More

    ಭೂ ಒತ್ತುವರಿ ತೆರವಿಗೆ ವಿರೋಧ

    ಶೃಂಗೇರಿ: ಅರಣ್ಯ ಒತ್ತುವರಿ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಮಂಜೂರಾತಿಗೆ ಯಾವುದೇ ಸ್ಪಷ್ಟ ನಿಲುವು ತೆಗೆದುಕೊಳ್ಳದೆ ಸರ್ಕಾರವು ತೆರವು ಕಾರ್ಯಾಚರಣೆಗೆ ಮುಂದಾಗಿದೆ ಎಂದು ಮಲೆನಾಡು ನಾಗರಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ಅಸಮಾಧಾಬ ವ್ಯಕ್ತಪಡಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ವರ್ಷಗಳಿಂದ ವಾಸವಾಗಿರುವ ರೈತರ ಒತ್ತುವರಿ ಸಮಸ್ಯೆಗಳ ಕುರಿತ ಅರ್ಜಿಗಳು ವಿಲೇವಾರಿಯಾಗಿ ಹಾಗೆಯೇ ಉಳಿದಿವೆ. ಮೊದಲು ಅವುಗಳ ವಿಲೇವಾರಿಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
    ಸೊಪ್ಪಿನಬೆಟ್ಟ ಎಂಬ ಪರಿಕಲ್ಪನೆ ಇಟ್ಟುಕೊಂಡು ರೈತರ ಹಾಗೂ ಜನಸಾಮಾನ್ಯರ ಜೀವನದಲ್ಲಿ ಅಧಿಕಾರಿಗಳು ಆಟವಾಡುತ್ತಿದ್ದಾರೆ. ಮೊದಲು ಸೊಪ್ಪಿನಬೆಟ್ಟ ಜಾಗವನ್ನು ಮಂಜೂರು ಮಾಡಲು ಸರ್ಕಾರ ಅವಕಾಶ ನೀಡಬೇಕು. ಕೇವಲ ಜೀವನ ನಿರ್ವಹಣೆಗಾಗಿ ಹಲವು ವರ್ಷಗಳಿಂದ ಸಣ್ಣ ಕೃಷಿಕರು ಅರಣ್ಯ ಒತ್ತುವರಿ ಮಾಡಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗಳು ಮೇಲಧಿಕಾರಿಗಳಿಗೆ ನಿಖರ ಮಾಹಿತಿ ನೀಡಬೇಕು. ಆದರೆ ಖುಲ್ಲಾ ಮಾಡಿ ಜಾಗವನ್ನು ಸರ್ಕಾರದ ಸುಪರ್ದಿಗೆ ವಹಿಸಬೇಕು ಎಂದು ಸರ್ಕಾರ ತಿಳಿಸಿದ್ದು, ಈ ಪ್ರಕ್ರಿಯೆಗೆ ಸಮಿತಿಯ ವಿರೋಧವಿದೆ ಎಂದರು.
    ಒಂದೆಡೆ ಎಲ್ಲ ಜಾಗ ತಮಗೇ ಸೇರಿದ್ದು ಎಂದು ಅರಣ್ಯ ಇಲಾಖೆಯು ರೈತರ ಒತ್ತುವರಿ ತೆರವಿಗೆ ಮುಂದಾದರೆ ರೈತರ ಪರವಾಗಿ ನಿಲ್ಲಬೇಕಾದ ಕಂದಾಯ ಇಲಾಖೆಯು ಅರಣ್ಯ ಇಲಾಖೆಗೆ ಶರಣಾಗಿದೆ. ಇದು ರೈತರಿಗೆ ಮುಂದಿನ ದಿನಗಳಲ್ಲಿ ಮಾರಕವಾಗಲಿದೆ. ಇದನ್ನು ಪಕ್ಷಭೇದ ಮರೆತು ಎಲ್ಲರೂ ವಿರೋಧಿಸುವ ಅಗತ್ಯವಿದೆ. ಆದರೆ ಯಾವುದೇ ರಾಜಕೀಯ ಪಕ್ಷಗಳು ವಿರೋಧಿಸದಿರುವುದು ಆಶ್ಚರ್ಯ ತಂದಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts