More

    ಧಗಧಗನೆ ಹೊತ್ತಿ ಉರಿಯಿತು ಗಾಂಧಿಬಜಾರಿನ ಖ್ಯಾತ ಗ್ರಂಧಿಗೆ ಅಂಗಡಿ; ಬೆಂಕಿಯ ಕೆನ್ನಾಲಗೆಗೆ ಸುಟ್ಟು ಹೋಯ್ತು ಮೂರಂತಸ್ತಿನ ಕಟ್ಟಡ

    ಬೆಂಗಳೂರು: ಬಸವನಗುಡಿಯ ಗಾಂಧಿಬಜಾರಿನ ಖ್ಯಾತ ಗ್ರಂಧಿಗೆ ಅಂಗಡಿಯೊಂದು ತಡರಾತ್ರಿಯಲ್ಲಿ ಧಗಧಗನೆ ಹೊತ್ತಿ ಉರಿದಿದ್ದು, ಬೆಂಕಿಯ ಕೆನ್ನಾಲಗೆಗೆ ಮೂರಂತಸ್ತಿನ ಕಟ್ಟಡ ಸುಟ್ಟುಹೋಗಿದೆ. ಗ್ರಂಧಿಗೆ ಅಂಗಡಿಯಲ್ಲಿನ ಈ ಅಗ್ನಿ ಅವಘಡದಿಂದಾಗಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ.

    ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರುವ ಸತೀಶ್ ಸ್ಟೋರ್ಸ್‌ ಗ್ರಂಧಿಗೆ ಅಂಗಡಿ ಮಳಿಗೆಯಲ್ಲಿ ಭಾನುವಾರ ರಾತ್ರಿ 11 ಗಂಟೆ ಸಮಯದಲ್ಲಿ ಈ ಅಗ್ನಿದುರಂತ ಸಂಭವಿಸಿದೆ. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಖರೀದಿಸಿ ಅಂಗಡಿಯಲ್ಲಿ ಸಂಗ್ರಹಿಸಿಡಲಾಗಿತ್ತು. ಈ ವಸ್ತುಗಳು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಬೂದಿಯಾಗಿವೆ. ಬೆಂಕಿ ಅವಘಡದಿಂದ ಮೂರು ಅಂತಸ್ತಿನ ಕಟ್ಟಡಕ್ಕೂ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವ್ಯಾಪಾರ ಮುಗಿಸಿ ಭಾನುವಾರ ಸಂಜೆ ಸಿಬ್ಬಂದಿ ಬೀಗ ಹಾಕಿಕೊಂಡು ಮನೆಗೆ ತೆರಳಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಅಂಗಡಿ ಮಳಿಗೆಯಲ್ಲಿ ದಟ್ಟ ಹೊಗೆ ಕಾಣಿಸಿಕೊಂಡು ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡು ಧಗಧಗ ಉರಿಯಲು ಆರಂಭಿಸಿದೆ. ಈ ವೇಳೆ ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸುತ್ತಿದ್ದ ಸೆಕ್ಯೂರಿಗಾರ್ಡ್ ಹಾಗೂ ಸ್ಥಳೀಯರು ಕೂಡಲೇ ಅಗ್ನಿಶಾಮಕ ಠಾಣೆ ಹಾಗೂ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

    ಧಗಧಗನೆ ಹೊತ್ತಿ ಉರಿಯಿತು ಗಾಂಧಿಬಜಾರಿನ ಖ್ಯಾತ ಗ್ರಂಧಿಗೆ ಅಂಗಡಿ; ಬೆಂಕಿಯ ಕೆನ್ನಾಲಗೆಗೆ ಸುಟ್ಟು ಹೋಯ್ತು ಮೂರಂತಸ್ತಿನ ಕಟ್ಟಡ

    ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಸತತ ನಾಲ್ಕು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಅವಘಡದಲ್ಲಿ ಪೂಜೆಗೆ ಬಳಸುವ ಕಟ್ಟಿಗೆಗಳು, ಹಗ್ಗ, ಹುಲ್ಲು, ಕರ್ಪೂರ ಸೇರಿ ಧಾರ್ಮಿಕ, ಶುಭ ಕಾರ್ಯಗಳು ಹಾಗೂ ಹಬ್ಬಗಳಿಗೆ ಬಳಸುವ ಸಾಮಗ್ರಿಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಗ್ರಂಧಿಗೆ ಅಂಗಡಿ ಮಾಲೀಕರು ಅಗ್ನಿ ಅವಘಡದ ಬಗ್ಗೆ ಇನ್ನೂ ದೂರು ನೀಡಿಲ್ಲ. ಲಕ್ಷಾಂತ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಈ ಸಂಬಂಧ ದೂರು ಸ್ವೀಕರಿಸಿ ಮುಂದಿನ ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಎಷ್ಟು ದೇಶ ಸುತ್ತಿದರೂ ನಮ್ಮೂರೇ ಮೇಲು!; ಡಾ.ಬ್ರೋ ಜತೆ ವಿಜಯವಾಣಿ ಸಂವಾದ

    ಡಾ.ಬ್ರೋ@ವಿಜಯವಾಣಿ: ಇಲ್ಲಿವೆ ಎಕ್ಸ್​ಕ್ಲೂಸಿವ್ ಫೋಟೋಗಳು..

    6 ತಿಂಗಳ ಕಾಲ ಒಂದೊಂದಾಗಿ ಕಾಣೆಯಾಗಿದ್ದವು ಮನೆಯೊಳಗಿದ್ದ ಆಭರಣಗಳು!; ಕೊನೆಗೂ ಬಯಲಾಯ್ತು ಅಸಲಿಯತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts