More

    ವಿಲೇವಾರಿ ಭಾಗ್ಯ ಕಂಡ ಜಪ್ತಿ ಮರಳು, ವಾಹನಗಳು

    ಕನಕಗಿರಿ: ಹಲವು ವರ್ಷಗಳಿಂದ ಜಪ್ತಿ ಮಾಡಿದ ಅಕ್ರಮ ಮರಳನ್ನು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಶೇಖರಣೆ ಮಾಡಲಾಗಿದ್ದು, ಇದೀಗ ಮರಳು ಸೇರಿ ಅಪಘಾತ, ಸಣ್ಣ ಪುಟ್ಟ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ದ್ವಿಚಕ್ರ ವಾಹನಗಳು ವಿಲೇವಾರಿ ಭಾಗ್ಯ ಕಂಡಿವೆ.

    ಇದನ್ನೂ ಓದಿ: ಎರಡು ಪಟಾಕಿ ಗೋದಾಮುಗಳ ಮೇಲೆ ಸಿಸಿಬಿ ದಾಳಿ: ಮೂವರು ಬಂಧನ, 40 ಲಕ್ಷ ರೂ. ಮೌಲ್ಯದ ಪಟಾಕಿ ಜಪ್ತಿ

    ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮರಳು ಯಥೇಚ್ಛವಾಗಿ ಸಾಗಾಣಿಕೆಯಾಗುತ್ತಿದ್ದು, ಆಗೊಮ್ಮೆ ಈಗೊಮ್ಮೆ ದಾಳಿ ಮಾಡಿ ವಶಪಡಿಸಿಕೊಳ್ಳಲಾಗುತ್ತಿತ್ತು. ಇಷ್ಟು ವರ್ಷಗಳಲ್ಲಿ ಜಪ್ತಿಯಾಗಿದ್ದ 100 ಮೆಟ್ರಿಕ್ ಟನ್ ಅಕ್ರಮ ಮರಳನ್ನು ಹಲವು ವರ್ಷಗಳಿಂದ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಹಾಕಲಾಗಿತ್ತು.

    ಇದು ಠಾಣೆಯ ಜಾಗೆಯಲ್ಲಿ ಹೆಚ್ಚಿನ ಪ್ರದೇಶವನ್ನು ಹಿಡಿದಿತ್ತು. ಇದನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವತಿಯಿಂದ ಗಂಗಾವತಿ ಮೂಲದವರು ಟೆಂಡರ್ ಮೂಲಕ 1.03 ಲಕ್ಷ ರೂ.ಗಳಿಗೆ ಖರೀದಿ ಮಾಡಿದ್ದು, ಭಾನುವಾರ ಟಿಪ್ಪರ್ ಮೂಲಕ ಸಾಗಾಣಿಕೆ ಮಾಡಿದ್ದಾರೆ.

    ಅಪಘಾತ ಪ್ರಕರಣಗಳು, ಕರೊನಾ ಸಂದರ್ಭದಲ್ಲಿ ರೂಲ್ಸ್ ಮೀರಿದ ಹಾಗೂ ದಾಖಲೆಗಳಿಲ್ಲದ ವಶಪಡಿಸಿಕೊಂಡಿರುವ ವಾಹನಗಳು ಹಲವು ವರ್ಷಗಳಿಂದ ಠಾಣೆಯಲ್ಲಿದ್ದು, ತುಕ್ಕು ಹಿಡಿದಿವೆ.

    ನ.10ರಂದು ಎಡಿಜಿಪಿ ಅಲೋಕ ಕುಮಾರ್ ಜಿಲ್ಲೆಗೆ ಆಗಮಿಸುತ್ತಿದ್ದು, ಠಾಣೆಗಳ ಭೇಟಿಯಿರುವುದರಿಂದ ಪ್ರಕರಣ ಮುಗಿದ ಇಂಥಹ ವಾಹನಗಳನ್ನು ಸಂಬಂಧಪಟ್ಟವರಿಗೆ ಭದ್ರತಾ ಪತ್ರ ಪಡೆದು ಪೊಲೀಸ್‌ನವರೆ ವಿಲೇವಾರಿ ಮಾಡಿ ಭಾರವನ್ನು ಇಳಿಸಿಕೊಳ್ಳುತ್ತಿದ್ದಾರೆ. ಈಗಾಗಲೇ 5 ವಾಹನಗಳನ್ನು ವಿಲೇವಾರಿ ಮಾಡಿದ್ದು. ಇನ್ನುಳಿದ ವಾಹನಗಳ ಮಾಲೀಕರು, ವಾರಸುದಾರರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ.

    ಅಪಘಾತದ ವಾಹನ ಪಡೆಯಲು ಹಿಂದೇಟು: ಅಪಘಾತಗೊಂಡು ಸಾವನ್ನಪ್ಪಿದ ವಾಹನಗಳನ್ನು ಜಪ್ತಿ ಮಾಡಿ ಠಾಣೆಯಲ್ಲಿ ತಂದಿಡಲಾಗಿದ್ದು, ಇಂತಹ ವಾಹನಗಳನ್ನು ಪಡೆಯಲು ಸಂಬಂಧಿಸಿದವರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಮತ್ತೇ ಜಪ್ತಿ ವಾಹನಗಳು ಠಾಣೆಯಲ್ಲಿ ಉಳಿಯುವ ಸಾಧ್ಯತೆಗಳೇ ಹೆಚ್ಚಾಗಿವೆ.

    ಪ್ರಕರಣ ಮುಗಿದ ವಾಹನಗಳನ್ನು ವಾರಸುದಾರರಿಗೆ ವಿಲೇವಾರಿ ಮಾಡಲಾಗುತ್ತಿದ್ದು, ಈ ಪ್ರಕ್ರಿಯೆ ಎಲ್ಲ ಠಾಣೆಗಳಲ್ಲಿ ನಡೆದಿದೆ. ನ್ಯಾಯಾಲಯದ ಅನುಮತಿ ಪಡೆದು ಇನ್ನೀತರ ವಾಹನಗಳನ್ನು ವಿಲೇವಾರಿ ಮಾಡಲಾಗುವುದು.
    ಸಿದ್ದಲಿಂಗಪ್ಪಗೌಡ ಪಾಟೀಲ್ ಡಿವೈಎಸ್‌ಪಿ, ಗಂಗಾವತಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts