More

    ತೀರ್ಥಹಳ್ಳಿ-ಯಡೂರು ಹೆದ್ದಾರಿಯಲ್ಲಿ ಹೊಂಡಗುAಡಿ

    ತೀರ್ಥಹಳ್ಳಿ: ತೀರ್ಥಹಳ್ಳಿ-ಯಡೂರು ನಡುವಿನ ರಾಜ್ಯ ಹೆದ್ದಾರಿಯಲ್ಲಿ ಉಂಟೂರುಕಟ್ಟೆ ಕೈಮರದಿಂದ ಯಡೂರು ಕಡೆ ಹೋಗುವ ರಸ್ತೆ ಕನಿಷ್ಠ ನಿರ್ವಹಣೆಯೂ ಇಲ್ಲದ ಕಾರಣ ಸಂಪೂರ್ಣ ಹಾಳಾಗಿದ್ದು ರಸ್ತೆಯಲ್ಲಿ ಬಿದ್ದಿರುವ ಹೊಂಡಗುAಡಿಗಳಿAದಾಗಿ ಈ ಮಾರ್ಗದಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿವೆ.
    ದಿನದ ೨೪ ತಾಸು ವಾಹನ ಸಂಚಾರ ಇರುವ ಈ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಲೋಕೋಪಯೋಗಿ ಇಲಾಖೆಯಿಂದ ಗುಂಡಿಗಳನ್ನು ಮುಚ್ಚುವ ಪ್ರಯತ್ನವೂ ಆಗಿಲ್ಲ. ಇದರಿಂದಾಗಿ ಈ ಮಾರ್ಗದಲ್ಲಿ ೨೦-೨೫ ಟನ್ ಭಾರ ತುಂಬಿಸಿಕೊAಡು ಸಂಚರಿಸುವ 16 ಚಕ್ರಗಳ ದೊಡ್ಡ ವಾಹನಗಳು ಮತ್ತು ಕರಾವಳಿ ಭಾಗದಿಂದ ದೂರದ ಊರುಗಳಿಗೆ ರಾತ್ರಿ ಸಂಚಾರಿಸುವ ಬಸ್ಸುಗಳÀ ಸಂಕಷ್ಟ ಹೇಳತೀರದಾಗಿದೆ.
    ಹೀಗಾಗಿ ವಾಹನಗಳು ಆ್ಯಕ್ಸಲ್ ಕಟ್ ಮುಂತಾದ ಸಮಸ್ಯೆಗಳಿಂದ ದಾರಿಯುದ್ದಕ್ಕೂ ನಿಲ್ಲುತ್ತಿದ್ದು ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಉಂಟೂರುಕಟ್ಟೆ ಕೈಮರದ ಹಿರಿಯ ನಾಗರಿಕ ಬೊಮ್ಮಯ್ಯ ನಾಯ್ಕ್ ಅನಿಸಿಕೆಯಂತೆ ಈ ರಸ್ತೆ ಡಾಂಬರೀಕರಣ ಕಾಣದೆ ಹಲವು ವರ್ಷಗಳೇ ಸಂದಿದೆ. ಈ ವರ್ಷ ಮಳೆ ಕಡಿಮೆ ಇದ್ದರೂ ರಸ್ತೆ ಈ ಮಟ್ಟದಲ್ಲಿ ಹಾಳಾಗಿರುವುದಕ್ಕೆ ಸಂಬAಽಸಿದ ಇಲಾಖೆಯ ಉದಾಸೀನವೇ ಕಾರಣ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts