More

    ಜನಾಕರ್ಷಣೀಯ ರೈಲ್ವೆ ವಸ್ತು ಸಂಗ್ರಹಾಲಯ

    ಹುಬ್ಬಳ್ಳಿ: ಹುಬ್ಬಳ್ಳಿ ರೈಲ್ವೆ ವಸ್ತು ಸಂಗ್ರಹಾಲಯ (ಮ್ಯೂಸಿಯಂ)ಕ್ಕೆ ಮೂರುವರೆ ತಿಂಗಳಲ್ಲಿ ಸಾವಿರಾರು ಜನರು ಭೇಟಿ ನೀಡಿದ್ದಾರೆ.

    ಆಗಸ್ಟ್ 9ರಂದು ಉದ್ಘಾಟನೆಗೊಂಡಿದ್ದ ಮ್ಯೂಸಿಯಂ ಇದೀಗ ಉತ್ತರ ಕರ್ನಾಟಕದ ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಟ್ಟಿದೆ.

    ಉದ್ಘಾಟನೆಗೊಂಡ 20 ದಿನಗಳಲ್ಲಿ 2,683 ಜನರು ಭೇಟಿ ನೀಡಿ ವೀಕ್ಷಿಸಿದ್ದರು. ಸೆಪ್ಟೆಂಬರ್​ನಲ್ಲಿ 7,198, ಅಕ್ಟೋಬರ್​ನಲ್ಲಿ 7,848 ಹಾಗೂ ನವೆಂಬರ್​ನಲ್ಲಿ 6,628 ಜನರು ಭೇಟಿ ನೀಡಿದ್ದಾರೆ. ಇದುವರೆಗೆ ಒಟ್ಟು 24,357 ಜನರು ಭೇಟಿ ನೀಡಿದ್ದು, ಇವರಲ್ಲಿ 5 ಸಾವಿರ ಮಕ್ಕಳೂ ಸೇರಿದ್ದಾರೆ. ಮಕ್ಕಳ ಅಚ್ಚುಮೆಚ್ಚಿನ ಆಟಿಗೆ ರೈಲಿನಲ್ಲಿ 13,783 ಜನರು ಕುಳಿತು ಆನಂದಿಸಿದ್ದಾರೆ.

    ನಿತ್ಯ ಸುಮಾರು 140-150 ಜನರು ಮ್ಯೂಸಿಯಂಗೆ ಭೇಟಿ ನೀಡುತ್ತಿದ್ದು, ವಾರದ ಕೊನೆಗೆ ಭೇಟಿ ನೀಡುವವರ ಸಂಖ್ಯೆ 400ಕ್ಕೆ ಏರಿದೆ. ಈ ಮ್ಯೂಸಿಯಂ ರೈಲ್ವೆ ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಉತ್ತಮ ವೇದಿಕೆಯಾಗಿದೆ.

    ಮಂಗಳವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 12 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಮತ್ತು ವಾರದ ಕೊನೆ ದಿನಗಳಲ್ಲಿ ಮಧ್ಯಾಹ್ನ 12 ರಿಂದ ರಾತ್ರಿ 8 ಗಂಟೆಯವರೆಗೆ ತೆರೆದಿರುತ್ತದೆ. ಪ್ರತಿ ಸೋಮವಾರ ಹಾಗೂ ಇತರ ಸಾರ್ವಜನಿಕ ರಜೆ ದಿನಗಳಲ್ಲಿ ಬಂದ್ ಇರುತ್ತದೆ.

    ಯುವಕರಿಗೆ ಹಾಗೂ 5 ರಿಂದ 12 ವರ್ಷದೊಳಗಿನ ಮಕ್ಕಳಿಗೆ 20 ರೂ. ಪ್ರವೇಶ ಶುಲ್ಕ ಹಾಗೂ 5 ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಉಚಿತವಾಗಿದೆ. ಮ್ಯೂಸಿಯಂಗೆ ಭೇಟಿ ನೀಡುವವರು ಕೋವಿಡ್ ನಿಯಮಗಳನ್ನು ಪಾಲಿಸಬೇಕು. ರೈಲ್ವೆ ಮ್ಯೂಸಿಯಂ ಕುರಿತು ಪ್ರತಿಕ್ರಿಯೆ ನೀಡಿರುವ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್, ಭಾರತೀಯ ಉಗಿಬಂಡಿ ಪರಂಪರೆ ಅರಿಯಲು ಹುಬ್ಬ್ಳು ಗದಗ ರಸ್ತೆಯಲ್ಲಿರುವ ಈ ಮ್ಯೂಸಿಯಂಗೆ ಹೆಚ್ಚು ಜನರು ಭೇಟಿ ನೀಡುತ್ತಿದ್ದಾರೆ. ಉತ್ತರ ಕರ್ನಾಟಕದ ಜನರಿಗೆ ಈ ಮ್ಯೂಸಿಯಂ ಪ್ರವಾಸಿ ತಾಣವಾಗಿದೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts