More

    2022 ಪೂಜಾ ಹೆಗ್ಡೆ ವರ್ಷವಂತೆ… ಯಾಕೆ ಗೊತ್ತಾ?

    ಸದ್ಯ, ದಕ್ಷಿಣ ಭಾರತದಲ್ಲಿ ಕೇವಲ ಮೂರು ನಟಿಯರ ಹೆಸರುಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಜೊತೆಗೆ, ಆ ಮೂರು ನಟಿಯರು ಕನ್ನಡಿಗರು ಎಂಬುದು ಬಹುಮುಖ್ಯ. ಅಂದಹಾಗೆ, ಬ್ಯೂಸಿಯಸ್ಟ್ ನಟಿಯರ ಪಟ್ಟಿಯಲ್ಲಿ ನಮ್ಮ ಕರುನಾಡ ಕುವರಿಯರು ಮೂರು ಮಂದಿ. ಅವರೆ ನಟಿ ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ, ಕೃತಿ ಶೆಟ್ಟಿ. ಈ ಮೂರು ನಟಿಯರ ಹೆಸರುಗಳು ಕೇಳಿದರೆ ಸಾಕು ಅವರು ಮಾಡುತ್ತಿರುವ ಸಾಲು ಸಾಲು ಸಿನಿಮಾಗಳು, ಅವರು ಪಡೆದಿರುವ ಖ್ಯಾತಿ, ಅಭಿಮಾನಿಗಳ ಸಂಖ್ಯೆ ಎಲ್ಲರಿಗೂ ನೆನಪಾಗುತ್ತೆ. ಹೀಗಿದ್ದರೂ, ಈ ಮೂವ್ವರು ನಟಿಯರ ಪೈಕಿ ಬುಟ್ಟ ಬೊಮ್ಮಾ ಎಂದೇ ಫೇಮಸ್ ಆಗಿರುವ ನಟಿ ಪೂಜಾ ಹೆಗ್ಡೆ ಮಾತ್ರ ಬೇರೆ ಇಬ್ಬರೂ ನಟಿಯರಿಗಿಂತ ಸಿಕ್ಕಾಪಟ್ಟೆ ಬ್ಯೂಸಿ ಎಂದೇ ಹೇಳಬೇಕು.
    ಇದಕ್ಕೆ ಕಾರಣ, ಪೂಜಾ ಹೆಗ್ಡೆ ಕೇವಲ ಒಂದೇ ವರ್ಷದಲ್ಲಿ 5 ಸಿನಿಮಾಗಳ ರಿಲೀಸ್ ಹೊಂದಿದ್ದಾರೆ. ಹೌದು, 2022ರಲ್ಲಿ ಅಭಿಮಾನಿಗಳ ಪ್ರೀತಿಯ ಬ್ಯೂಸಿ ಬ್ಯೂಸಿ ಬುಟ್ಟ ಬೊಮ್ಮಾ 5 ಸಿನಿಮಾಗಳ ಬಿಡುಗಡೆಗೆ ಕಾದು ಕುಳಿತಿದ್ದು, ಅವರ ಡಿಮ್ಯಾಂಡ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ನಟಿ ಪೂಜಾ ಹೆಗ್ಡೆ 2021ರಲ್ಲಿ ಬ್ಯೂಸಿ ಬ್ಯೂಸಿಯಾಗಿ ಶೂಟಿಂಗ್ ಮಾಡಿರುವ ಚಿತ್ರಗಳು, ಈ ವರ್ಷ ಒಂದರ ನಂತರ ಒಂದು ಬಿಡುಗಡೆಯಾಗಲಿವೆ. ಹಾಗಾಗಿ, ಈ ವರ್ಷ ಅಂದರೆ 2022 ಪೂಜಾ ಅವರ ವರ್ಷ ಎಂದು ಅಭಿಮಾನಿಗಳು ಘೋಷಿಸಿದ್ದಾರೆ. ನಟಿ ಅಭಿನಯಿಸಿರುವ ಆ 5 ಸಿನಿಮಾಗಳು ಯಾವವು ಅಂದರೆ, ಮೊದಲು ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಅವರ ಬೀಸ್ಟ್‘. ಈ ಸಿನಿಮಾ ಏಪ್ರಿಲ್​ನಲ್ಲಿ ಬಿಡುಗಡೆಗೆ ಸಜ್ಜಾಗಿದೆ

    2022 ಪೂಜಾ ಹೆಗ್ಡೆ ವರ್ಷವಂತೆ... ಯಾಕೆ ಗೊತ್ತಾ?

    ಇದರ ನಂತರ, ಡಾರ್ಲಿಂಗ್ ನಟ ಪ್ರಭಾಸ್ ಜೊತೆ ಪ್ಯಾನ್ ಇಂಡಿಯಾ ಸಿನಿಮಾ ರಾಧೆ ಶ್ಯಾಮ್ ಚಿತ್ರದ ಬಿಡುಗಡೆಯನ್ನು ಹೊಂದಿದ್ದಾರೆ ಪೂಜಾ ಹೆಗ್ಡೆ. ನಟಿಯ ಮತ್ತೊಂದು ಬಹು ನಿರೀಕ್ಷಿತ ಸಿನಿಮಾ ಅಂದರೆ ಅದು ಮೆಗಾ ಸ್ಟಾರ್ ಚಿರಂಜೀವಿ ತೆರೆ ಮೇಲೆ ಮಿಂಚಲಿರುವ ಆಚಾರ್ಯ‘. ಇದಿಷ್ಟು ಸೌತ್ ಸಿನಿಮಾಗಳ ಪಟ್ಟಿಯಾದರೆ, ಮತ್ತೊಂದೆಡೆ ಬುಟ್ಟ ಬೊಮ್ಮಾ ಎರಡು ಬಾಲಿವುಡ್ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ನಟ ರಣ್​ವೀರ್ ಸಿಂಗ್ ಜೊತೆ ರೋಹಿತ್ ಶೆಟ್ಟಿ ನಿರ್ದೇಶನದ ಸರ್ಕಸ್ಚಿತ್ರದಲ್ಲಿ ಪೂಜಾ ನಟಿಸಿದ್ದು, ಈ ಸಿನಿಮಾ ಜುಲೈ 15 ರಂದು ಬಿಡುಗಡೆಯಾಗಲಿದೆ. ಇನ್ನು, ನಟ ಸಲ್ಮಾನ್ ಖಾನ್ ಜೊತೆ ಪೂಜಾ ನಟಿಸಲಿರುವ ಕಭಿ ಈದ್ ಕಭೀ ದಿವಾಳಿಸಿನಿಮಾ ಶೂಟಿಂಗ್ ಆರಂಭಿಸಿದರೆ, 2022ರ ಆಕ್ಟೋಬರ್​ನಲ್ಲಿ ರಿಲೀಸ್ ಆಗುತ್ತಂತೆ.

    ಜಗನ್ ಮನಸ್ಸು ಗೆದ್ದ ಚಿರಂಜೀವಿ! ಹೊಸ ಟಿಕೆಟ್ ಬೆಲೆ ಕಾಯ್ದೆ ರದ್ದು?

    ಅಲ್ಲು ಅರ್ಜುನ್ ಮಗಳ ಜೊತೆ ಕುಣಿದ ಪೂಜಾ ಹೆಗ್ಡೆ! ಯಾವ ಹಾಡು ಗೊತ್ತಾ? ವಿಡಿಯೋ ವೈರಲ್…

    ‘ಅವಳ ಖುಷಿಯೇ, ನನ್ನ ಖುಷಿ’ ಎಂದ ನಾಗ ಚೈತನ್ಯ! ಯಾರದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts