More

    ಪುಷ್ಕರಣಿ ಬಳಿ ಕೋಳಿ ತ್ಯಾಜ್ಯ ವಿಲೇವಾರಿ

    ಕನಕಗಿರಿ: ಪಟ್ಟಣದ ಬಸ್ ನಿಲ್ದಾಣದಿಂದ ಶಾಲೆ, ಕಾಲೇಜು ಸೇರಿ ಸೋಮಸಾಗರ, ಗೌರಿಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಸೇತುವೆ ಕೆಳಗೆ ಹಾಗೂ ರಸ್ತೆ ಆಚೆ-ಈಚೆ ಕೋಳಿ ತಾಜ್ಯ ಹಾಕುತ್ತಿರುವುದರಿಂದ ದುರ್ವಾಸನೆ ಬೀರುತ್ತದೆ.

    ಪಟ್ಟಣದ ಹಲವು ಮಾಂಸದ ಅಂಗಡಿ ಮಾಲೀಕರು ಚಿಕನ್ ತ್ಯಾಜ್ಯವನ್ನು ದೂರ ಕೊಂಡೊಯ್ದು ವಿಲೇವಾರಿ ಮಾಡುತ್ತಿಲ್ಲ. ಐತಿಹಾಸಿಕ ಪುಷ್ಕರಣಿ ಪಕ್ಕದಲ್ಲೇ ಎಸೆಯುತ್ತಿದ್ದಾರೆ. ಮಳೆ ಬಂದಾಗ ಈ ತ್ಯಾಜ್ಯ ನೀರಿನೊಂದಿಗೆ ಹರಿದು ಬಂದು ನೇರವಾಗಿ ಹಳ್ಳ ಸೇರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಅಲ್ಲದೇ ಪಟ್ಟಣದ ಸೌಂದರ್ಯ ಕೂಡ ಹಾಳಾಗುತ್ತಿದೆ. ಈ ವಾತಾವರಣ ಪುಷ್ಕರಣಿ ಮತ್ತು ನವೀಕೃತ ಶಂಕರಲಿಂಗ ದೇವಸ್ಥಾನಕ್ಕೆ ಬರುವವರಿಗೆ ಇರಿಸು-ಮುರಿಸು ಆಗುತ್ತಿದೆ.

    ಪಟ್ಟಣ ಪಂಚಾಯಿತಿ ಆಡಳಿತ ಚಿಕನ್ ಅಂಗಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ರಸ್ತೆ ಬದಿ, ಪುಷ್ಕರಣಿ ಬಳಿ ಕೋಳಿ ತಾಜ್ಯ ವಿಲೇವಾರಿಗೆ ತಡೆ ಹಿಡಿಯಬೇಕು. ದೂರದ ಕಡೆ ಮತ್ತು ಸುರಕ್ಷಿತ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಆಗ್ರಹವಾಗಿದೆ.

    ಈಗಾಗಲೇ ಹಲವು ಬಾರಿ ಮಾಂಸದ ಅಂಗಡಿಯವರಿಗೆ ಕೋಳಿ ತಾಜ್ಯ ವಿಲೇವಾರಿ ಮಾಡದಂತೆ ಸೂಚಿಸಿದ್ದೇವೆ. ರಸ್ತೆ ಬದಿ ಹಾಕಿದ್ದ ಈ ತಾಜ್ಯವನ್ನು ನಮ್ಮ ಸಿಬ್ಬಂದಿ ತೆರವುಗೊಳಿಸುತ್ತಿದ್ದಾರೆ. ಆದರೆ, ಮಾಂಸದಂಗಡಿ ಮಾಲೀಕರು ಮತ್ತೇ ತಾಜ್ಯ ಹಾಕುತ್ತಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
    | ತಿರುಮಲಮ್ಮ ಎಂ.ಮುಖ್ಯಾಧಿಕಾರಿ ಪಪಂ ಕನಕಗಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts