More

    ಹಾಥರಸ್​ ಬಳಿಕ ದೇಶದಲ್ಲಿ ವರದಿಯಾದ ಗ್ಯಾಂಗ್​ರೇಪ್ ಪ್ರಕರಣ​ಗಳೆಷ್ಟು? ಯಾವ ರಾಜ್ಯ ಮೊದಲ ಸ್ಥಾನದಲ್ಲಿದೆ?

    ನವದೆಹಲಿ: ದಿ ಪೊಲಿಸ್​ ಪ್ರಾಜೆಕ್ಟ್​ನ ಸಂಶೋಧನಾ ವಿಭಾಗ ವೈಲೆನ್ಸ್​ ಲ್ಯಾಬ್​ ಸಂಗ್ರಹಿಸಿದ ಡೇಟಾ ಪ್ರಕಾರ ಹಾಥರಸ್​ನಲ್ಲಿ ನಡೆದಿದೆ ಎನ್ನಲಾದ ಗ್ಯಾಂಗ್​ರೇಪ್​ ಪ್ರಕರಣದ ಬಳಿಕ ದೇಶದಲ್ಲಿ ಅಕ್ಟೋಬರ್​ 11ರವರೆಗೆ ಸುಮಾರು 48 ಸಾಮೂಹಿಕ ಅತ್ಯಾಚಾರಗಳು ನಡೆದಿವೆ ಎಂಬ ಆಘಾತಕಾರಿ ವರದಿ ಬೆಳಕಿಗೆ ಬಂದಿದೆ.

    ಅತ್ಯಾಚಾರಕ್ಕೊಳಗಾದ ಸಂತ್ರಸ್ತರು 11 ರಿಂದ 45 ವರ್ಷ ವಯೋಮಾನದೊಳಗಿನವರು. ವಿವಾಹಿತರು, ಅವಿವಾಹಿತರು, ಮಾನಸಿಕ ಅಸ್ವಸ್ಥರು, ತೃತೀಯ ಲಿಂಗಿಗಳು ಮತ್ತು ಅಂಗವಿಕಲರು ಸಂತ್ರಸ್ತರ ಗುಂಪಿನಲ್ಲಿದ್ದಾರೆ. 47 ಸಂತ್ರಸ್ತರಲ್ಲಿ 12 ಮಂದಿ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಇಬ್ಬರು ಬುಡುಕಟ್ಟು ಜನಾಂಗಕ್ಕೆ ಸೇರಿದವರು.

    ಇದನ್ನೂ ಓದಿ: ನನ್ನ ಹೆಂಡ್ತಿ ಮೊಬೈಲ್​ಗೆ ಯಾಕಪ್ಪಾ ಫೋನ್ ಮಾಡ್ತೀಯಾ? ಎಂದವನ ಕತೆ ಏನಾಯ್ತು ನೋಡಿ

    ಹಾಥರಸ್​ನಲ್ಲಿ ನಡೆದಿದೆ ಎನ್ನಲಾದ ಗ್ಯಾಂಗ್​ರೇಪ್​ ಪ್ರಕರಣದ ಬಳಿಕ ಉತ್ತರ ಪ್ರದೇಶ ಒಂದರಲ್ಲೇ 14 ಪ್ರಕರಣಗಳು ಬೆಳಕಿಗೆ ಬಂದಿದ್ದು, ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಉಳಿದಂತೆ ಮಧ್ಯಪ್ರದೇಶ (8), ರಾಜಸ್ಥಾನ (6) ಮತ್ತು ಬಿಹಾರ (4) ನಂತರದ ಸ್ಥಾನದಲ್ಲಿವೆ.

    ಬಹುದೊಡ್ಡ ಡೇಟಾ ಸಂಗ್ರಹಹಾಥರಸ್​ ಬಳಿಕ ದೇಶದಲ್ಲಿ ವರದಿಯಾದ ಗ್ಯಾಂಗ್​ರೇಪ್ ಪ್ರಕರಣ​ಗಳೆಷ್ಟು? ಯಾವ ರಾಜ್ಯ ಮೊದಲ ಸ್ಥಾನದಲ್ಲಿದೆ?ದ ಯೋಜನೆಯ ಭಾಗವಾಗಿ ಗ್ಯಾಂಗ್​ರೇಪ್​ ಡೇಟಾವನ್ನು ಸಂಗ್ರಹಿಸಲಾಗುತ್ತಿದೆ. ಅಲ್ಲದೆ, ಇಂಗ್ಲಿಷ್ ಭಾಷೆಯ ಪತ್ರಿಕೆಗಳಿಂದ ಪ್ರಕರಣಗಳನ್ನು ಕಂಡುಹಿಡಿಯಲು ಪಠ್ಯ ವಿಶ್ಲೇಷಣಾ ಪರಿಕರಗಳು ಮತ್ತು ಮಾನವ ಕೋಡಿಂಗ್ ಸಂಯೋಜನೆಯನ್ನು ಬಳಸುತ್ತೇವೆ. ಎಲ್ಲ ಮಾಹಿತಿಯನ್ನು ಡೇಟಾ ಫೈಲ್​ನಲ್ಲಿ ದಾಖಲಿಸಿ, ಜಿಯೋಕೋಡ್​ ಆಗಿ ದಾಖಲಿಸಲಾಗುವುದು ಎಂದು ದಿ ಪೊಲಿಸ್​ ಪ್ರಾಜೆಕ್ಟ್​ನ ನಿರ್ದೇಶಕರಾದ ವಸುಂಧರಾ ಸರ್ನಾಟೆ ತಿಳಿಸಿದ್ದಾರೆ. (ಏಜೆನ್ಸೀಸ್​)

    ವೆಡ್ಡಿಂಗ್​ ಫೋಟೋಶೂಟ್​ಗೆ ಹರಿದುಬಂತು ಅಶ್ಲೀಲ ಕಮೆಂಟ್ಸ್​: ನವದಂಪತಿ ಸಮರ್ಥನೆ ಹೀಗಿದೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts