ್ಯಾಜ್ಯಗಳನ್ನು ಘಟಕಕ್ಕೆ ಪೂರೈಕೆ ಮಾಡುತ್ತಿದ್ದು ದಾಳಿ ವೇಳೆ ಕರುವಿನ ತಲೆ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸುಮೋಟೋ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಶಿವಮೊಗ್ಗ ಮತ್ತು ಭದ್ರಾವತಿಯಿಂದ ಪ್ರತಿದಿನ ಘಟಕಕ್ಕೆ ಚಿಕನ್ ಮತ್ತು ಫಿಶ್ ತ್ಯಾಜ್ಯ ತರಲು ಪಾಲಿಕೆಯಿಂದ ಅನುಮತಿ ನೀಡಿದೆ. ಆದರೆ ತ್ಯಾಜ್ಯ ವಾಹನದಲ್ಲಿ ಕರುವಿನ ಕಳೇಬರ ಪತ್ತೆಯಾಗಿದ್ದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
    ತುಂಗಾನಗರ ಠಾಣೆ ಇನ್‌ಸ್ಪೆಕ್ಟರ್ ಮಂಜುನಾಥ್, ಪಾಲಿಕೆ ಆರೋಗ್ಯಾಧಿಕಾರಿ ಡಾ. ಎಸ್.ಟಿ.ರೇಖಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟಕ ಇರುವ ಸ್ಥಳ ಮೇಯರ್ ಎಸ್.ಶಿವಕುಮಾರ್ ಅವರ ತಂದೆ ಹೆಸರಿನಲ್ಲಿದ್ದು ಕೇರಳದ ಕಮಲೇಶ್ ಈ ತ್ಯಾಜ್ಯಗಳ ಪರಿಷ್ಕರಣೆ ನಡೆಸುತ್ತಿದ್ದಾರೆ. ಸಾಕು ಪ್ರಾಣಿಗಳಿಗೆ ನೀಡುವ ಆಹಾರ ತಯಾರಿಸುವ ಘಟಕ ಕಾರ್ಯನಿರ್ವಹಿಸುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts