More

    ಚೀನಾ ಗುಟ್ಟಾಗಿ ನಡೆಸಿತೇ ಭೂಗತ ಅಣ್ವಸ್ತ್ರ ಪರೀಕ್ಷೆ? ಅಮೆರಿಕದ ಆರೋಪಕ್ಕೆ ಏನು ಉತ್ತರ ನೀಡುತ್ತಿದೆ ಚೀನಾ…

    ವಾಷಿಂಗ್ಟನ್: ಕರೊನಾ ವೈರಸ್ ಹಾವಳಿ ಇಡೀ ಜಗತ್ತನ್ನು ಕಾಡುತ್ತಿರುವ ಈ ಕಾಲದಲ್ಲಿ ಚೀನಾ ರಹಸ್ಯವಾಗಿ ಭೂಗತ ಅಣ್ವಸ್ತ್ರ ಪರೀಕ್ಷೆ ನಡೆಸಿದೆಯೇ?

    ಚೀನಾದ ಲೋಪ್ ನುರ್ ಪರಮಾಣು ಪರೀಕ್ಷಾ ಸ್ಥಳದಲ್ಲಿನ ಚಟುವಟಿಕೆಗಳ ಆಧಾರದಲ್ಲಿ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಿಗೆ ಇಂತಹುದೊಂದು ಅನುಮಾನ ಮೂಡಿದೆ. ಅಮೆರಿಕದ ವಿದೇಶಾಂಗ ಇಲಾಖೆ ಈಗಾಗಲೇ ಈ ಕುರಿತು ಚೀನಾವನ್ನು ಬಹಿರಂಗವಾಗಿಯೇ ಪ್ರಶ್ನಿಸಿದೆ.

    ಲೋಪ್ ನುರ್ ಪರಮಾಣು ಪರೀಕ್ಷಾ ಸ್ಥಳದಲ್ಲಿ 2019ರಲ್ಲಿ ವರ್ಷದುದ್ದಕ್ಕೂ ಕಂಡು ಬಂದ ಚಟುವಟಿಕೆಗಳು ಈ ಅನುಮಾನಕ್ಕೆ ಕಾರಣವಾಗಿವೆ. ಪಾರದರ್ಶಕತೆ ಕೊರತೆ ಸಹಿತ ಹಲವು ಅಂಶಗಳು ಕೆಳ ಹಂತದ ಪರಮಾಣು ಸ್ಫೋಟ ನಡೆದಿರುವ ಸಾಧ್ಯತೆ ಇದೆ. ಆದರೆ ಸ್ಫೋಟಕ್ಕೆ ಯಾವುದೇ ಪುರಾವೆ ಇಲ್ಲ. 1996ರ ಸಮಗ್ರ ಅಣ್ವಸ್ತ್ರ ಪರೀಕ್ಷಾ ನಿಷೇಧ ಒಪ್ಪಂದ (ಸಿಟಿಬಿಟಿ), ಅಣ್ವಸ್ತ್ರಗಳ ಸುರಕ್ಷತೆ ಖಾತರಿಪಡಿಸುವ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುತ್ತದೆ.

    ಅಂತಾರಾಷ್ಟ್ರೀಯ ಒಪ್ಪಂದವನ್ನು ಉಲ್ಲಂಘಿಸಿ ಚೀನಾ ಸ್ಫೋಟ ನಡೆಸಿದ್ದು ನಿಜವಾಗಿದ್ದರೆ, ಅಮೆರಿಕ ಮತ್ತು ಚೀನಾ ನಡುವಿನ ಬಾಂಧವ್ಯ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಯಿದ್ದು ಇದರಿಂದ ಜಾಗತಿಕ ಮಟ್ಟದಲ್ಲಿ ಇತರ ರಾಷ್ಟ್ರಗಳ ನಡುವಿನ ಸಂಬಂಧದ ಮೇಲೂ ದುಷ್ಪರಿಣಾಮವಾಗುವ ಅಪಾಯವಿದೆ.

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಖಾತೆಯ ವಕ್ತಾರ ಝಾವೊ ಲಿಜನ್, ಅಮೆರಿಕ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಚೀನಾ ಸದಾ ಜವಾಬ್ದಾರಿಯುತ ಧೋರಣೆ ಅನುಸರಿಸುತ್ತಿದೆ. ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಪ್ರಾಮಾಣಿಕವಾಗಿ ಪಾಲಿಸುತ್ತಿದೆ ಎಂದಿದ್ದಾರೆ. (ಏಜೆನ್ಸೀಸ್​)

    108 ರಾಷ್ಟ್ರಗಳಿಗೆ ಸುಮಾರು 60 ಕೋಟಿಯಷ್ಟು ಮಾತ್ರೆಗಳನ್ನು ಪೂರೈಸಿ ದೊಡ್ಡಣ್ಣ ಎನ್ನಿಸಿಕೊಂಡ ಭಾರತ

    ಕರೊನಾ ವೈರಸ್​ ಶ್ರೀಮಂತರ ರೋಗ: ವಿದೇಶದಿಂದ ಹೊತ್ತು ತಂದಿದ್ದಾರೆಂದ ತಮಿಳುನಾಡು ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts